Slide
Slide
Slide
previous arrow
next arrow

ಎನ್‌.ಎಚ್‌.ಎ.ಐ, ಐ.ಆರ್‌.ಬಿ ಸ್ಪಂದಿಸುತ್ತಿಲ್ಲ: ಡಿಸಿ

300x250 AD

ಕಾರವಾರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಅವ್ಯವಸ್ಥೆಗಳಿದ್ದರೂ ಅದನ್ನ ಸರಿಪಡಿಸುವ ನೇತೃತ್ವ ವಹಿಸಬೇಕಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಮ್ಮ ನಿಯಂತ್ರಣಕ್ಕೆ ಬರುತ್ತಿಲ್ಲ. ಗುತ್ತಿಗೆ ಕಂಪನಿ ಐಆರ್‌ಬಿ ಕಡೆಯಿಂದಲೂ ಯಾವುದೇ ನಿರೀಕ್ಷಿತ ಸ್ಪಂದನೆ ಸಿಗದಿರುವುದು ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗುವಂತಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅಸಾಯಕರಂತೆ ಬೇಸರ ತೋಡಿಕೊಂಡಿದ್ದಾರೆ.

ಮಾಧ್ಯಮಗಳೊAದಿಗೆ ಮಾತನಾಡಿದ ಅವರು, ರಾ.ಹೆ.66ರ ಪ್ರಗತಿ ಹಾಗೂ ಸಮಸ್ಯೆಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವರದಿ ಕೇಳಿದ್ದೇನೆ. ಈವರೆಗೆ ಕಾರವಾರದ ಸುರಂಗಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಿರುವುದರಿಂದ ಅಲ್ಲಿ ಸಂಚಾರಕ್ಕೆ ಅವಕಾಶ ನೀಡಿಲ್ಲ. ಗುತ್ತಿಗೆ ಕಂಪನಿ ಐಆರ್‌ಬಿ ಸರಿಯಾಗಿ ರಸ್ತೆ ನಿರ್ಮಾಣ ಮಾಡಿಲ್ಲ, ಅರ್ಧಂಬರ್ಧ ರಸ್ತೆಗಳನ್ನ ಮಾಡಿದ್ದಾರೆ, ಸಂಪರ್ಕ ರಸ್ತೆ, ಸೇತುವೆಗಳನ್ನ ಮಾಡಿಲ್ಲ, ಚರಂಡಿಗಳ ನಿರ್ಮಾಣವಾಗಿಲ್ಲ ಎಂಬ ಸಾಕಷ್ಟು ದೂರುಗಳಿವೆ. ರಸ್ತೆ ಗುಣಮಟ್ಟದ ಬಗ್ಗೆಯೂ ದೂರಿದೆ. 2014ರಲ್ಲಿ ಪ್ರಾರಂಭವಾದ ಹೆದ್ದಾರಿ ಕಾಮಗಾರಿ 9 ವಷÀð ಕಳೆಯುತ್ತಿದ್ದರೂ ಪೂರ್ಣಗೊಳಿದಿರುವುದು ಬೇಸರದ ಸಂಗತಿಯೇ ಸರಿ ಎಂದರು.

ಎನ್‌ಎಚ್‌ಎಐ ಹಾಗೂ ಐಆರ್‌ಬಿ ಹೆದ್ದಾರಿ ನಿರ್ಮಾಣದ ವೇಳೆ ರಸ್ತೆ ಸುರಕ್ಷತೆ ಕ್ರಮಗಳನ್ನ ಕೂಡ ಕೈಗೊಳ್ಳಬೇಕಿದೆ. ಅವರ ಮೇಲೆ ಒತ್ತಡ ಹೇರಲೆಂದು ಕಾರವಾರದ ಸುರಂಗವನ್ನ ಮುಚ್ಚಿಸಲಾಗಿತ್ತು. ಆದರೆ ಅದರಿಂದ ಅವರಿಗೆ ಯಾವುದೇ ಒತ್ತಡ ಬಿದ್ದಿಲ್ಲ, ಬದಲಿಗೆ ಜಿಲ್ಲಾಡಳಿತಕ್ಕೆ ಹಾಗೂ ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ಯಾವುದೇ ಇಲಾಖೆಯು ಜಿಲ್ಲಾಡಳಿತಕ್ಕೆ ಸಂಬAಧಪಡುತ್ತದೆ ಅಥವಾ ಸಣ್ಣಪುಟ್ಟ ನಿಯಂತ್ರಣದ ಅಧಿಕಾರ ಜಿಲ್ಲಾಧಿಕಾರಿಗೆ ಇರುತ್ತದೆಂದು ಸರ್ಕಾರ ಹೇಳುತ್ತದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಮ್ಮ ನಿಯಂತ್ರಣಕ್ಕೇ ಬರುತ್ತಿಲ್ಲ. ಅವರ ಅಧಿಕಾರಿಗಳು ಜಿಲ್ಲಾಡಳಿತದ ಸಭೆಗೆ ಬರುತ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೂ ತಿಳಿಸಿದ್ದೇವೆ. ನಮಗೆ ಐಆರ್‌ಬಿ ಕಡೆಯಿಂದಲೂ ಸ್ಪಂದನೆ ಇಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದರು.

300x250 AD

ಹೆದ್ದಾರಿಯ ಶೇ 75ರಷ್ಟು ಕಾಮಗಾರಿ ಪೂರ್ಣಗೊಂಡರೆ ಮಾತ್ರ ಟೋಲ್ ಸಂಗ್ರಹಿಸಲು ಮತ್ತು ದರ ಏರಿಕೆಗೆ ಅವಕಾಶ ಇರುತ್ತದೆ. ಆದರೆ ಅಲ್ಲಲ್ಲಿ ರಸ್ತೆಗಳನ್ನ ಮಾಡಿ, ಕಾರವಾರದ ಸುರಂಗವನ್ನೂ ತೋರಿಸಿ ಕಾಮಗಾರಿಯಲ್ಲಿ ಪ್ರಗತಿಯಾಗಿದೆ ಎಂದು ಅವರು ಟೋಲ್ ಸಂಗ್ರಹಿಸುತ್ತಿದ್ದಾರೆ. ರಸ್ತೆಯ ಉದ್ದ ಹಾಗೂ ಗುಣಮಟ್ಟಕ್ಕೆ ಹೋಲಿಸಿದರೆ ಐಆರ್‌ಬಿ ಪಡೆಯುತ್ತಿರುವ ಟೋಲ್ ದರ ಹೆಚ್ಚಿದೆ. ಅವರು ಕಾನೂನಾತ್ಮಕವಾಗಿ ದಾಖಲೆಗಳನ್ನೆಲ್ಲ ತೋರಿಸಿ ಹೆದ್ದಾರಿ ಕಾಮಗಾರಿಗೆ ಅನುಮೋದನೆ ಪಡೆದುಕಂಡಿದ್ದಾರೆ. ಆದರೆ ವಾಸ್ತವವಾಗಿ ಅಗ್ರಿಮೆಂಟ್‌ನAತೆ ಅವರು ಇಲ್ಲಿ ನಡೆದುಕೊಳ್ಳುತ್ತಿಲ್ಲ ಎಂದು ಬೇಸರಿಸಿದರು.

Share This
300x250 AD
300x250 AD
300x250 AD
Back to top