ಶಿರಸಿ: ಜಿಲ್ಲೆಯ ಹಳಿಯಾಳ, ಜೋಯಿಡಾ, ಯಲ್ಲಾಪುರ, ಮುಂಡಗೋಡ ಬನವಾಸಿ ಹಾಗೂ ಕಾರವಾರ ಮತ್ತು ಶಿರಸಿ ಅಲ್ಲದೇ ಬೆಳಗಾಂವ ಜಿಲ್ಲೆಯ ಖಾನಾಪೂರ ಮತ್ತು ಕಿತ್ತೂರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕ್ಷತ್ರಿಯ ಮರಾಠ ಸಮುದಾಯದ ಹಾಗೂ ನಮ್ಮ ಸಮುದಾಯದ ಉಪ ಪಂಗಡವರ ಮತದಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ನಮ್ಮ ಸಮುದಾಯದ ಮುಖಂಡರಾಗಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿಯಾಗಿರುವ ಜಿ.ಎಚ್.ಮರೋಜಿ ರಾವ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಕೆನರಾ ಲೋಕಸಭಾ ಕ್ಷೇತ್ರದ ಟಿಕೇಟ್ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಕಾರ್ಯದರ್ಶಿ ಹಾಗೂ ಕ್ಷತ್ರಿಯ ಮರಾಠ ಸಮುದಾಯದ ಜಿಲ್ಲಾ ಮುಖಂಡ ಪಾಂಡುರಂಗ ವಿ.ಪಾಟೀಲ್ ಆಗ್ರಹಿಸಿದ್ದಾರೆ.
1984ರಿಂದ ಜಿ.ಎಚ್.ಮರೋಜಿ ರಾವ್ ಅವರು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ (ಎನ್ಎಸ್ಯುಐ) ಘಟಕ ನಂತರ ಹಿಂದುಳಿದ ವರ್ಗಗಳ ಕಾಂಗ್ರೇಸ್ ವಿಭಾಗದಲ್ಲಿ ಮತ್ತು ಕೆಪಿಸಿಸಿಯಲ್ಲಿ ರಾಜ್ಯ ಪದಾಧಿಕಾರಿಯಾಗಿ ಈಗ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿಯಾಗಿ ಕಾಂಗ್ರೇಸ್ ಪಕ್ಷದ ಸಂಘಟನೆ ಮತ್ತು ಹೋರಾಟದಲ್ಲಿ ಕಳೆದ 40 ವರ್ಷಗಳಿಂದ ನಿರಂತರವಾಗಿ ಪಕ್ಷ ಸಂಘಟನೆ ಮತ್ತು ಹೋರಾಟದಲ್ಲಿ ತೋಡಗಿದ್ದಾರೆ. ಹಾಗಾಗಿ ಇವರಿಗೆ ಸಾಮಾಜಿಕ ನ್ಯಾಯ ಹಾಗೂ ನಾಯಕತ್ವ ಮತ್ತು ಮರಾಠ ಜನಾಂಗದ ಕೋಟಾದಲ್ಲಿ ಈ ಬಾರಿ ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಟಿಕೇಟ್ ನೀಡುವಂತೆ ಆಗ್ರಹಿಸಿದ್ದಾರೆ.
ನಿಯೋಗ: ಅ.15ರಂದು ಶಿರಸಿಗೆ ಆಗಮಿಸುತ್ತಿರುವ ರಾಜ್ಯದ ಹಿರಿಯ ಸಚಿವ ಎಚ್.ಕೆ ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪಕ್ಷದ ಶಾಸಕರುಗಳಿಗೆ ಹಾಗೂ ಎಲ್ಲಾ ಕಾಂಗೇಸ್ ಜಿಲ್ಲಾ ಹಾಗೂ ತಾಲೂಕಾ ಮುಖಂಡರುಗಳಿಗೆ ಕ್ಷತ್ರಿಯ ಮರಾಠ ಸಮುದಾಯದವರ ಜಿಲ್ಲಾ ನಿಯೋಗ (ತಂಡ) ಭೇಟಿಯಾಗಿ ಜಿ.ಎಚ್.ಮರೋಜಿ ರಾವ್ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೇಟ್ ನೀಡುವಂತೆ ವಿನಂತಿಸುವುದಾಗಿ ಜಿಲ್ಲಾ ಕ್ಷತ್ರಿಯ ಮರಾಠ ಸಮುದಾಯ ಮುಖಂಡ ಪಾಂಡುರಂಗ ವಿ.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.