Slide
Slide
Slide
previous arrow
next arrow

ಭಾರತದ ಜೊತೆಗಿನ ಸಂಬಂಧ ಪ್ರಮುಖ ಎಂದ ಕೆನಡಾ ರಕ್ಷಣಾ ಸಚಿವ

300x250 AD

ನವದೆಹಲಿ: ಭಾರತದೊಂದಿಗಿನ ಸಂಬಂಧವನ್ನು ಪ್ರಮುಖವಾದುದು ಎಂದು  ಕೆನಡಾದ ರಕ್ಷಣಾ ಸಚಿವ ಬಿಲ್ ಬ್ಲೇರ್ ಹೇಳಿದ್ದಾರೆ. ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆಯ ತನಿಖೆಯು ಮುಂದುವರಿಯುತ್ತಿರುವ ನಡುವೆಯೂ ಇಂಡೋ-ಪೆಸಿಫಿಕ್ ತಂತ್ರದಂತಹ ಪಾಲುದಾರಿಕೆಯನ್ನು ತಮ್ಮ ದೇಶವು ಮುಂದುವರಿಸುತ್ತದೆ ಎಂದು ಅವರು ಹೇಳಿದ್ದಾರೆ.

ದಿ ವೆಸ್ಟ್ ಬ್ಲಾಕ್‌ನಲ್ಲಿ ಭಾನುವಾರ ಪ್ರಸಾರವಾದ ಸಂದರ್ಶನವೊಂದರಲ್ಲಿ, ಬ್ಲೇರ್ ಅವರು ಕೆನಡಾವು ಭಾರತದ ಜೊತೆಗಿನ ಪಾಲುದಾರಿಕೆಗಳನ್ನು ಮುಂದುವರಿಸಬೇಕು, ಆದರೆ ಆರೋಪಗಳ ತನಿಖೆಯೂ ಮುಂದುವರಿಯಬೇಕು ಎಂದರು. ಅಲ್ಲದೇ, ಭಾರತದೊಂದಿಗಿನ ಸಂಬಂಧವನ್ನು ಪ್ರಮುಖ ಎಂದು ಕರೆದರು.

“ಭಾರತದೊಂದಿಗಿನ ನಮ್ಮ ಸಂಬಂಧಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಬೆಳವಣಿಗೆ ಸವಾಲಿನ ಸಮಸ್ಯೆಯಾಗಿರಬಹುದು, ಈ ಬಗ್ಗೆ ಕೂಲಂಕುಷ ತನಿಖೆಯ ಅಗತ್ಯವಿದೆ” ಎಂದಿದ್ದಾರೆ. ಜೂನ್ 18 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್  ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದರು ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಸ್ಫೋಟಕ ಆರೋಪಗಳ ನಂತರ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಕೆನಡಾ ಆರೋಪವನ್ನು ಭಾರತ ಬಲವಾಗಿ ತರಸ್ಕರಿಸಿದೆ. ಭಾರತವು 2020 ರಲ್ಲಿ ನಿಜ್ಜರನ್ನು ಭಯೋತ್ಪಾದಕ ಎಂದು ಹೆಸರಿಸಿತ್ತು.

300x250 AD

ಭಾರತವು ಕೆನಡಾದ ಆಪಾದನೆಗಳನ್ನು ಅಸಂಬದ್ಧ ಮತ್ತು ಪ್ರೇರಿತು ಎಂದು ಉಲ್ಲೇಖಿಸಿ ತಿರಸ್ಕರಿಸಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಯನ್ನು ಒಟ್ಟಾವಾ ಉಚ್ಚಾಟನೆ ಮಾಡಿದ ತರುವಾಯ ಪ್ರತಿಕ್ರಿಯೆ ಎಂಬಂತೆ ಭಾರತದಲ್ಲಿನ ಕೆನಡಾ ಅಧಿಕಾರಿಯನ್ನು ಭಾರತ ಬಿಟ್ಟು ಹೋಗುವಂತೆ ಆದೇಶಿಸಿದೆ.

“ವಿಶ್ವಾಸಾರ್ಹ ಗುಪ್ತಚರ” ದ ಮೊದಲು ಕೆನಡಾವು ಭಾರತದೊಂದಿಗೆ ಆಳವಾದ ವ್ಯಾಪಾರ, ರಕ್ಷಣೆ ಮತ್ತು ವಲಸೆ ಸಂಬಂಧಗಳನ್ನು ಬಯಸುತ್ತಿದೆ ಎಂದು ಟ್ರೂಡೊ ಕರೆದರು, ಇದನ್ನು ಮೊದಲು ಕೆನಡಾದ ಅಧಿಕಾರಿಗಳೊಂದಿಗೆ ಬೆಳೆಸಲಾಯಿತು ಎಂದು ಗ್ಲೋಬಲ್ ನ್ಯೂಸ್ ವರದಿ ಮಾಡಿದೆ.

Share This
300x250 AD
300x250 AD
300x250 AD
Back to top