ಜೊಯಿಡಾ: ಅರಣ್ಯವಾಸಿಗಳ ಮೇಲೆ ದೌರ್ಜನ್ಯವೆಸಗಿದಲ್ಲಿ ರಾಜ್ಯ ಸರಕಾರ ಇಂತಹ ದೌರ್ಜನ್ಯವನ್ನು ಸಹಿಸಲ್ಲ. ಅರಣ್ಯ ಸಿಬ್ಬಂದಿಗಳು ಕಾನೂನು ಬಾಹಿರವಾಗಿ ಅರಣ್ಯವಾಸಿಗಳ ಮೇಲೆ ದೌರ್ಜನ್ಯವೆಸಗಿದಲ್ಲಿ ಅಂತವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರವೀಂದ್ರ ನಾಯ್ಕ್ ಹೇಳಿದ್ದಾರೆ.
ಅವರು ಬುಧವಾರ ಜೊಯಿಡಾ ಕುಣಬಿ ಭವನದಲ್ಲಿ ಅರಣ್ಯವಾಸಿಗಳಿಗೆ ಗುರುತಿನ ಪತ್ರ ವಿತರಿಸುತ್ತಾ,ಮಾತನಾಡಿ ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದು, ಅರ್ಜಿ ಸಲ್ಲಿಸಿದಂತಹ ಅರಣ್ಯವಾಸಿಗಳಿಗೆ ಯಾವ ಕಾರಣಕ್ಕೂ ಅರಣ್ಯ ಸಿಬ್ಬಂದಿಗಳು ದೌರ್ಜನ್ಯ, ಕಿರುಕುಳ ಮತ್ತು ಒಕ್ಕಲೆಬ್ಬಿಸುವ ಪ್ರಕ್ರಿಯೇ ಜರುಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನ ವಹಿಸಿದ ವೇದಿಕೆ ಸಂಚಾಲಕ ಸುಭಾಷ್ ಗಾವಡಾ ಮಾತನಾಡುತ್ತಾ ಹೋರಾಟ ಭೂಮಿ ಹಕ್ಕಿಗಾಗಿ ಜರುಗಿದ್ದು, ಕಾನೂನಾತ್ಮಕ ಮತ್ತು ಸಂಘಟನಾತ್ಮಕ ಹೋರಾಟಕ್ಕೆ ಬದ್ದರಾಗಿದ್ದೇವೆ ಎಂದು ಹೇಳಿದರು. ಸಭೆಯಲ್ಲಿ ಬುಧೋ ಕಾಲೇಕರ್, ಪ್ರಭಾಕರ್ ವೇಳಿಪ್, ದೇವಿದಾಸ್ ದೇಸಾಯಿ, ದಿಲಿಫ್ ಮಿರಾಶಿ, ಮಲ್ಲಯ್ಯ ಸ್ವಾಮಿ, ರಾಮದಾಸ ವೇಳಿಪ್, ನಾರಾಯಣ ನಾಯ್ಕ, ಗಣಪತಿ ಗೌಡ ಮುಂತಾದವರು ಉಪಸ್ಥಿತರಿದ್ದರು.
ಸೆ.14 ರಂದು ಬೆಂಗಳೂರಿಗೆ:
ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದಲ್ಲಿ ಗಿಡ ನೆಟ್ಟಿರುವಂತಹ ಸುಮಾರು ಒಂದು ಸಾವಿರ ಛಾಯಾಚಿತ್ರ ಪ್ರದರ್ಶನ ಹಾಗೂ ಸಚಿವರೊಂದಿಗೆ ಸಮಾಲೋಚನೆ ಜರುಗಲಿರುವ ಕಾರ್ಯಕ್ರಮಕ್ಕೆ ಆಸಕ್ತ ಅರಣ್ಯವಾಸಿಗಳು ಆಗಮಿಸಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.