ಶಿರಸಿ: ಇಲ್ಲಿನ ಆವೆ ಮರಿಯಾ ಪ್ರೌಢಶಾಲೆಯಲ್ಲಿ ಆ.28ರಂದು ಜರುಗಿದ ನಗರ ಪಶ್ಚಿಮ ವಲಯ ಮಟ್ಟದ 2023-24ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ್ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆ ಗೈದಿದ್ದಾರೆ.
ಸ್ಫರ್ಧೆಗೆ ನಿಗದಿಯಾಗಿದ್ದ ಒಟ್ಟೂ 20 ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು 7 ಪ್ರಥಮ ಸ್ಥಾನ, 5 ದ್ವಿತೀಯ ಸ್ಥಾನ,5 ತೃತೀಯ ಸ್ಥಾನ ಸೇರಿದಂತೆ ಒಟ್ಟೂ 17 ಬಹುಮಾನಗಳನ್ನು ಪಡೆದಿದ್ದಾರೆ. ಹಿಂದಿ ಭಾಷಣದಲ್ಲಿ ಸೂಫಿಯಾ ಗುಲಗುಂದಿ, ಜಾನಪದ ಗೀತೆಯಲ್ಲಿ ಸಿಂಚನಾ ಡಿ.ಶೆಟ್ಟಿ , ಭಾವಗೀತೆಯಲ್ಲಿ ವರ್ಷಾ ವಿನೋದ್ ಹೆಗಡೆ, ಭರತನಾಟ್ಯದಲ್ಲಿ ಭುವನಾ ಹೆಗಡೆ, ಚಿತ್ರಕಲೆಯಲ್ಲಿ ಪೃಥ್ವಿ ಉಮೇಶ ಹೆಗಡೆ, ಮಿಮಿಕ್ರಿಯಲ್ಲಿ ವಿಭವ್ ಭಾಗ್ವತ್ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಸಿದ್ದಿ ಧಮಾಮಿ ನೃತ್ಯ ಪ್ರದರ್ಶನ ನೀಡಿದ ಜಾನಪದ ನೃತ್ಯ ತಂಡವೂ ಸಹ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಅರೇಬಿಕ್ ಪಠಣದಲ್ಲಿ ಸಮ್ರಾ ಶೇಖ್, ಸಂಸ್ಕೃತ ಭಾಷಣದಲ್ಲಿ ಅನಘಾ ಹೆಗಡೆ, ಆಶುಭಾಷಣದಲ್ಲಿ ನವ್ಯಾ ಹೆಗಡೆ, ದ್ವಿತೀಯ ಸ್ಥಾನ ಪಡೆದಿದ್ದರೆ, ಕ್ವಿಜ್ ತಂಡ ಮತ್ತು ಕವ್ವಾಲಿ ತಂಡ ಕೂಡ ದ್ವಿತೀಯ ಸ್ಥಾನ ಗಳಿಸಿದೆ. ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಾರ್ಥನಾ ಪ್ರಕಾಶ್ ಹೆಗಡೆ, ಸುಪರ್ಣಾ ಹಿರೇಮಠ ಕವನ ವಾಚನದಲ್ಲಿ, ಸಮನ್ವಿತಾ ತೆಂಬದಮನಿ ಇಂಗ್ಲಿಷ್ ಭಾಷಣದಲ್ಲಿ,ಸಹನಾ ಭಟ್ ಗಝಲ್ ನಲ್ಲಿ , ಸಂತೋಷಿ ಪಟಗಾರ ಚರ್ಚಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.. ಸಾಧನೆಗೈದ ವಿದ್ಯಾರ್ಥಿಗಳಿಗೆ,ವಿದ್ಯಾರ್ಥಿಗಳ ಸಾಧನೆಗೆ ಸಹಕರಿಸಿದ ಪಾಲಕರಿಗೆ, ತರಬೇತಿ ನೀಡಿದ ಸಹ ಶಿಕ್ಷಕರಿಗೆ, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.