ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಜಿ.ಟಿ ನಾಯ್ಕ ಅವರನ್ನ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷ ಆಯ್ಕೆ ಮಾಡುವಂತೆ ಕಾರವಾರ ವ್ಯಾಪರಸ್ಥರ ಪರವಾಗಿ ಸಂತೋಷ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಕೆಲಸ ಆಗಬೇಕಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಿನ್ನಡೆಯಿದ್ದು ಕೈಗಾರಕೆಗಳು ಇಲ್ಲದೇ ಜನರು ನಿರುದ್ಯೋಗ ಸಮಸ್ಯೆಯಿಂದ ಪದದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಆಗಬೇಕಾದರೆ ಯುವಕ, ಅಭಿವೃದ್ಧಿ ಮನಸ್ಸಿನ ವ್ಯಕ್ತಿ ಸಂಸದರಾಗಬೇಕಾಗಿದೆ. ಈ ನಿಟ್ಟಿನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿರುವ ಜಿ.ಟಿ ನಾಯ್ಕ ಅವರಿಗೆ ಕಾಂಗ್ರೆಸ್ ಟಿಕೇಟ್ ಕೊಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಕಾರವಾರದ ಅಂಗಡಿಕಾರರ ಪರ ಜಿ.ಟಿ ನಾಯ್ಕ ಇದ್ದು ವಕೀಲರಾಗಿ ಜನರ ಸಮಸ್ಯೆಗೆ ಸ್ಪಂಧಿಸುತ್ತಿದ್ದಾರೆ. ಜಿಲ್ಲೆಯ ಮೂಲದ ವ್ಯಕ್ತಿಗೆ ಈ ಬಾರಿ ಕಾಂಗ್ರೆಸ್ ಟಿಕೇಟ್ ಸಿಕ್ಕರೆ ಗೆಲುವು ಸುಲಭವಾಗಲಿದೆ, ಈ ನಿಟ್ಟಿನಲ್ಲ ಪಕ್ಷದ ನಾಯಕರು ಜಿ.ಟಿ ನಾಯ್ಕ ಅವರನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲಿ ಎಂದು ಸಂತೋಷ ಶೆಟ್ಟಿ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅಂಗಡಿಕಾರರಾದ ಶಿವಾನಂದ ಗೌಂಡಲಕರ್, ಖಲೀಂ ಶೇಖ್, ಮೋಹನ್ ಶೆಟ್ಟಿ, ದೇವನಂದ, ಅಶೋಕ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.