ಶಿರಸಿ: ದಿ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಸೇಲ್ ಸೊಸೈಟಿ ಇದರ 2023-24 ರಿಂದ 2027-28ನೇ ಸಾಲಿನ ಚುನಾವಣೆಯು ಜೂ.24 ರಂದು ನಡೆಯಲಿದ್ದು, ಈಗಾಗಲೇ ಉಮೇದುವಾರಿಕೆ ಸಲ್ಲಿಸಿದವರಲ್ಲಿ ದತ್ತಾತ್ರೇಯ ಗಣಪತಿ ಹೆಗಡೆ ಶಂಕರಗದ್ದೆ ಕಂಪ್ಲಿ ಹಾಗು ಶಿವಾನಂದ ಸತ್ಯನಾರಾಯಣ ಭಟ್ ಸಣ್ಣಕೇರಿ ಇವರುಗಳು ಸಂಸ್ಥೆಯ ಹಾಲಿ ಅಧ್ಯಕ್ಷರಾಗಿರುವ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಬಳಗಕ್ಕೆ ಬೆಂಬಲ ನೀಡಿ ಚುನಾವಣಾ ಕಣದಿಂದ ಹಿಂದೆ ಸರಿದು ಉಮೇದುವಾರಿಕೆಯಿಂದ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದಾರೆ. ಇನ್ನುಳಿದಂತೆ ಕಣದಲ್ಲಿ ಸಾಮಾನ್ಯ ಕ್ಷೇತ್ರದಿಂದ 8 ಸ್ಥಾನಕ್ಕೆ 11 ಉಮೇಧುವಾರರು ಹಾಗು ‘ಬ’ ವರ್ಗದಲ್ಲಿ 1 ಸ್ಥಾನಕ್ಕೆ 2 ಜನರು ಕಣದಲ್ಲಿದ್ದಾರೆ.
TRC ಚುನಾವಣೆ: ರಾಮಕೃಷ್ಣ ಹೆಗಡೆ ಕಡವೆ ಬೆಂಬಲಿಸಿ ಈರ್ವರು ಅಭ್ಯರ್ಥಿಗಳು ನಿವೃತ್ತಿ
