ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ‘ರೋಟರಿ ಅಸ್ಮಿತಾ’ ಕಾರ್ಯಕ್ರಮದ ಅಡಿಯಲ್ಲಿ ಸದಾಶಿವಗಡದ ಅಮೃತಾನಂದಮಯಿ ಶಾಲೆಯ ವಿದ್ಯಾರ್ಥಿನಿಯರಿಗೆ ಎಂ.ಹೆಚ್.ಎo. ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಭಾ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರಾಘವೇಂದ್ರ ಜಿ. ಪ್ರಭು ರವರು ಎಲ್ಲರನ್ನು ಸ್ವಾಗತಿಸುತ್ತ “ಅಸ್ಮಿತಾ” ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿನಿಯರಿಗೆ ಹಿಮೊಗ್ಲೋಬಿನ್ ತಪಾಸಣೆ ಮಾಡಿ ಯೋಗ್ಯ ಸಲಹೆಯೊಂದಿಗೆ ಔಷಧಿಗಳನ್ನು ನೀಡಲಾಗುತ್ತದೆ ಹಾಗೂ ಪ್ರಾಜೆಕ್ಟರ್ ಮೂಲಕ ವಿವರಣೆಯನ್ನು ನೀಡಲಾಗುತ್ತದೆ ಎಂದರು. ಶಾಲೆಯ ಮುಖ್ಯಧ್ಯಾಪಕಿ ಸ್ವಾಮಿನಿ ಅಮಲಾಮೃತ ಪ್ರಣಾ ರೋಟರಿಯ ಕಾರ್ಯಗಳನ್ನು ಶ್ಲಾಘಿಸಿದರು. ಮತ್ತು ವಿದ್ಯಾರ್ಥಿನಿಯರು ಆರೋಗ್ಯದತ್ತ ಲಕ್ಷ ವಹಿಸಬೇಕು, ಈ ಕಾರ್ಯಕ್ರಮ ನಾವೇ ಮಾಡಬೇಕಿತ್ತು ಆದರೆ ರೋಟರಿ ಸಂಸ್ಥೆಯವರು ಮಾಡಿದ್ದಾರೆ ಅವರಿಗೆ ಧನ್ಯವಾದಗಳು ಎಂದರು.
ಸ್ತ್ರೀರೋಗ ತಜ್ಞರಾದ ಡಾ. ಪೂಜಾ ರವರು ವಿಧ್ಯಾರ್ಥಿನಿಯರಿಗೆ ಪ್ರಾರಂಭದಲ್ಲಾಗುವ ಆರೋಗ್ಯದ ಬದಲಾವಣೆಗಳನ್ನು ವಿವರಿಸುತ್ತ ಅವುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎನ್ನುವುದರ ಹಾಗು ದೇಹ ಶುಚಿತ್ವದ ಕುರಿತು ಯೋಗ್ಯ ಸಲಹೆ ಸೂಚನೆಗಳನ್ನು ನೀಡಿದರು. ರೋಟರಿ ಕಮ್ಯುನಿಟಿ ನಿರ್ದೇಶಕ ಎಲ್.ಎಸ್.ಫರ್ನಾಂಡಿಸ್ ಮಾತನಾಡಿದರು. ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಉಪ ಮುಖ್ಯಾಧ್ಯಾಪಕಿ ಶ್ರೀಮತಿ ವಿದ್ಯಾ ನಾಯಕ, ವೈದ್ಯರಾದ ಡಾ|| ಸಭಾ, ಡಾ||. ಸಾನ್ಯ, ಡಾ|| ರುಕ್ಕಮ್ಮಾ, ಶುಶ್ರೂಷಕರಾಗಿ ಶ್ರೀಮತಿ ಕೃಪಾಲಿ, ಶ್ರೀಮತಿ ಪ್ರಿಯಾಂಕಾ ಮರಾಠೆ, ಪ್ರಯೋಗಶಾಲಾ ತಜ್ಞರಾಗಿ ಸುಪ್ರಿಯಾ ನಾಯ್ಕ ಉಪಸ್ತಿತರಿದ್ದರು. ರೋಟರಿ ಸಂಸ್ಥೆಯಿ0ದ ಎಂ. ಎ. ಕಿತ್ತೂರ, ಗುರು ಹೆಗಡೆ, ಆನಂದ ನಾಯ್ಕ, ಅಮರನಾಥ ಶೆಟ್ಟಿ, ಡಾ|| ಸಮೀರಕುಮಾರ ನಾಯ್ಕ ಮುರಳಿ ಗೊವೇಕರ, ಗೋವಿಂದ್ರಾಯ ಮಾಂಜ್ರೇಕರ, ಇನ್ನರ್ವ್ಹೀಲ್ ಅಧ್ಯಕ್ಷೆ ಶ್ರೀಮತಿ ಸೋನಾ ಫರ್ನಾಂಡಿಸ್, ಉಪಸ್ಥಿತರಿದ್ದರು. ಮೋಹನ ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ಶೈಲೇಶ ಹಳದಿಪೂರ ನಿರೂಪಿಸಿದ್ದರು.