ಕಾರವಾರ: ಮಾದಕ ವಸ್ತು ವಿರೋಧಿ ದಿನಾಚರಣೆ ವಿಶ್ವ ವಿಟಿಲಿಗೊ ದಿನದ ಅಂಗವಾಗಿ ಮ್ಯಾರಥಾನ್ 5 ಕಿ.ಮೀ. ಹಾಗೂ 3 ಕಿ.ಮೀ ರನ್ ಫರ್ ಕಾಸ್ ಶೀರ್ಷಿಕೆಯಡಿ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯ ವಿಭಾಗ, ಚರ್ಮರೋಗ ವಿಭಾಗದ ವತಿಯಿಂದ ನಿರ್ದೇಶಕ ಡಾ.ಗಜಾನನ ಎಚ್.ನಾಯಕರವರ ಸಹಕಾರದಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರನ್ ಫರ್ ಕಾಸ್‌ಗೆ 600 ಮಂದಿ ನೋಂದಾಯಿಸಿಕೊಂಡಿದ್ದು, ಕಾಲೇಜಿನ ವಿದ್ಯಾರ್ಥಿಗಳು ಸೇರಿ ಸರಿಸುಮಾರು 1000 ಮಂದಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕಾರವಾರ ಅಥ್ಲೇಟಿಕ್ ಕ್ಲಬ್, ಕಾರವಾರ ಸೈಕಲ್ ಕ್ಲಬ್, ನೌಕಾನೆಲೆ ಸಿಬ್ಬಂದಿಗಳು, ನಮ್ಮ ಕಾರವಾರ ಯೂಥ್ ಗ್ರೂಪ್ ಭಾಗವಹಿಸಿ ಯಶಸ್ವಿಯಾಗಿ ನಡೆಸಿದರು.
ಮೊದಲಿಗೆ ಓಟ ನಿರ್ದೇಶಕರಿಂದ ಪ್ಲಾಗ್ ಆಫ್ ಮಾಡಲಾಯಿತು. ತದನಂತರ ಉಪಹಾರ, ಸರ್ಟಿಫಿಕೇಟ್, ಮೆಡಲ್ ವಿತರಿಸಲಾಯಿತು. ಕಾರ್ಯಕ್ರಮದ ಓಟದಲ್ಲಿ ಗೆದ್ದವರಿಗೆ ನಿರ್ದೇಶಕರು ತಂಡದಿಂದ ಪುರಸ್ಕರಿಸಲಾಯಿತು. ಇದೇ ವೇಳೆ ವಿದ್ಯಾರ್ಥಿ ಕೌನ್ಸಿಲ್ ವತಿಯಿಂದ ಕಿರು ನಾಟಕ ಪ್ರದರ್ಶನ ನಡೆಯಿತು. ಮಾದಕ ವಸ್ತು ವಿರೋಧಿ ದಿನಾಚರಣೆ ಹಾಗೂ ವಿಶ್ವ ವಿಟಿಲಿಗೊ ದಿನದ ಮೂಲಾರ್ಥ ತಿಳಿಸಿಕೊಡಲಾಯಿತು.
ನಿರ್ದೇಶಕ ಡಾ.ಗಜಾನನ ನಾಯಕ ಮಾತನಾಡಿ, ‘ಸೇ ನೋ ಟು ಡ್ರಗ್ಸ್’ ಎಂದು ಯುವಜನತೆಗೆ ಪ್ರತ್ಯೇಕವಾಗಿ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಡಾ.ಮಂಜುನಾಥ ಭಟ್, ಡಾ.ಶಂಕರ ರಾವ್, ಡಾ.ಶ್ರುತಿ, ಡಾ.ಮೋಹನ್ ಬಾಬು, ಕಮಾಂಡರ್ ಗೀರಿಶ್‌ರವರು ಭಾಗವಹಿಸಿ, ವಿಜೇತರಿಗೆ ಸತ್ಕರಿಸಿದರು. ಮನೋರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಜಯರಾಜ್ ವಂದರ್ನಾಪಣೆ ಮಾಡಿ, ಹೇಗೆ ಕ್ಷಣಿಕ ಸುಖಕ್ಕಾಗಿ ವ್ಯಸನಕ್ಕೆ ಬಲಿಯಾಗುತ್ತಾನೆ. ಅದೇ ಸುಖವನ್ನು ಬೇರೆ ಸಕಾರ್ಯದಲ್ಲಿ ಕಂಡುಕೊಳ್ಳಬಹುದು. ಕುಟುಂಬದ ಜೊತೆ ಯಾತ್ರೆ, ಪಿಕನಿಕ್, ಭೋಜನಕೂಟ, ಇತರ ಹವ್ಯಾಸ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡು ವ್ಯಸನಮುಕ್ತರಾಗಿ ಜೀವನ ನಡೆಸಬಹುದೆಂದು ತಿಳಿಸಿದರು. ವಿದ್ಯಾರ್ಥಿ ಕೌನ್ಸಿಲ್‌ರವರು ಬೆನ್ನೆಲುಬಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಪ್ರಾಯೋಜಕ ಇಂಟಾಸ್ ಫಾರ್ಮಸಿಟಿಕಲ್ಸ್, ಐಡಿಬಿಐ ಬ್ಯಾಂಕ್, ಸೇಂಟ್ ಮಿಲಾಗ್ರಿಸ್ ಬ್ಯಾಂಕ್, ಹೊಟೇಲ್ ಸಾಯಿ ಇಂಟರ್ ನ್ಯಾಷನಲ್, ಗ್ರಿಲ್ಡ್ ಅಂಡ್ ಫ್ರೆöಡ್, ರಾಯಲ್ ಎನ್‌ಫೀಲ್ಡ್, ಹೋಟೆಲ್ ಈಡನ್, ನಮ್ಮ ಕಾರವಾರ ತಂಡದವರು ಸಹಕರಿಸಿದರು.