Slide
Slide
Slide
previous arrow
next arrow

ಮನೆ ಮಂಜೂರಿಯಾದವರಿಗೆ ಕಾರ್ಯಾದೇಶ ನೀಡಲಿ: ಲತಾ ನಾಯ್ಕ ಆಗ್ರಹ

300x250 AD

ಸಿದ್ದಾಪುರ: ಕ್ಷೇತ್ರದ ನಿಕಟಪೂರ್ವ ಶಾಸಕರಾದ ವಿಶ್ವೇಶ್ವರ ಹೆಗಡೆಯವರ ವಿಶೇಷ ಪ್ರಯತ್ನದಿಂದ ಹೆಚ್ಚುವರಿಯಾಗಿ ಗ್ರಾಮ ಪಂಚಾಯತಕ್ಕೆ 161 ಮನೆಗಳು ಬಂದಿದ್ದವು. ಗ್ರಾಮ ಸಭೆಯಲ್ಲಿ ಅವುಗಳ ಹಂಚಿಕೆಯಾಗಿದೆ. ಆದರೆ ಈವರೆಗೆ ಕಾರ್ಯಾದೇಶ ಬಂದಿಲ್ಲ. ಇದರಿಂದ ಫನಾಭವಿಗಳಿಗೆ ಸಮಸ್ಯೆಯಾಗಿದೆ. ಕೆಲವರು ಮನೆ ನರ‍್ಮಾಣಕ್ಕೆ ವಾಸದ ಮನೆಗಳನ್ನು ತೆರವುಮಾಡಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಮಳೆಗಾಲ ಎದುರಾಗಿರುವದರಿಂದ ಅವರಿಗೆ ತೊಂದರೆಯಾಗಲಿದೆ. ಕೂಡಲೇ ಕಾರ್ಯಾದೇಶ ನೀಡುವಲ್ಲಿ ಸಂಬoಧಿಸಿದವರು ಮುಂದಾಗಬೇಕು ಎಂದು ಶಿರಳಗಿ ಗ್ರಾ.ಪಂ ಅಧ್ಯಕ್ಷೆ ಲತಾ ನಾಯ್ಕ ಹಾಗೂ ಉಪಾಧ್ಯಕ್ಷ ಶ್ರೀಕಾಂತ ಭಟ್ ಹೇಳಿದರು.

ಅವರು ಗ್ರಾಪಂ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಈ ಹಿಂದಿನ ವರ್ಷಗಳಲ್ಲಿ ವಸತಿ ಯೋಜನೆಯಲ್ಲಿ ಮನೆಗಳು ದೊರೆಕಿರಲಿಲ್ಲ. ಕಳೆದ ಬಾರಿ 27 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಶಿರಳಗಿ ಗ್ರಾಮ ಪಂಚಾಯತನಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಮುಂದೆಯೂ ಇದೇ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗುವದು. ಪ್ರತಿವರ್ಷ 18 ಲಕ್ಷ ರೂ.ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ದೊರೆಯುತ್ತಿದ್ದು ಆಡಳಿತಾತ್ಮಕ ವೆಚ್ಚಕ್ಕೆ ರಾಜ್ಯ ಸರಕಾರದಿಂದ 10 ಲಕ್ಷ ರೂ.ದೊರೆಯುತ್ತಿದೆ. ಶಾಸಕರ ಅನುದಾನದಲ್ಲಿ 5 ಕೋಟಿ ರೂ.ಬಂದಿತ್ತು. ಗ್ರಾ.ಪಂ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.

ವಿದ್ಯುತ್ ದರ ಏರಿಕೆಯಾಗಿರುವದರಿಂದ ಗೃಹ ಜ್ಯೋತಿ ಯೋಜನೆಗೆ ತೊಡಕುಂಟಾಗುತ್ತಿದೆ. ಶಕ್ತಿಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಸ ಆಗಿದೆ. ಆದರೆ ನಮ್ಮ ಭಾಗದಲ್ಲಿ ಬಸ್ ವ್ಯವಸ್ಥೆ ಆಗಬೇಕು.ನೂತನ ಶಾಸಕರು ಗ್ರಾ.ಪಂ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಕೋರಿಕೊಳ್ಳುತ್ತೇನೆ ಎಂದರು.

300x250 AD

ಗ್ರಾ.ಪಂ ಸದಸ್ಯರಾದ ಮಾರುತಿ ನಾಯ್ಕ, ರಾಮ ನಾಯ್ಕ, ಧನಂಜಯ ನಾಯ್ಕ, ನೇತ್ರಾವತಿ ಮಡಿವಾಳ, ಮಹಾಲಕ್ಷ್ಮಿ ನಾಯ್ಕ, ಶಶಿಕಲಾ ಹರಿಜನ ಇದ್ದರು.

Share This
300x250 AD
300x250 AD
300x250 AD
Back to top