ಮುಂಡಗೋಡ : ಗೋವಿನಜೋಳ ಗದ್ದೆಗಳಿಗೆ ಸೈನಿಕ ಹುಳಗಳ ಕಾಟದಿಂದ ಗೋವಿನಜೋಳದಂಟುಗಳು ಕಾಣುತ್ತಿವೆ
ತಾಲೂಕಿನ ತಮ್ಯಾನಕೊಪ್ಪ ಗ್ರಾಮದಲ್ಲಿ ಸನವಳ್ಳಿ ಭಾಗದ ರೈತರಾದ ಮಂಜು ಕೋಣನಕೇರಿ, ದೇವರಾಜ ಹುನಗುಂದ, ಸುರೇಶ ಕೆರಿಹೊಲದವರ್, ಮಾರುತಿ ಕಳಸಗೇರಿ, ನೀಲಪ್ಪ ಪೂಜಾರ, ಮಾರುತಿ ಕೋಣನಕೇರಿ, ಸಹದೇವಪ್ಪ ಕೆರಿಹೊಲದವರ್, ರಮೇಶ ಕೆರಿಹೊಲದವರ್ ಅವರು ಸುಮಾರು 10 ಎಕರೆ ಪ್ರದೇಶದಲ್ಲಿ ಬೆಳೆದ ಗೋವಿನಜೋಳ ಬೆಳೆಗೆ ಸೈನಿಕ ಹುಳುವಿನ ಬಾಧೆ ಕಂಡುಬಂದಿದೆ.
ಬೆವರು ಸುರಿಸಿ ಬೆಳೆದ ಬೆಳೆ ರೈತರ ಕೈಸೇರುವ ಹೊತ್ತಲ್ಲಿ ಎಲ್ಲವೂ ಸೈನಿಕ ಹುಳುವಿನ ಪಾಲಾಗುತ್ತಿದೆ. ಈ ಸೈನಿಕ ಹುಳುಗಳು ಗೋವಿನಜೋಳದ ಸುಳಿಯಲ್ಲಿ ಹೊಕ್ಕು ಎಲೆಗಳನ್ನೆಲ್ಲ ತಿಂದು ಕೇವಲ ದಂಟನ್ನು ಮಾತ್ರ ಉಳಿಸುತ್ತದೆ.
ಸೈನಿಕ ಹುಳು ಬಾಧೆಯ ಲಕ್ಷಣಗಳು :
ಸೈನಿಕ ಹುಳು ಭೂಮಿ ಒಳಗಡೆ ಸುಮಾರು 30 ಸೆಂಟಿ ಮೀಟರ್ ಆಳದಲ್ಲಿ ನೆಲೆಸಿರುತ್ತದೆ. ಒಂದೊಂದು ಸೈನಿಕ ಹುಳುಗಳು 800 ಕ್ಕೂ ಹೆಚ್ಚು ಮೊಟ್ಟೆ ಇಡುತ್ತದೆ. ಮಳೆ ಯಾದಾಗ ಇಲ್ಲವೆ ವಾತಾವರಣದಲ್ಲಿ ಬದಲಾವಣೆಯಾದಾಗ ಮರಿಗಳಾಗಿ ಹೊರಬಂದು ಗೋವಿನ ಜೋಳ, ಭತ್ತ ಸೇರಿದಂತೆ ಏಕದಳ ಬೆಳೆ ಮತ್ತು ಕಳೆಗಳನ್ನು ತಿನ್ನುತ್ತದೆ.