ಶಿರಸಿ: ತಾಲೂಕಿನ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ತೆರಕನಹಳ್ಳಿಯಲ್ಲಿ ನಡೆಯುವ ಶ್ರೀಮಾರಿಕಾಂಬಾ ದೇವಿಯ ವಾರ್ಷಿಕೋತ್ಸವ ಮತ್ತು ನೂತನ ಕಟ್ಟಡದಲ್ಲಿ ಶ್ರೀಮಾರುತಿ ದೇವರ ಪ್ರತಿಷ್ಠಾಪನಾ ಮಹೋತ್ಸವ ಮೇ. 19 ಮತ್ತು 20ರಂದು ನಡೆಯಲಿದೆ.
ಮೇ.19ರಂದು ಮುಂಜಾನೆ ಶ್ರೀಮಾರಿಕಾಂಬಾ ದೇವಿಯ ವಾರ್ಷಿಕ ಉತ್ಸವದ ನಿಮಿತ್ತ ಸ್ಥಳ ಶುದ್ಧಿ ಹೋಮ, ಶ್ರೀದುರ್ಗಾ ಸಪ್ತಶತಿ ಪಾರಾಯಣ, ಭೂತರಾಜನ ಪೂಜೆ, ಕುಂಕುಮಾರ್ಚನೆ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಂಜೆ ಸಪ್ತಶುದ್ಧಿ, ರಾಕ್ಷೋಘ್ನ, ವಾಸ್ತುಹವನ, ವಾಸ್ತು ಬಲಿ, ಯಾಗಶಾಲಾ ಪ್ರವೇಶ, ಕಲಶ ಸ್ಥಾಪನೆ, ಅಧಿವಾಸಾದಿಗಳು ನಡೆಯಲಿದೆ.
ಮೇ. 20ರಂದು ಮುಂಜಾನೆ 9 ಗಂಟೆಗೆ ಶಿಖರ ಕಲಶ ಪ್ರತಿಷ್ಠೆ, ಪ್ರಾಸ ಪೂಜೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ ಭಜನಾ ಕಾರ್ಯಕ್ರಮ, ದೀಪೋತ್ಸವ ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ಇತ್ಯಾದಿ ನಡೆಯಲಿದೆ.
ನಂತರ ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ದೇವಸ್ಥಾನ ಕಮಿಟಿ ಅಧ್ಯಕ್ಷ ಗಂಗಾಧರ ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸುವರು. ನಂತರ ರಾತ್ರಿ ‘ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು’ ನಾಟಕ ಪ್ರದರ್ಶನ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.