Slide
Slide
Slide
previous arrow
next arrow

ಮುರುಡೇಶ್ವರ ಕಡಲತೀರದ ನಿರ್ಬಂಧ ತೆರವು ; ಚುರುಕುಗೊಂಡ ಪ್ರವಾಸೋದ್ಯಮ

300x250 AD

ಭಟ್ಕಳ: ವಿಶ್ವ ಪ್ರಸಿದ್ದ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಮತ್ತೆ ಆರಂಭಗೊಂಡಿದ್ದು, ಸಮುದ್ರ ತೀರದಲ್ಲಿನ ಸಾಹಸ ಆಟಗಳಿಗೂ ಅನುಮತಿ ಸಿಕ್ಕಿದೆ. ಹೀಗಾಗಿ ಪ್ರವಾಸಿಗರು ಮುರುಡೇಶ್ವರದತ್ತ ಹೆಚ್ಚಾಗಿ ಆಗಮಿಸುತ್ತಿದ್ದಾರೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರವಾಸಿಗರಿಗೆ ಕಡಲ ತೀರದ ಪ್ರವೇಶಕ್ಕೆ ಸಂಪೂರ್ಣವಾಗಿ ನಿರ್ಬಂಧವನ್ನು ಹೇರಲಾಗಿತ್ತು. ಇದೇ ವೇಳೆಗೆ ಇಲ್ಲಿನ ಸ್ಥಳೀಯ ಲೈಪ್ ಗಾರ್ಡ ಸಿಬ್ಬಂದಿಗಳ ಮಾತನ್ನು ದಿಕ್ಕರಿಸಿ ಹೋದ ಇಬ್ಬರು ಪ್ರವಾಸಿಗರು ಜೀವ ಬಿಟ್ಟಿದ್ದರು. ಈ ಅಂಶಗಳನ್ನು ಗಮನಿಸಿದ ಜಿಲ್ಲಾಢಳಿತ ಸಮುದ್ರ ತೀರಕ್ಕೆ ತೆರಳುವ ಎಲ್ಲಾ ಮಾರ್ಗವನ್ನು ಬ್ಯಾರಿಗೇಟ್ ಹಾಕಿ ಬಂದ್ ಮಾಡಿ ಪ್ರವಾಸಿಗರಿಗೆ ನಿರ್ಬಂದ ಹೇರಿತ್ತು. ಇನ್ನು ಮಳೆಗಾಲದಲ್ಲಿ ಸಮುದ್ರವು ತೀವ್ರವಾಗಿ ಪ್ರಕ್ಷುಬ್ಧಗೊಳ್ಳುವುದರಿಂದ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿತ್ತು.

ಕಳೆದ ಎರಡು ಮೂರು ದಿನದ ಹಿಂದೆ ಜಿಲ್ಲಾಢಳಿತ ಮುರುಡೇಶ್ವರ ಸಮುದ್ರ ತೀರದ ಮಾರ್ಗ ನಿರ್ಬಂಧವನ್ನು ತೆಗೆದುಹಾಕಲಾಗಿದ್ದು, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಮತಿಯನ್ನು ನೀಡಲಾಯಿತು. ಇದರಿಂದ ಕಳೆದ ಎರಡು ಮೂರು ದಿನದಿಂದಿಚೆಗೆ ಮುರುಡೇಶ್ವರ ಸಮುದ್ರ ತೀರದಲ್ಲಿ ಪ್ರವಾಸಿಗರ ಮೋಜು ಮಸ್ತಿಗಳು ಹೆಚ್ಚಾಗಿದ್ದು, ಸಮುದ್ರ ನೀರಿನಲ್ಲಿ ಮಿಂದೆಳ್ಳುತ್ತಿದ್ದಾರೆ.

ಜಿಲ್ಲಾಢಳಿತ ಹಾಕಿದ ನಿರ್ಬಂಧ ಮೋಜು ಮಸ್ತಿ ಮಾಡುವ ಉದ್ದೇಶಕ್ಕಾಗಿಯೇ ಬರುವ ಪ್ರವಾಸಿಗರಿಗೆ ಇದು ಒಂದು ರೀತಿಯಲ್ಲಿ ಇರಿಸು ಮುರುಸು ಮಾಡುತ್ತಿತ್ತು ಹಾಗೇ ಒಮ್ಮೊಮ್ಮೆ ಪೋಲಿಸರ ಮಾತನ್ನು ಧಿಕ್ಕರಿಸಿ ಕಡಲಿಗಿಳಿದು ಅನಾಹುತ ಆಗಿದ ಘಟನೆಗಳು ನಡೆದಿತ್ತು. ಸದ್ಯ ಕಡಲು ಶಾಂತವಾಗಿದ್ದು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಕಡಲ ತೀರದಲ್ಲಿ ಬೋಟಿಂಗ್ ಸೇರಿದಂತೆ ಇನ್ನಿತರ ರೀತಿಯ ಗೇಮ್ಸಗಳು ಆರಂಭಗೊಂಡಿದ್ದು ಪ್ರವಾಸಿಗರ ಖುಷಿಗೆ ಪಾರವೇ ಇಲ್ಲದಂತಾಗಿದೆ.

