Slide
Slide
Slide
previous arrow
next arrow

ಪ್ರವಾಹ ಪೀಡಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಡಿಸಿ, ಶಾಸಕ ನೇತೃತ್ವದಲ್ಲಿ ಸಭೆ

300x250 AD

ಕಾರವಾರ: ಕೈಗಾ ಎನ್‌ಪಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ಕೆಪಿಸಿ, ಎನ್‌ಪಿಸಿಎಲ್, ಡಿಎಫ್‌ಓ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಸುಮಾರು ಹತ್ತು ಇತರ ವಿಭಾಗಗಳ ಅಧಿಕಾರಿಗಳು ಒಳಗೊಂಡ ಸಭೆಯಲ್ಲಿ ಕೆಪಿಸಿ ಹಾಗೂ ಎನ್‌ಪಿಸಿಐಎಲ್ ಯೋಜನಾ ನಿರಾಶ್ರಿತರ, ಗುತ್ತಿಗೆ ಕಾರ್ಮಿಕರ ಮತ್ತು ಪ್ರವಾಹ ಪೀಡಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಾರಂಭದಲ್ಲಿ ಹೊಸ ಜಿಲ್ಲಾಧಿಕಾರಿಗಳಿಗೆ ಕದ್ರಾ ಆಣೆಕಟ್ಟು ಮೇಲಿನಿಂದ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೋರಿಸಿದ ಶಾಸಕ ಸತೀಶ್ ಸೈಲ್, ಇಲ್ಲಿ ಹೂಳೆತ್ತುವ ಕೆಲಸ ಕೂಡಲೇ ನಡೆಸ ಬೇಕೆಂದು ಕೋರಿದರು. ಅಲ್ಲದೇ ಹೊಸ ಜಿಲ್ಲಾಧಿಕಾರಿಗಳಿಗೆ ಸಮಸ್ಯೆಯ ಗಂಭೀರತೆಯನ್ನು ವಿವರಿಸಿ ಪೂರ್ವ ನಿರ್ಧರಿತ ಸಭೆಯಲ್ಲಿ ಯಾವುದೇ ಬದಲಾವಣೆ ಮಾಡದೆ ತಾವು ಭಾಗವಹಿಸಿ ಬಡವರ ಕಣ್ಣೀರು ಒರೆಸಲು ಸಹಾಯ ಮಾಡಬೇಕೆಂದು ಕೋರಿದರು. ಸಭೆಯಲ್ಲಿ ಶಾಸಕ ಸೈಲ್ ಪ್ರಾರಂಭದಲ್ಲಿ ಕದ್ರಾ ಅಣೆಕಟ್ಟಿನ ನೀರು ಶೇಖರಣೆ ಮಟ್ಟ 30 ಮೀ. ಮೀರಬಾರದು. ನೀರಿನ ಒಳಹರಿವು ಮತ್ತು ಹೊರಹರಿವಿನ ನೀರಿನ ಪ್ರಮಾಣ ಎಷ್ಟಿರಬೇಕೆಂದು ತಜ್ಞರ ವರದಿಯನ್ನು ಸಭೆಯ ಮುಂದಿಟ್ಟರು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕದ್ರಾ ಜಲಾಶಯದ ನೀರಿನ ಶೇಖರಣೆಯ ಪ್ರಮಾಣ 30 ಮೀ. ಮೀರಬಾರದೆಂಬ ಡಿಸಿ ಇದೇವೇಳೆ ಆದೇಶ ನೀಡಿದರು.

