ಶಿರಸಿ: ಮಿನಿ ಸೂಪರ್ ಮಾರ್ಕೆಟ್ ಕೊರ್ಲಕಟ್ಟಾ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕೊರ್ಲಕಟ್ಟಾ ಇವರ ಸಹಯೋಗದಲ್ಲಿ ಟಿ.ಎಸ್.ಎಸ್. ವತಿಯಿಂದ ರಾಜೇಶ್ ನಾಯ್ಕ ಕಂಡ್ರಾಜಿ ಇವರ ತೋಟದಲ್ಲಿ “ಕಾರ್ಬನ್ ಪೈಬರ್ ದೋಟಿಯ ಮೂಲಕ ಔಷಧ ಸಿಂಪಡಿಸುವ ತರಬೇತಿ ಶಿಬಿರ”ವನ್ನು ಹಮ್ಮಿಕೊಳ್ಳಲಾಯಿತು.
ಸಂಘದ ವತಿಯಿಂದ ಈಗಾಗಲೇ ಕಾರ್ಬನ್ ಪೈಬರ್ ದೋಟಿಯ ಮೂಲಕ ಔಷಧ ಸಿಂಪಡಿಸುತ್ತಿರುವ ನುರಿತ ಕಾರ್ಮಿಕರಿಂದ ಹೊಸದಾಗಿ ಸೇರ್ಪಡೆಗೊಂಡ ಕಾರ್ಮಿಕರಿಗೆ ತರಬೇತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ತೋಟದ ಮಾಲೀಕರಾದ ರಾಜೇಶ್ ನಾಯ್ಕ ಕಂಡ್ರಾಜಿ, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈಗಾಗಲೇ ಸಂಘದ ವತಿಯಿಂದ ರೈತ ಸದಸ್ಯರ ತೋಟಗಳಿಗೆ ಕಾರ್ಬನ್ ಪೈಬರ್ ದೋಟಿಯ ಮೂಲಕ ಔಷಧ ಸಿಂಪಡಿಸುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಎಲ್ಲಾ ಸದಸ್ಯರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.