ಶಿರಸಿ: ಇಲ್ಲಿನ ಗಣೇಶನಗರದ ಗಜಾನನೋತ್ಸವ ಮಂಡಳಿಯಿ0ದ ನೂತನವಾಗಿ ನಿರ್ಮಿಸಲಾದ ಭವ್ಯ ಗಣೇಶ ಮಂಟಪದ ಉದ್ಘಾಟನಾ ಸಮಾರಂಭ ಸೆ.22ರಂದು ಬೆಳಿಗ್ಗೆ 11 ಘಂಟೆಗೆ ಜರುಗಲಿದೆ ಎಂದು ಕಟ್ಟಡ ಸಮಿತಿ ಅಧ್ಯಕ್ಷ ಅರುಣ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗಣೇಶನಗರದ ಹಿರಿಯ ನಿವಾಸಿಗಳಾದ ದಿ.ನಾಗೇಶ ಶೆಟ್ಟಿ, ದಿ.ರಾಮಾ ದಬ್ಬೆ, ದಿ.ಭಾಸ್ಕರ ಶೆಟ್ಟಿ, ದಿ.ನಾರಾಯಣ ನಾಯ್ಕ ಇವರೊಂದಿಗೆ ಊರಿನ ಹಿರಿಯ ನಾಗಕರಿಕರು ಹಾಗೂ ಉತ್ಸಾಹಿ ಯುವಕರ ಸಹಭಾಗಿತ್ವದಲ್ಲಿ 1983ರಲ್ಲಿ ಪುಟ್ಟ ಕಟ್ಟೆಯ ಮೇಲೆ ಅಡಿಕೆ ಮರದ ಮಂಟಪದೊOದಿಗೆ ಪ್ರಾರಂಭಗೊOಡ ಗಜಾನನೋತ್ಸವ, ಕಳೆದ 39 ವರ್ಷಗಳಿಂದ ಎಲ್ಲ ಮಹನೀಯರ ಸೇವೆ ಹಾಗೂ ಸಹಕಾರದಿಂದ ನೂತನ ಕಟ್ಟಡ ಉದ್ಘಾಟನೆಯ ಹಂತಕ್ಕೆ ತಲುಪಿದೆ. ಇದಕ್ಕೆಲ್ಲ ನಮ್ಮ ಮಹನೀಯರು ಕಾರಣ ಎಂದರು.
ಗಜಾನೋತ್ಸವ ಮಂಡಳಿಯ ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿ, ಬೆಳಿಗ್ಗೆ 11 ಘಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಶ್ರೀ ವೀರೇಂದ್ರ ಹೆಗ್ಗಡೆ ಆಶೀರ್ವಾದದೊಂದಿಗೆ ನಗರದ ಬಣ್ಣದ ಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಗಣೇಶ ಮಂಟಪವನ್ನು ಉದ್ಘಾಟಿಸಲಿದ್ದು, ಶ್ರೀ ಮಂಜುನಾಥ ಭೋಜನಾಲಯವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದಾರೆ. ಶ್ರೀ ಸಿದ್ಧಿವಿನಾಯಕ ಕಲಾ ವೇದಿಕೆಯನ್ನು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಉಪೇಂದ್ರ ಪೈ, ಅನಂತಮೂರ್ತಿ ಚ್ಯಾರಿಟೇಬಲ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಗುತ್ತಿಗೆದಾರ ಸಂಜೀವ ಶೆಟ್ಟಿ, ಊರ ಹಿರಿಯ ರಾಮಣ್ಣ ಅಂಕೋಲೇಕರ, ಗುತ್ತಿಗೆದಾರ ಕೃಷ್ಣ ಗಾಂವಕರ, ಹಿರಿಯ ಸುಬ್ರಾಯ ಶೇರುಗಾರ ಪಾಲ್ಗೊಳ್ಳಲಿದ್ದಾರೆ ಎಂದರು.
