ಶಿರಸಿ: ತಾಲೂಕಿನ ಸಾಲ್ಕಣಿಯ ಸ್ಮಿತಾ ಹೆಗಡೆಗೆ ಬಿಜಾಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯವು ಮೇ.16 ರಂದು ಡಾಕ್ಟರೇಟ್ ಪದವಿಯನ್ನು ನೀಡಿದೆ.
‘ಜೆನೆಟಿಕ್ ಆ‍್ಯಂಡ್ ಮಾಲಿಕ್ಯುಲರ್ ಪ್ರೊಫೈಲಿಂಗ್ ಆಫ್ ಜಿಜೆಬಿ2 ಜೀನ್ ಇನ್ ಡೆಫ್ ಮ್ಯೂಟ್ ಪಾಪುಲೇಷನ್ ಆಫ್ ನಾರ್ತ್ ಕರ್ನಾಟಕ’ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಸ್ಮಿತಾ ಮಂಡಿಸಿದ್ದರು. ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಆ್ಯನಾಟಮಿ ವಿಭಾಗದ ಮುಖ್ಯಸ್ಥ ಡಾ.ಆರ್.ಎಸ್.ಬುಳಗೌಡ ಮತ್ತು ಧಾರವಾಡದ ಡೈರೆಕ್ಟರ್ ಕರ್ನಾಟಕ ಇನ್ಸ್ಟಿಟ್ಯೂಟ್ ಫಾರ್ ಡಿಎನ್ಎ ರಿಸರ್ಚ್‍ನ ಪ್ರೊ.ಪ್ರಮೋದ್ ಬಿ. ಗಾಯಿ ಮಾರ್ಗದರ್ಶಕರಾಗಿದ್ದರು.
ಸ್ಮಿತಾ ಹಲವಾರು ಸಂಶೋಧನಾ ಪ್ರಬಂಧವನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸ್ಮಿತಾ ಹೆಗಡೆ ಸಾಲ್ಕಣಿಯ ರಾಮಚಂದ್ರ ಹೆಗಡೆ ಮತ್ತು ನೇತ್ರಾವತಿ ಹೆಗಡೆ ಇವರ ಸುಪುತ್ರಿಯಾಗಿದ್ದಾರೆ.