ನವದೆಹಲಿ: ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಗೆ ರೂ 315 ಕೋಟಿ ದೇಣಿಗೆ ನೀಡಿದ್ದಾರೆ. ಐಐಟಿಯೊಂದಿಗೆ ತಮ್ಮ 50 ವರ್ಷಗಳ ಒಡನಾಟವನ್ನು ಗುರುತಿಸಲು ಅವರು ಈ ದೇಣಿಗೆ ನೀಡಿದ್ದಾರೆ.
ನೀಲಕಣಿ ಐಐಟಿ ಬಾಂಬೆಯಲ್ಲಿ ವಿದ್ಯಾಭ್ಯಾಸ ಪಡೆದು ಇಂದು ಉನ್ನತ ವ್ಯಕ್ತಿಯಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಅದರ ಗೌರವಾರ್ಥ ಅವರು ಈ ದೇಣಿಗೆ ನೀಡಿದ್ದಾರೆ. ಅವರು 1973 ರಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಪದವಿಗಾಗಿ ಐಐಟಿ ಬಾಂಬೆ ಸೇರಿದ್ದರು.
ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಉತ್ತೇಜಿಸಲು, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಐಐಟಿ ಬಾಂಬೆಯಲ್ಲಿ ಆಳವಾದ ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಪೋಷಿಸಲು ದೇಣಿಗೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಕೊಡುಗೆಯು ಭಾರತದಲ್ಲಿ ಹಳೆಯ ವಿದ್ಯಾರ್ಥಿ ನೀಡಿದ ಅತಿದೊಡ್ಡ ದೇಣಿಗೆಗಳಲ್ಲಿ ಒಂದಾಗಿದೆ ಎಂದು ವರದಿಗಳು ಹೇಳುತ್ತಿವೆ.
“IIT-ಬಾಂಬೆ ನನ್ನ ಜೀವನದಲ್ಲಿ ಒಂದು ಮೂಲಾಧಾರವಾಗಿದೆ, ನನ್ನನ್ನು ರೂಪಿಸಿದೆ ಮತ್ತು ನನ್ನ ಪ್ರಯಾಣಕ್ಕೆ ಅಡಿಪಾಯವನ್ನು ಹಾಕಿದೆ. ಈ ಗೌರವಾನ್ವಿತ ಸಂಸ್ಥೆಯೊಂದಿಗೆ ನನ್ನ 50 ವರ್ಷಗಳ ಒಡನಾಟವನ್ನು ನಾನು ಆಚರಿಸುತ್ತಿರುವಾಗ, ಅದರ ಭವಿಷ್ಯವನ್ನು ಭದ್ರಗೊಳಿಸಲು ಮತ್ತು ಕೊಡುಗೆ ನೀಡಲು ನಾನು ಕೃತಜ್ಞನಾಗಿದ್ದೇನೆ.” ಎಂದು ನಿಲೇಕಣಿ ಹೇಳಿರುವುದಾಗಿ ಪ್ರಕಟಣೆ ಉಲ್ಲೇಖಿಸಿದೆ.