ಅಂಕೋಲಾ: ಸ್ವಚ್ಚತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಇಲ್ಲಿನ ಪುರಸಭೆ ಜನರಲ್ಲಿ ಜಾಗ್ರತಿ ಮೂಡಿಸುವುದರ ಜೊತೆಗೆ ಮನೆ ಮನೆಯಿಂದ ಪ್ರತ್ಯೇಕವಾಗಿ ಕಸವನ್ನು ಸಂಗ್ರಹಿಸಿ ಅದನ್ನು ವಾಹನದ ಮೂಲಕ ವಿಲೇವಾರಿ ಮಾಡುತ್ತಿದೆ. ಆದರೆ ರಸ್ತೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಚಗೊಳಿಸಿ ಸಂಗ್ರಹಿಸಿದ ಕಸವನ್ನು ಮಾತ್ರ ಸ್ಥಳಾಂತರಿಸದೇ ಇರುವುದು ತುಂಬಾ ಖೇದಕರ ವಿಷಯವಾಗಿದೆ.
ನಗರದ ಗಣಪತಿ ಗಲ್ಲಿಯಲ್ಲಿಯಲ್ಲಿರುವ ಗಣಪತಿ ದೇವಸ್ಥಾನದಿಂದ ನಗರದ ಮುಖ್ಯ ರಸ್ಥೆ ಸೇರುವಲ್ಲಿಯವರೆಗೂ ಕಸದ ರಾಶಿಯೇ ತುಂಬಿಕೊ0ಡಿದ್ದು, ನಗರಸಭೆಯ ಸಂಬ0ದಪಟ್ಟ ಅಧಿಕಾರಿಗೆ ಹೇಳಿದರೆ ನಾಳೆ ಬರುತ್ತೇವೆ ಎಂಬ ಉತ್ತರ ಬಿಟ್ಟರೆ ಕಸ ವಿಲೇವಾರಿ ಮಾತ್ರ ಆಗುತ್ತಿಲ್ಲ. ಇದರಿಂದಾಗಿ ಗಬ್ಬು ವಾಸನೆ ಬರುತ್ತಿದ್ದು, ಈ ರಸ್ತೆಯ ಮೂಲಕ ಓಡಾಡುವ ಸಾರ್ವಜನಿಕರಿಗೆ ತುಂಬಾ ಅಸಹ್ಯ ಎನಿಸುತ್ತಿದೆ. ಈ ಭಾಗದ ಉತ್ಸಾಹಿ ಪುರಸಭೆ ಸದಸ್ಯನ ರಾಜಿನಾಮೆಯಿಂದಾಗಿ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತದೆ.
ಈ ರಸ್ತಯೆಯಲ್ಲಿ ಬೀದಿನಾಯಿಗಳ ಹಾವಳಿಯೂ ಹೆಚ್ಚಾಗಿದ್ದು, ಈ ರಸ್ತೆಯ ಮೂಲಕ ಓಡಾಡುವ ಶಾಲಾ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ತೀವ್ರ ನರಕಯಾತನೆ ಅನುಭವಿಸುವಂತಾಗಿದೆ. ಪಕ್ಕದಲ್ಲಿಯೇ ವಿದ್ಯಾರ್ಥಿನಿಯರ ಹಾಸ್ಟೇಲ್ ಸಹ ಇದೆ. ಆದ್ದರಿಂದ ಪುರಸಭೆಯ ಅಧಿಕಾರಿಗಳು ಈ ಕುರಿತು ಸೂಕ್ತ ಗಮನ ನೀಡಿ ಸ್ವಚ್ಚತಾ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎನ್ನುವುದು ಈ ಭಾಗದ ಹಲವಾರು ಪ್ರಜ್ಞಾವಂತ ಸಾರ್ವಜನಿಕರ ಅಭಿಪ್ರಾಯವಾಗಿದೆ.