ಅಂಕೋಲಾ: ಕಳೆದ 9 ದಿನದ ಹಿಂದೆ ನಿಗೂಡವಾಗಿ ನಾಪತ್ತೆಯಾಗಿದ್ದ ಭಾವಿಕೇರಿಯ ಅರವಿಂದ ನಾಯಕ (48) ಶವವಾಗಿ ಭಾವಿಕೇರಿಯ ದುಣ್ಣೆ ಕೆರೆಯಲ್ಲಿ ಗುರುವಾರ ಮಧ್ಯಾಹ್ನ ಪತ್ತೆಯಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿವಿಧ ಆಯಾಮಗಳಲ್ಲಿ ಅರವಿಂದ ನಾಯಕ ಅವರ ಸಾವಿನ ಕಾರಣದ ಕುರಿತಾಗಿ ಆಳವಾಗಿ ತನಿಖೆಗೆ ಮುಂದಾಗಿದ್ದಾರೆ. ಯಾರಾದರೂ ಕೊಲೆ ಮಾಡಿದ್ದಾರೆಯೆ ಅಥವಾ ಆಕಸ್ಮಿಕ ಸಾವೆ ಇಲ್ಲವೆ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆಯೆ ಎಂದು ಪೊಲೀಸರು ತನಿಖೆಗೆ ಇಳಿದಿದ್ದು, ಮರೋಣೋತ್ತರ ಪರೀಕ್ಷೆಯ ನಂತರವೆ ಪೊಲೀಸರು ಸ್ಪಷ್ಠ ನಿಲುವಿಗೆ ಬರಲು ತಿರ್ಮಾನಿಸಿದ್ದಾರೆ.
ಭಾವಿಕೇರಿಯ ಅರವಿಂದ ವೆಂಕಟ್ರಮಣ ನಾಯಕ ಅವರ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಭಾವಿಕೇರಿಯ ದೊಣ್ಣೆ ಕೆರೆಯಲ್ಲಿ ಕೇವಲ ಸೊಂಟದ ತನಕ ನೀರಿದೆ. ಈ ನೀರಿನಲ್ಲಿ ಅರವಿಂದ ನಾಯಕ ಹೇಗೆ ಮುಳಗಿ ಸತ್ತ ಎನ್ನುವದು ಹಲವರ ಪ್ರಶ್ನೆಯಾಗಿದೆ.
ಸರಳ ಸ್ವಭಾವದ ಅರವಿಂದ ವೆಂಕಟ್ರಮಣ ನಾಯಕ ವೈಯಕ್ತಿಕ ಜೀವನದಲ್ಲಿ ಅನೇಕ ನೋವುಗಳನ್ನು ಅನುಭವಿಸಿದ್ದ. ಭಾವಿಕೇರಿಯ ತನ್ನ ಹಳೆಯ ಮನೆಯಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದ ಈತ ಆತ್ಮಹತ್ಯೆಯಂಥ ಕೃತ್ಯಕ್ಕೆ ಇಳಿಯದ ವ್ಯಕ್ತಿತ್ವ ಅವನಲ್ಲಿತ್ತು. ಹಾಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೆ ಇದ್ದಿದ್ದರೆ ತಾನು ಒಬ್ಬಂಟಿಯಾಗಿ ಇರುತ್ತಿದ್ದ ಮನೆಯಲ್ಲೆ ಮಾಡಿಕೊಳ್ಳಬಹುದಿತ್ತು. ಈ ಸಾವಿನ ಹಿಂದೆ ಬೇರೆಯೆ ಮರ್ಮ ಇರುಬಹುದು ಎಂದು ನಾಗರಿಕರು ಸಂಶಯ ವ್ಯಕ್ತಪಡಿಸಿದ್ದಾರೆ.