ಸೆ.22ರAದು ಬೆಳಿಗ್ಗೆ 8 ಘಂಟೆಗೆ ಗಣಹೋಮ, 11 ಘಂಟೆಗೆ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ, ಮಧ್ಯಾಹ್ನ 12.30ರಿಂದ ಸಾರ್ವಜನಿಕರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಗಣೇಶ ಮಂಟಪ ಉದ್ಘಾಟನಾ ಸಮಾರಂಭದ ನಿಮಿತ್ತ 5 ಸಾವಿರ ಜನರಿಗೆ ಅನ್ನದಾನ ನೀಡಲು ನಿರ್ಧರಿಸಿದ್ದೇವೆ. ಸಂಜೆ 7 ಘಂಟೆಯಿOದ ಯಕ್ಷಗೆಜ್ಜೆ ತಂಡದವರಿ0ದ ಚಿಕ್ಕಮಕ್ಕಳ ಯಕ್ಷಗಾನ ಕಾರ್ಯಕ್ರಮ, ಸೆ.23 ರಂದು ಮಧ್ಯಾಹ್ನ 1 ಘಂಟೆಗೆ ಮಹಾಗಣಪತಿ ಪೂಜೆ ಮತ್ತು ಪ್ರಸಾದ ವಿತರಣೆ, ಸಂಜೆ 4 ಘಂಟೆಯಿAದ 1-7ನೆಯ ತರಗತಿಯ ಚಿಕ್ಕಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, 7 ಘಂಟೆಯಿAದ ಮಹಿಳೆಯರಿಗೆ ಸ್ಥಳದಲ್ಲಿಯೇ ಆರತಿ ತಟ್ಟೆಯಲ್ಲಿ ರಂಗೋಲಿ ಬಿಡಿಸುವ ಸ್ಪರ್ಧೆ, ಚಿಣ್ಣರ ಮನರಂಜನಾ ಕಾರ್ಯಕ್ರಮ, ಸೆ.24ರಂದು ಬೆಳಿಗ್ಗೆ 9 ಘಂಟೆಯಿ0ದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ಸಂಜೆ 7 ಘಂಟೆಯಿ0ದ ಚಿಕ್ಕಮಕ್ಕಳ ಮನರಂಜನಾ ಕಾರ್ಯಕ್ರಮ, ಸೆ.25ರಂದು ಬೆಳಿಗ್ಗೆ 9 ಘಂಟೆಯಿ0ದ ಮಂಗಲಮೂರ್ತಿಯ ಪೂಜೆ, ಸಂಜೆ 8 ಘಂಟೆಯಿ0ದ ಬಹುಮಾತನ ವಿತರಣಾ ಮತ್ತು ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸೆ.26 ರಂದು ಬೆಳಿಗ್ಗೆ 9 ಘಂಟೆಯಿAದ ಪೂಜೆ, ರಾತ್ರಿ 8 ಘಂಟೆಯಿAದ ಗಜಾನನೋತ್ಸವ ಮಂಡಳಿಯ ಅಭಿವೃದ್ಧಿಗಾಗಿ ಶ್ರಮಿಸಿದವರಿಗೆ ಸನ್ಮಾನ, 10 ಘಂಟೆಗೆ ಪ್ರಸಿದ್ಧ ಕಲಾವಿದರಿಂದ ವಿಶೇಷ ನೃತ್ಯ ಮತ್ತು ಸಂಗೀತ, ಸೆ.27 ರಂದು ಸಂಜೆ 6 ಘಂಟೆಯಿAದ ರಂಗಭೂಮಿ, ವಿಸರ್ಜನಾ ಪೂಜೆ, 7 ಘಂಟೆಗೆ ಫಲಾವಳಿಗಳ ಸವಾಲು, 10 ಘಂಟೆಯಿAದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಖ್ಯಾತ ಕಲಾವಿದರಿಂದ ವಿಶೇಷ ರಸಮಂಜರಿ ಕಾರ್ಯಕ್ರಮ, ಸೆ.28ರಂದು ಸಂಜೆ 6 ಘಂಟೆಗೆ ಮಂಗಲಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದರು.
ಗಣೇಶನಗರ ಗ್ರಾಮ ಪಂಚಾಯತ ಮತ್ತು ನಗರಸಭೆಯ ವ್ಯಾಪ್ತಿಯನ್ನು ಒಳಗೊಂಡಿದ್ದು, ಈ ಭಾಗದಲ್ಲಿ ಶೇ 90ರಷ್ಟು ಜನರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಸುಸಜ್ಜಿತ ಕಲ್ಯಾಣ ಮಂಟಪದ ನಿರ್ಮಿಸಲಾಗಿದ್ದು, ಕಡಿಮೆ ದರದಲ್ಲಿ ಅವರಿಗೆ ಬಾಡಿಗೆ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಟ್ಟಡ ಸಮಿತಿಯ ಉಪಾಧ್ಯಕ್ಷರಾದ ರಾಜು ಶೆಟ್ಟಿ, ಕೃಷ್ಣ ಗಾಂವಕರ, ಪ್ರಮುಖರಾದ ಶಾಂತಾರಾಮ ಶೆಟ್ಟಿ, ರಾಜೇಶ ಕಾರೇಕರ, ಕೃಷ್ಣ ಭಂಡಾರಿ, ನಾಗರಾಜ ಸುಧಾಕರ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.