ಅಂಕೋಲಾ: ಜಮೀನು ನೋಂದಣಿಗೆ ಸಂಬAಧಿಸಿದAತೆ ಕಂಪ್ಯೂಟರ ಸಾಫ್ಟ್ವೇರ್ನಿಂದಾಗುವ ಸಮಸ್ಯೆಯನ್ನು ಬಗೆಹರಿಸುವ ಕುರಿತು ಆರ್ಯಪ್ರಭಾ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶಶಿಕಾಂತ ಡಿ. ಶೆಟ್ಟಿ ತಹಶೀಲ್ದಾರ ಪ್ರವೀಣ ಹುಚ್ಚಣ್ಣನವರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಚುನಾವಣೆ ಸಮಯದಲ್ಲಿ ಅಂಕೋಲಾ ಸಬ್ ರಜಿಸ್ಟರ್ ಕಛೇರಿಯಲ್ಲಿ ಜಾಗ ಮಾರಾಟದ ಅನೇಕ ಪ್ರಕರಣ ರಜಿಸ್ಟರ್ ಆಗಿದ್ದವು. ಆದರೆ ಇದುವರೆಗೂ ತಹಶೀಲ್ದಾರ ಕಛೇರಿಯ ಭೂಮಿ ಕೇಂದ್ರಕ್ಕೆ ಜೆ ಫಾರ್ಮ್ ಬಂದಿಲ್ಲ. ಯಾರಿಗೂ ಇದುವರೆಗೂ ರೆಕಾರ್ಡ್ಸ್ ಆಗಿರುವುದಿಲ್ಲ. ಸಬ್ ರಜಿಸ್ಟರ್ ಕಛೇರಿಯಲ್ಲಿ ವಿಚಾರಿಸಿದರೆ ಅದು ಕಂಪ್ಯೂಟರ್ ಸಾಫ್ಟ್ವೇರ್ನ ಸಮಸ್ಯೆ ಎನ್ನುತ್ತಾರೆ. ತಹಶೀಲ್ದಾರ ಕಛೇರಿಯಲ್ಲಿ ವಿಚಾರಿಸಿದರೆ ನಮಗಿನ್ನೂ ಜೆ ಫಾರ್ಮ್ ಬಂದಿಲ್ಲ. ಬಂದಲ್ಲಿ ಮುಂದಿನ ಕೆಲಸ ನಾವು ಮಾಡುತ್ತೇವೆ ಎನ್ನುತ್ತಾರೆ. ಏಪ್ರಿಲ್ನಲ್ಲಿ ರಜಿಸ್ಟರ್ ಆಗಿ ನಾಲ್ಕು ತಿಂಗಳಾದರೂ ಇದುವರೆಗೂ RTC ಆಗಿಲ್ಲ. ಕೇವಲ ಏಳು ದಿನಗಳಲ್ಲಿ RTC ಆಗುತ್ತದೆ ಎಂದು ಸರ್ಕಾರದ ಹೇಳಿಕೆ ಇದೆ. ಇದುವರೆಗೂ ಈ ವಿಷಯದಲ್ಲಿ ಯಾರೂ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿಲ್ಲ.
ಇದೀಗ ಪಿತ್ರಾರ್ಜಿತ ಆಸ್ತಿಯಲ್ಲಿ ಸಾವಲಂಬಿ ಆಪ್ ಮೂಲಕ ವಿಭಾಗ ಮಾಡಿದ್ದಲ್ಲಿ ಯಾವುದೇ ವಿಭಾಗದ ಪ್ರಕರಣ ಸಬ್ ರಜಿಸ್ಟರ್ ಕಛೇರಿಯಲ್ಲಿ ರಜಿಸ್ಟರ್ ಆಗುವುದಿಲ್ಲ. ಓಂ (ಭೂಪರಿವರ್ತನೆ) ಆದ ಪ್ರಕರಣಗಳು ಗ್ರಾಮ ಪಂಚಾಯತ ತಲುಪುವುದಿಲ್ಲ. ತಾವು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಸಮಸ್ಯೆಯನ್ನು ಪರಿಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಅವರು ಸಲ್ಲಿಸಿದ ಮನವಿಯಲ್ಲಿ ವಿನಂತಿಸಿದ್ದಾರೆ.