ಶಿರಸಿ: ಟಿ.ಎಸ್.ಎಸ್.ಲಿ, ನ ಹೊಟೆಲ್ ಸಾಮ್ರಾಟ್ದ ವಿನಾಯಕ ಹಾಲ್ನಲ್ಲಿ ಜೂನ್ 22 ರಿಂದ 24 ರ ವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ‘ಸಾರಿ & ಸಿಲ್ವರ್ ಎಕ್ಸ್ಪೋ’ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಅಡಿಕೆ ಮತ್ತು ಕಾಳು ಮೆಣಸು ವರ್ತಕರ ಸಂಘದ ಅಧ್ಯಕ್ಷ ಸತೀಶ ವಿಶ್ವನಾಥ ಭಟ್ಟ ಶಿರಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರುಗಳು, ಸಹಾಯಕ ಪ್ರಧಾನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಎಕ್ಸ್ಪೋದಲ್ಲಿ ರೇಷ್ಮೆ, ಹ್ಯಾಂಡ್ಲೂಮ್ ಸೀರೆಗಳ ಅಮೋಘ ಸಂಗ್ರಹದ ಜೊತೆಗೆ ಬೆಳ್ಳಿ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟವಾಗಲಿದ್ದು, ಕಾಂಜೀವರಂ ಸಿಲ್ಕ್, ಸಾಫ್ಟ್ ಸಿಲ್ಕ್, ಲೈಟ್ ವೇಟ್ ಸಿಲ್ಕ್, ಆರ್ಟ್ ಸಿಲ್ಕ್ ಹಾಗೂ ಕಾಟನ್ ಹ್ಯಾಂಡ್ಲೂಮ್ ಸಾರಿಗಳ ಜೊತೆಗೆ ಪೂಜಾ ಸಾಮಗ್ರಿಗಳು, ಮದುವೆಯ ಆಭರಣಗಳು, ವಿಶೇಷ ಪಾತ್ರೆಗಳು, ಕಲಾತ್ಮಕ ವಸ್ತುಗಳು, ಉಡುಗೊರೆ ಸಾಮಗ್ರಿಗಳು ಹಾಗೂ ಡಿನ್ನರ್ ಸೆಟ್ಸ್ಗಳು ಲಭ್ಯವಿರುತ್ತವೆ.
ಈ ಮೂರು ದಿನಗಳ ಕಾಲ ನಡೆಯಲಿರುವ ಎಕ್ಸ್ಪೋದಲ್ಲಿ ಸೀರೆಗಳಿಗೆ 20% ರಿಯಾಯಿತಿಯ ಜೊತೆಗೆ ರೂ.150 ರಿಂದ ರೂ.400 ರವರೆಗೆ ರಿಯಾಯಿತಿ ಕೂಪನ್ ದೊರೆಯಲಿದ್ದು ಬೆಳ್ಳಿ ಸಾಮಗ್ರಿಗಳಿಗೆ ಪ್ರತಿ 100ಗ್ರಾಂಗೆ ರೂ.200 ರಿಂದ ರೂ.400 ರವರೆಗೆ ರಿಯಾಯಿತಿಯು ಲಭ್ಯವಿರುತ್ತದೆ. ಸದಸ್ಯರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕೊಡುಗೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.