Slide
Slide
Slide
previous arrow
next arrow

ಲಯನ್ಸ್ ಶಾಲೆಯಲ್ಲಿ ಸಂಭ್ರಮದ ‘ಶಿಕ್ಷಕರ ದಿನಾಚರಣೆ’

300x250 AD

ಶಿರಸಿ: ಇಲ್ಲಿನ ಲಯನ್ಸ್ ಸಭಾಂಗಣದಲ್ಲೊಂದು ಅವಿಸ್ಮರಣೀಯ ಘಳಿಗೆಯು ಸೆ.5 ಮಂಗಳವಾರದಂದು ಸೃಷ್ಟಿಯಾಗಿತ್ತು. ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಪ್ರಾರಂಭವಾದ ಶಿಕ್ಷಕರ ದಿನಾಚರಣೆಯ ಸಂಭ್ರಮಕ್ಕೆ ವಿದ್ಯಾರ್ಥಿಗಳ ಉತ್ಸಾಹದ ಕರತಾಡನ ಮತ್ತಷ್ಟು ಕಳೆಗಟ್ಟಿಸಿತ್ತು.

ಪ್ರತಿ ವರ್ಷದಂತೆ ಶಿರಸಿ ಲಯನ್ಸ್ ಕ್ಲಬ್ ಬಳಗ ಈ ವರ್ಷವೂ ಕೂಡ ಶಿರಸಿ ಲಯನ್ಸ್ ಶಾಲೆಯ ಶಿಕ್ಷಕವೃಂದ, ಶಿಕ್ಷಕೇತರ ಸಿಬ್ಬಂದಿಗಳು, ಶಿಕ್ಷಕ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಲಯನ್ಸ್ ಗಣ್ಯರನ್ನು ಗೌರವಯುತವಾಗಿ ಸನ್ಮಾನಿಸುವುದರ ಜೊತೆಗೆ ಅನಿಲ್ ಲಬ್ಬಿಯವರು ಶಿಕ್ಷಕರಿಗಾಗಿ ಇರಿಸಿದ ದತ್ತಿನಿಧಿಯ ಪ್ರಸ್ತುತ ಸಾಲಿನ ಪುರಸ್ಕೃತರಾದ ಲಯನ್ಸ್ ಶಾಲೆಯ ಶಿಕ್ಷಕಿ ಶ್ರೀಮತಿ ಅನಿತಾ ಭಟ್ ಮತ್ತು ಲಯನ್ ಎನ್ .ವಿ.ಜಿ ಭಟ್ ದತ್ತಿನಿಧಿ ಪುರಸ್ಕೃತರಾದ ಶ್ರೀಮತಿ ಅನಿತಾ  ಭಟ್ ಮತ್ತು ಶ್ರೀಮತಿ ಮುಕ್ತಾ  ನಾಯ್ಕ ಇವರನ್ನು ಕೂಡ ಸನ್ಮಾನಿಸಲಾಯಿತು.

ಶ್ರೀಮತಿ ಮುಕ್ತಾ  ನಾಯ್ಕ ಎಲ್ಲಾ  ಶಿಕ್ಷಕರ ಪರವಾಗಿ  ಭಾವನಾತ್ಮಕವಾಗಿ ಮಾತನಾಡುತ್ತಾ, ಶಿಕ್ಷಕ ವೃತ್ತಿಯು ತುಂಬಾ ಗೌರವಯುತವಾದದ್ದು, ಅಂತಹ ಶಿಕ್ಷಕ ವೃತ್ತಿಯಲ್ಲಿ ಇರುವ ಎಲ್ಲರೂ ಧನ್ಯರು ಎಂದರು. ಸಂಸ್ಥೆಯ ಪ್ರಾಂಶುಪಾಲ  ಶಶಾಂಕ್ ಹೆಗಡೆ ಮಾತನಾಡುತ್ತಾ,  ಕೇವಲ ಅಕ್ಷರ ಕಲಿಸಿದವ  ಮಾತ್ರ ಗುರುವಲ್ಲ, ನಮ್ಮ ಜೀವನದಲ್ಲಿ  ಎದುರಾಗುವ ಎಷ್ಟೋ ಘಟನೆಗಳು, ಎಷ್ಟೋ ವ್ಯಕ್ತಿಗಳು ನಮ್ಮ ಜೀವನದಲ್ಲಿ ಗುರುವಾಗಬಹುದು ಎಂದರು.

300x250 AD

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ.ಅಶೋಕ  ಹೆಗಡೆ ಸ್ವಾಗತಿಸಿದರು. ಲಯನ್ಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಲ.MJF ಪ್ರಭಾಕರ ಹೆಗಡೆ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ರವೀಂದ್ರ ನಾಯಕ್ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ.ಜ್ಯೋತಿ ಅಶ್ವತ್ಥ್ ವಂದಿಸಿದರು. ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲ.ಪ್ರೊ. ರವೀಂದ್ರ ನಾಯಕ್ ಮತ್ತು ಲ. ಉದಯ ಸ್ವಾದಿ ಅವರನ್ನು ಸೇರಿದಂತೆ ಇನ್ನೂ ಕೆಲವು ಗೌರವಾನ್ವಿತ ತಮಗೆ ಕಲಿಸಿದ ಶಿಕ್ಷಕರನ್ನು ಲಯನ್ಸ್ ಕ್ಲಬ್ ಪದಾಧಿಕಾರಿಗಳು ಸನ್ಮಾನಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ್ ಮಾರ್ಗದರ್ಶನದಲ್ಲಿ ಸುಶ್ರಾವ್ಯವಾಗಿ ಗುರುವಂದನಾ ಗೀತೆಯನ್ನು ಪ್ರಸ್ತುತಪಡಿಸಿದರು. ಪ್ರಸ್ತುತ ವರ್ಷದ ಲಯನ್ಸ್ ಕ್ಲಬ್ ಖಜಾಂಚಿ ಶರಾವತಿ ಭಟ್ ಮತ್ತು ಲಯನ್ಸ್ ಕ್ಲಬ್ನ ಇನ್ನಿತರ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶಿಕ್ಷಕ ವೃಂದವನ್ನು ಅಭಿವಂದಿಸಿದರು. ಎಲ್ಲದರ ಜೊತೆ ಪ್ರಸ್ತುತ ಸಾಲಿನ ಎಸೆಸೆಲ್ಸಿ ವಿದ್ಯಾರ್ಥಿಗಳು ಹಾಗೂ ಲಿಯೋ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗಾಗಿ ಸಾಕಷ್ಟು ಮನೋರಂಜನೆ ಕಾರ್ಯಕ್ರಮಗಳು ಹಲವಾರು ಆಟಗಳನ್ನು ಆಡಿಸುವುದರ ಮೂಲಕ ಶಿಕ್ಷಕರನ್ನು ಮತ್ತೊಮ್ಮೆ ವಿದ್ಯಾರ್ಥಿ ಜೀವನಕ್ಕೆ ಕರೆದೊಯ್ದರು. ಒಟ್ಟಿನಲ್ಲಿ ಇಂದಿನ ಶಿಕ್ಷಣ ದಿನಾಚರಣೆಯ ಸಂಭ್ರಮವು ಲಯನ್ಸ್ ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿತ್ತು ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ.

Share This
300x250 AD
300x250 AD
300x250 AD
Back to top