ಹಾವೇರಿ: ತಾಲೂಕಿನ ಬಿಸನಳ್ಳಿಯ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ,ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆ, ಶ್ರೀ ಕ್ಷೇತ್ರ ಕಾಶೀ ಜಂಗಮವಾಡಿ ಖಾಸಾ ಶಾಖಾಮಠದಲ್ಲಿ ಜೂ. 18 ರಂದು ಶಿರಸಿಯ ಗ್ರೀನ್ ಕೇರ್ (ರಿ.) ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಠದ ಖಜಾಂಜಿಯವರಾದ ಗದಿಗೆಪ್ಪ ಮಾಮಲೇ ಪಟ್ಟಣ ಶೆಟ್ಟರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರಸಿಯ ಡಾ. ಆದಿತ್ಯ ಫಡ್ನಿಸ್ ಮತ್ತು ಡಾ. ರಾಧಿಕಾ ಮರಾಠೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ್ ತೋನ್ಸೆ, ಸಂಸ್ಥೆಯ ನಿರ್ದೇಶಕರುಗಳಾದ ಗಜಾನನ ಭಟ್, ಆಶಾ ಡಿಸೋಜಾ, ಉದಯ ನಾಯ್ಕ್ ಉಪಸ್ಥಿತರಿದ್ದರು. ಮಠದ ವೈದ್ಯರಾದ ಡಾ. ಅರುಣ್ ನರೇಗಲ್ ಮತ್ತು ಮಠದ ಗುರುಗಳಾದ ಮಲ್ಲಿಕಾರ್ಜುನಯ್ಯ ಎಳಮಲ್ಲಿ ಮಠ ಉಪಸ್ಥಿತರಿದ್ದರು. ಶ್ರೀ ಮಠಕ್ಕೆ ಗ್ರೀನ್ ಕೇರ್ ಸಂಸ್ಥೆಯವರು ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿದರು.
ಶ್ರೀಮಠದ ವ್ಯವಸ್ಥಾಪಕರು ಡಾll ಆದಿತ್ಯ ಫಡ್ನಿಸ್, ಡಾll ರಾಧಿಕಾ ಮರಾಠೆ ಮತ್ತು ಗ್ರೀನ್ ಕೇರ್ ಸಂಸ್ಥೆಯ ಎಲ್ಲಾ ನಿರ್ದೇಶಕರುಗಳನ್ನು ಸನ್ಮಾನಿಸಿ ಗೌರವಿಸಿದರು. ವಿನಾಯಕ್ ಮುದಿಗೌಡರ್ ಸ್ವಾಗತಿಸಿ ವೀರೇಶ್ ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿದರು ಶಿಬಿರದಲ್ಲಿ 200 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಪಾಸಿಸಿ ಸೂಕ್ತ ಔಷಧಿಗಳನ್ನು ಕೊಡಲಾಯಿತು