ಕಾರವಾರ: ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಸ್ಮರಣಾರ್ಥ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ಜಿಲ್ಲಾ ಕ್ರೀಡಾ ಪ್ರತಿಷ್ಠಾನದ ವತಿಯಿಂದ ಜಿಲ್ಲಾಯಾದ್ಯಂತ 45 ಶಾಲಾ- ಕಾಲೇಜುಗಳಲ್ಲಿ ಕ್ರೀಡಾ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ಸ್ಪರ್ಧೆಯ ಪ್ರಶ್ನೆಗಳನ್ನು ಕೈಗಾದ ಕ್ವಿಜ್ ಮಾಸ್ಟರ್ ಶ್ರೀನಿವಾಸ ಪಂಚಮುಖಿಯವರು ರೂಪಿಸಿದ್ದರು. ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲೆಗೆ ಸಂಬ0ಧಿಸಿದ ಪ್ರಶ್ನೆಗಳನ್ನು ಸರ್ಧೆಯಲ್ಲಿ ಕೇಳಲಾಗಿತ್ತು. ಒಟ್ಟು 1500 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಯೋಜಕತ್ವವನ್ನು ಅಮೆರಿಕಾದಲ್ಲಿ ನೆಲೆಸಿರುವ ಟೆಕ್ಕಿ ಮಹೇಶ ಹೂಲಿ ವಹಿಸಿಕೊಂಡಿದ್ದರು. ವಿಜೇತರಾದ 156 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದ ಜೊತೆ ಖ್ಯಾತ ಸಾಹಿತಿ ಕವಲಕ್ಕಿ ಗ್ರಾಮದ ಡಾ.ಎಚ್.ಎಸ್.ಅನುಪಮಾ ವಿರಚಿತ ’ಜೋತಿಬಾ ಫುಲೆ’, ’ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ’ ಹಾಗೂ ’ಜನಸಂಗಾತಿ ಭಗತಸಿಂಗ್’ ಕೃತಿಗಳನ್ನು ವಿತರಿಸಲಾಯಿತು ಎಂದು ಉತ್ತರ ಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನದ ಕಾರ್ಯದರ್ಶಿ ಮಹಾಂತೇಶ ಓಶಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.