ಕಾರವಾರ: ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ನೂತನ ಪ್ರಯಾಣಿಕರ ವಿಶ್ರಾಂತಿ ಕೊಠಡಿಯನ್ನು ಕೊಂಕಣ ರೈಲ್ವೆಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ.ನಿಕಮ್ ಉದ್ಘಾಟನೆ ಮಾಡಿದರು.
ಮುಂಗಡ ಟಿಕೇಟ್ ಹೊಂದಿದ ಪ್ರಯಾಣಿಕರ ಅನೂಕಲಕ್ಕಾಗಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು 3, 6, 9, 12, 24, 36 ಮತ್ತು 48 ಗಂಟೆಗಳಿಗೆ ನೇರವಾಗಿ ಅಥವಾ ಆನ್ಲೈನ್ ಮೂಲಕವು ಕೊಠಡಿಗಳನ್ನು ಕಾಯ್ದಿರಿಸಬಹುದು ಎಂದರು.
ಈ ಹಿಂದೆ ಉಡುಪಿ, ಮಡಗಾಂವ, ಥೀವಿಂ ರೈಲ್ವೆ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಾಡಲಾಗಿತ್ತು. ಈಗ ಕಾರವಾರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಂಚಾರಿ ಮತ್ತು ವಾಣಿಜ್ಯ ವ್ಯವಸ್ಥಾಪಕರಾದ ಗಣೇಶ ಸಾಮಂತ, ಸಹಾಯಕ ವ್ಯವಸ್ಥಾಪಕರಾದ ಜಿ.ಡಿ.ಮೀನಾ, ರೈಲ್ವೆ ನಿಲ್ದಾಣಾಧಿಕಾರಿ ಉದಯ ಸಾರಂಗ ಇತರರು ಇದ್ದರು.