ಗೋಕರ್ಣ: ಶ್ರಾವಣ ಸೋಮವಾರದ ನಿಮಿತ್ತ ವಿವಿದೆಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಶ್ರೀ ಭದ್ರಕಾಳಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಹಾಗೇ ತಾಮ್ರ ಗೌರಿ (ಪಾರ್ವತಿ) ಸೇರಿದಂತೆ ಇಲ್ಲಿಯ ವಿವಿದೆಡೆ ಪೂಜೆಗಳು ನಡೆದವು.
ಶ್ರಾವಣ ಮಾಸ ಎಂದರೆ ದಿನನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಹಬ್ಬವಿದ್ದಂತೆ. ಒಟ್ಟಿನಲ್ಲಿ ಶ್ರಾವಣ ಮಾಸದಲ್ಲಿ ಹೂವಿಗೆ ಅಧಿಕ ಬೆಲೆ ಇರುವುದರಿಂದ ಬೆಳೆಗಾರರಿಂದ ಹಿಡಿದು ಮಾರಾಟ ಮಾಡುವವರಿಗೂ ಆರ್ಥಿಕವಾಗಿ ಸಹಾಯವಾಗುತ್ತದೆ. ಒಂದು ರೀತಿಯಲ್ಲಿ ಉದ್ಯೋಗವಕಾಶಗಳು ಸಹಜವಾಗಿಯೇ ಹೆಚ್ಚಾಗುತ್ತದೆ.