300x250 AD

ಕೆಪಿಸಿ ಕದ್ರಾ ಯೋಜನಾ ನಿರಾಶ್ರಿತ ಸಮಸ್ಯೆ ಎತ್ತಿದ ಶಾಸಕ ಸೈಲ್, ಕಳೆದ 40 ವರ್ಷಗಳಿಂದ ಕದ್ರಾ ಯೋಜನೆಗಾಗಿ ನಿರಾಶ್ರಿತರಾದ ಸುಮಾರು 25 ಕುಟುಂಬಗಳ ಪರಿಸ್ಥಿತಿ ವಿವರಿಸಿ, ಇವತ್ತು ಕೂಡಾ ಯಾವುದೇ ಭೂದಾಖಲೆ ಇಲ್ಲದೆ ಕೆಪಿಸಿ ಕಾಲೋನಿಯಲ್ಲಿ ತಗಡಿನ ಮಾಡಿನ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ವಿಚಾರ ಸಭೆ ಮುಂದಿಟ್ಟರು. ಇದರಿಂದ ಆಶ್ಚರ್ಯಚಕಿತರಾದ ಜಿಲ್ಲಾಧಿಕಾರಿ, ಇದಕ್ಕೆ ಪರಿಹಾರ ಸೂಚಿಸುವಂತೆ ಕೆಪಿಸಿ ಮತ್ತು ಅರಣ್ಯ ಇಲಾಖೆಯ ಎರಡೂ ಡಿಫ್‌ಒಗಳಿಗೆ ಸೂಚಿಸಿದಾಗ, ಸಭೆಯಲ್ಲಿ ವಿಸ್ಕೃತ ಚರ್ಚೆಯಾಯಿತು.
ನಿರಾಶ್ರಿತರಿಗೆ ಮತ್ತು ಕಾರ್ಮಿಕರಿಗೆ ಶಾಶ್ವತ ಮನೆ ಕಟ್ಟಿ ಕೊಡುವಾಗ ಕೆಪಿಸಿ ತಮ್ಮ ಸಿಎಸ್‌ಆರ್ ನಿಧಿಯಿಂದ ಸಹಾಯ ಮಾಡಬೇಕೆಂದೂ ಸೂಚನೆ ನೀಡಲಾಯಿತು. ಮಾತ್ರವಲ್ಲದೆ ತಮ್ಮ ಸಿಎಸ್‌ಆರ್ ನಿಧಿಯಿಂದ ಹತ್ತು ಜೀವ ರಕ್ಷಕ ದೋಣಿ ಖರೀದಿಸಿ ಅದರ ಸಿಬ್ಬಂದಿಗಳ ಖರ್ಚನ್ನು ಭರಿಸಬೇಕೆಂದು ನಿರ್ಣಯಿಸಲಾಯಿತು. ತದನಂತರ ಎನ್‌ಪಿಸಿ ವಿಭಾಗದವರು ಕೂಡಾ ಐದು ಜೀವ ರಕ್ಷಕ ದೋಣಿ ಖರೀದಿಸಿ ಮಲ್ಲಪುರದಲ್ಲಿಯೇ ಜನರ ಉಪಯೋಗಕ್ಕೆ ಕಾಯಿದಿಡಬೇಕೆಂದು ನಿರ್ಣಯಿಸಲಾಯಿತು. ಇದರ ಜೊತೆಗೆ ಲಕ್ಷ್ಮೀನಗರ ಮತ್ತು ಗಾಂಧಿನಗರ ನಿವಾಸಿಗಳಿಗೆ ಎನ್‌ಪಿಸಿ ಅವರು ತಮ್ಮ ಜಾಗದಲ್ಲಿಯೇ ಈ ಗುತ್ತಿಗೆ ಕೆಲಸಗಾರರಿಗೆ ಸಿಎಸ್‌ಆರ್ ಫಂಡಿನಿoದ ಮನೆ ಕಟ್ಟಿ ಕೊಡಬೇಕೆಂದು ಸೂಚಿಸಿದಾಗ, ಎನ್‌ಪಿಸಿ ಅವರು ಸರಕಾರ ಜಾಗ ನೀಡಿದರೆ ತಾವು ಮನೆ ಕಟ್ಟಲು ಸಹಾಯ ಮಾಡುವ ವಾಗ್ದಾನ ನೀಡಿದರು.
ಈ ಸಭೆಯಲ್ಲಿ ಸುಮಾರು ಹತ್ತು ವಿಭಾಗಗಳ ಮುಖ್ಯಸ್ಥರ ಜೊತೆಗೆ ಮುಖಂಡರುಗಳಾದ ಕೆ.ಶಂಭು ಶೆಟ್ಟಿ, ಉದಯ ಬಾಂದೇಕರ್, ಚಂದ್ರಶೇಕರ್ ಬಾಂದೇಕರ್, ತನುಜಾ ರಂಗಸ್ವಾಮಿ, ಶ್ಯಾಮನಾಥ್ ನಾಯ್ಕ್ ಕಿಸ್ತೊದ್, ಅಶ್ವಿನಿ ಪೆಡ್ನೇಕರ್, ಅಂಜು, ಹನುಮವ್ವ, ದಿನೇಶ್, ಅಯ್ಯಪ್ಪ ಮುಂತಾದವರು ಹಾಜರಿದ್ದರು.

Share This
300x250 AD
300x250 AD
300x250 AD
Back to top