300x250 AD

 
ಎಲ್ಲಾ ವಿಧದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಚಾಲನೆಯು ಸ್ಥಳೀಯವಾಗಿ ದುಡಿವೆ ಮಾಡುವ ಜನರ ಉದ್ಯೋಗಕ್ಕೆ ಅನೂಕೂಲವಾಗಿದ್ದು, ವ್ಯಾಪಾ ವಹಿವಾಟುಗಳು ಹೆಚ್ಚಾಗಿವೆ. ಪ್ರವಾಸಿಗರು ಮೈಚಳಿ ಬಿಟ್ಟು ಕಡಲಲ್ಲಿ ಉರುಳಾಡಿ ಸಂಭ್ರಮಿಸುವ ದೃಶ್ಯಗಳು ಸಾಮಾನ್ಯವಾಗಿತ್ತು. ಈ ಮೂಲಕ ಮುರುಡೇಶ್ವರ ಪ್ರವಾಸೋದ್ಯಮವನ್ನೇ ನಂಬಿಕೊಂಡು ಬದುಕು ನಡೆಸುವ ಫೋಟೋಗ್ರಾಪರ್, ಕುದುರೆ, ಒಂಟೆ ಸವಾರರು ಮತ್ತು ಅಂಗಡಿಕಾರರಿಗೆ ಆರ್ಥಿಕವಾಗಿ ಅನುಕೂಲವಾಗುತ್ತಿದೆ. ಇನ್ನು ದೇವರ ದರ್ಶನಕ್ಕೆ ಎಂದಿಗಿಂತಲೂ ಹೆಚ್ಚು ಜನರು ಬರುತ್ತಲಿದ್ದು, ಇದರ ಜೊತೆಗೆ ಸಮುದ್ರಕ್ಕಿಳಿದು ಸಂಭ್ರಮಿಸಲು ಸಹ ಪ್ರವಾಸಿಗರಿಗೆ ಡಬಲ್ ಸಂತಸ ಸಿಕ್ಕಂತಾಗಿದೆ.

  • ರಾಜ್ಯದ ಕರಾವಳಿ ಭಾಗದಲ್ಲಿರುವ ಮುರುಡೇಶ್ವರದ ಕಡಲ ತೀರ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈ ಹಿಂದೆ ಮುಂಗಾರು ವೇಳೆ ಇಬ್ಬರು ಪ್ರವಾಸಿಗರು ಸಮುದ್ರಕ್ಕೆ ಈಜಲು ಹೋಗಿ ಸಾವನ್ನಪ್ಪಿದರು ಮತ್ತು ಮಳೆಗಾಲದ ವೇಳೆ ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ ಬೀಚ್ ಪ್ರವೇಶ ನಿರ್ಬಂಧಿಸಲಾಗಿತ್ತು. ಪ್ರವಾಸಿಗರಿಗೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸಲಾಗಿದ್ದು ಎಚ್ಚರಿಕೆಯಿಂದ ಸಮುದ್ರ ತೀರದಲ್ಲಿ ವಿಹರಿಸಬೇಕು.

           –  ದತ್ತಾಯ್ರೇಯ ಶೆಟ್ಟಿ (ಮುರುಡೇಶ್ವರ ಬೀಚ್ ಸುಪರ್‌ವೈಸರ್)

  • ಪ್ರತಿ ವರ್ಷ ಈ ಸಮಯದಲ್ಲಿ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬರಲಿದ್ದೇವೆ. ಕುಟುಂಬ ಸಮೇತರಾಗಿ ಬಂದು ಸಮುದ್ರದಲ್ಲಿ ಆಟವಾಡಿ ಸಮಯ ಕಳೆದುಹೋಗಲಿದ್ದೇವೆ. ಮುರುಡೇಶ್ವರ ಪ್ರದೇಶವು ಇನ್ನು ಹೆಚ್ಚು ಅಭಿವೃದ್ಧಿಯಾಗಬೇಕಾಗಿದೆ.

         –  ಮಲ್ಲಿಕಾರ್ಜುನ ದಾವಣಗೆರೆ (ಪ್ರವಾಸಿಗ)

Share This
300x250 AD
300x250 AD
300x250 AD
Back to top