ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಯ ಪರಿಶೀಲನಾ ಸಭೆ ನಡೆಸಲು ಎಡಿಜಿಪಿ ಮತ್ತು ಐಜಿಪಿಗಳನ್ನು ನೇಮಕಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಸುತ್ತೋಲೆ ಹೊರಡಿಸಿದ್ದು, ಉತ್ತರ ಕನ್ನಡಕ್ಕೆ ಎಡಿಜಿಪಿ ಪ್ರಣವ್ ಮೊಹಂತಿ ನೇಮಕಗೊಂಡಿದ್ದಾರೆ.
ಈ ಹಿಂದೆ ಜಿಲ್ಲೆಗಳಿಗೆ ಡಿಜಿ-ಐಜಿಪಿ ಅವರೇ ಖುದ್ದು ಭೇಟಿ ಕೊಟ್ಟು ಪರಿಶೀಲನಾ ಸಭೆ ನಡೆಸುತ್ತಿದ್ದರು.
ಇದೀಗ ಅವರ ಬದಲಿಗೆ 2 ದಿನಗಳು ನಿಯೋಜಿತ ಅಧಿಕಾರಿಗಳು ಭೇಟಿ ನೀಡಿ ಸಭೆ ನಡೆಸಬೇಕು. ಬಳಿಕ ಆ ಸಂಬಂಧಿಸಿದ ವರದಿಯನ್ನು ಡಿಜಿಪಿ ಕಚೇರಿಗೆ ಕಳುಹಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಮೊದಲ ದಿನ ರಿಜಿಸ್ಟ್ರರ್ ಬುಕ್ ನಿರ್ವಹಣೆ, ಖಾಲಿ ಹುದ್ದೆಗಳು, ಬಡ್ತಿಗೆ ಅರ್ಹರ ಪಟ್ಟಿ, ಟಿಎ, ಕಟ್ಟಡ ನಿರ್ವಹಣೆ, ವಾಹನ ರಿಪೇರಿ, ಹೋಂ ಗಾರ್ಡ್ಗಳ ಬಾಕಿ ಬಿಲ್ಗಳು, ಆರೋಗ್ಯ ಭಾಗ್ಯದ ಬಿಲ್ಗಳು, ಠಾಣೆಗಳಿಗೆ ಎಸ್ಪಿ, ಡಿಸಿಪಿ ಭೇಟಿ ಕೊಟ್ಟಿರುವ ಬಗ್ಗೆ ವಿವರ, ಎಸ್ಸಿ/ಎಸ್ಟಿ ಪ್ರಕರಣ, ಪೋಕ್ಸೊ ಪ್ರಕರಣ ವಿಲೇವಾರಿ, ಸೋಸಿಯಲ್ ಮೀಡಿಯಾ ಸೆಲ್, ಕೆಎಟಿ, ಹೈಕೋರ್ಟ್ ಪ್ರಕರಣದ ವಿವರ ಮತ್ತು ಪೊಲೀಸರ ಕಲ್ಯಾಣ ಯೋಜನೆ ಕುರಿತು ಪರಿಶೀಲನೆ ನಡೆಸಬೇಕೆಂದು ಸೂಚಿಸಲಾಗಿದೆ.
ಎರಡನೇ ದಿನದಲ್ಲಿ ಎಡಿಜಿಪಿ, ಐಜಿಪಿ ಪರೇಡ್, ಅಪರಾಧ ಪ್ರಕರಣಗಳ ಪರಿಶೀಲನ ಸಭೆ, ರೌಡಿ, ಗೂಂಡಾಗಳ ವಿರುದ್ಧ ಕ್ರಮ, ಡ್ರಗ್ಸ್, ಸಂಘಟಿತ ಅಪರಾಧಗಳ, ಮೊಬೈಲ್ ಎಎಸ್ಎಲ್ ವ್ಯಾನ್, ಕೋರ್ಟ್ ಸಮನ್ಸ್ ಕುರಿತು ಮಾಹಿತಿಯನ್ನು ಪರಿಶೀಲನೆ ನಡೆಸಿ ಡಿಜಿಪಿ ಕಚೇರಿಗೆ ವರದಿ ನೀಡುವಂತೆ ಡಿಜಿ-ಐಜಿಪಿ ಅಲೋಕ್ ಮೋಹನ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಯಾವ ಜಿಲ್ಲೆಗೆ ಯಾವ ಅಧಿಕಾರಿ ನೇಮಕ:
ಎಡಿಜಿಪಿ ಪ್ರಣವ್ ಮೊಹಂತಿ ಕೋಲಾರ, ಉತ್ತರ ಕನ್ನಡ
ಎಡಿಜಿಪಿ ಅಲೋಕ್ ಕುಮಾರ್ ದಾವಣಗೆರೆ, ಬೀದರ್
ಎಡಿಜಿಪಿ ಉಮೇಶ್ ಕುಮಾರ್ ಮೈಸೂರು, ಚಿಕ್ಕಬಳ್ಳಾಪುರ
ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿಜಯಪುರ, ಬಳ್ಳಾರಿ
ಎಡಿಜಿಪಿ ಆರ್.ಹಿತೇಂದ್ರ ಮಂಡ್ಯ, ಶಿವಮೊಗ್ಗ
ಎಡಿಜಿಪಿ ಎಸ್.ಮುರುಗನ್ ಚಿತ್ರದುರ್ಗ, ರಾಯಚೂರು
ಎಡಿಜಿಪಿ ಮನೀಷ್ ಕರ್ಬೀಕರ್ ಕಲಬುರಗಿ, ಮೈಸೂರು ನಗರ
ಎಡಿಜಿಪಿ ಸೌಮೆಂದು ಮುಖರ್ಜಿ ಬೆಂಗಳೂರು ಗ್ರಾ , ರಾಮನಗರ
ಎಡಿಜಿಪಿ ಎಂ.ಚಂದ್ರಶೇಖರ್ ಬೆಳಗಾವಿ, ತುಮಕೂರು
ಐಜಿಪಿ ವಿಫುಲ್ ಕುಮಾರ್ ಚಿಕ್ಕಮಗಳೂರು, ಹುಬ್ಬಳ್ಳಿ-ಧಾರವಾಡ ನಗರ
ಐಜಿಪಿ ದೇವಜ್ಯೋಜಿ ರಾಯ್ ಚಾಮರಾಜನಗರ, ಹಾಸನ
ಐಜಿಪಿ ಪ್ರವೀಣ್ ಮಧುಕರ್ ಪವಾರ್ ಉಡುಪಿ, ಮಂಗಳೂರು ನಗರ
ಐಜಿಪಿ ಸಂದೀಪ್ ಪಾಟೀಲ್ ಕೊಡಗು, ಹಾವೇರಿ