ಕಾರವಾರ: ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ನಾಡುಮಾಸ್ಕೇರಿ ಗೋಕರ್ಣ ಹೋಬಳಿ ಕುಮಟಾ, ಇಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 6ರಿಂದ 10ನೇ ತರಗತಿಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ ಭೋಧಿಸಲು ಅತಿಥಿ ಶಿಕ್ಷಕರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಬಿ.ಎ.ಬಿ. ಇಡಿ. ಟಿಇಟಿ ಕಡ್ಡಾಯವಾಗಿ ಪೂರೈಸಿರಬೇಕು, ಸಮಾಜ ವಿಜ್ಞಾನ ಶಿಕ್ಷಕರು ಬಿ.ಎ.ಬಿ. ಇಡಿ, ಟಿಇಟಿ ಕಡ್ಡಾಯವಾಗಿ ಪೂರೈಸಿರಬೇಕು ಹಾಗೂ ಕಂಪ್ಯೂಟರ್ ಶಿಕ್ಷಕರ ಬಿಸಿಎ/ ಎಂಸಿಎ/ ಎಂಎಸ್‌ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವ ಧನ ರೂ.16,650 ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಮೇ.25 ರೊಳಗಾಗಿ ಸ್ವ- ವಿವರ ಮತ್ತು ವಿದ್ಯಾರ್ಹತೆಯ ದಾಖಲೆಗಳೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಾಡುಮಸ್ಕೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9480143053, 08386-201177, 9945989639 ಗೆ ಸಂಪರ್ಕಿಸಿ ಎಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