Slide
Slide
Slide
previous arrow
next arrow

ಅಕ್ರಮ ಗೋ ಸಾಗಾಟ; 22ಕ್ಕೂ ಹೆಚ್ಚು ಗೂಳಿ ರಕ್ಷಣೆ

300x250 AD

ಹೊನ್ನಾವರ: ಕಂಟೇನರ್ ವಾಹನದಲ್ಲಿ ಹಿಂಸಾತ್ಮಕವಾಗಿ ಯಾವುದೇ ಪಾಸ್ ಪರ್ಮಿಟ್ ಇಲ್ಲದೇ ಗೇರುಸೊಪ್ಪಾ-ಹೊನ್ನಾವರ ಮಾರ್ಗದ ಮೂಲಕ ಮಂಕಿ ಮತ್ತು ಭಟ್ಕಳಕ್ಕೆ 22ಕ್ಕೂ ಹೆಚ್ಚು ಗೂಳಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಗೇರುಸೊಪ್ಪಾ ಮಾರ್ಗದ ಮೂಲಕ ಹೊನ್ನಾವರ ಕಡೆಗೆ ಬರುತ್ತಿದ್ದ ಮಹಾರಾಷ್ಟ್ರ ನೋಂದಾವಣೆ ಹೊಂದಿದ್ದ ಕಂಟೇನರ್ ವಾಹನವನ್ನು ಖಚಿತ ಮಾಹಿಯ ಮೇರೆಗೆ ಹಡಿನಬಾಳ ಸಮೀಪ ತಡೆಯಲು ಮುಂದಾದಾಗ ಕಂಟೇನರ್ ಮೂಲಕ ಮುಂದೆ ಸಾಗಲು ವಿಫಲ ಯತ್ನ ಆರೋಪಿಗಳು ನಡೆಸಿದರು. ಕವಲಕ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರ್ವರು ಆರೋಪಿಗಳ ಸಮೇತ ಬಂಧನ ಮಾಡುವಲ್ಲಿ ಹೊನ್ನಾವರ ಪೊಲೀಸರು ಯಶ್ವಸಿಯಾಗಿದ್ದಾರೆ.
ಕಂಟೇನರ್‌ಲ್ಲಿ ಸಮರ್ಪಕವಾಗಿ ಗಾಳಿ, ಆಹಾರದ ವ್ಯವಸ್ಥೆ ಕಲ್ಪಿಸದೇ ಯಾವುದೇ ಪಾಸ್ ಪರ್ಮಿಟ್ ಇಲ್ಲದೇ 22 ಹೋರಿಯನ್ನು ಸಾಗಿಸಲಾಗುತ್ತಿತ್ತು. ಅದರಲ್ಲಿ ಒಂದು ಹೋರಿಯು ಕಂಟೇನರ್ ಒಳಗೆ ಮೃತಪಟ್ಟಿತ್ತು. ಆರೋಪಿತರಲ್ಲಿ ಓರ್ವರು ಹಾವೇರಿಯ ಹಾನಗಲ್ ಮೂಲದ ಇಸ್ಮಾಯಿಲ್ ಖಾದರ್ ಸಾಬ್ ಎಲವಟ್ಟಿ, ಮಹಾರಾಷ್ಟ್ರ ಭೂಷಣನಗರ ಮೂಲದ ಸಂಕೇತ ರಾಜೇಂದ್ರ ಬಲಿದ್ ಎಂದು ತಿಳಿದುಬಂದಿದ್ದು, ಹಾವೇರಿಯಿಂದ ಗೋವನ್ನು ಭಟ್ಕಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top