• Slide
    Slide
    Slide
    previous arrow
    next arrow
  • ಕಿಡ್ನಿ ವೈಫಲ್ಯ: ಸಹಾಯ ಹಸ್ತಕ್ಕಾಗಿ ಮನವಿ

    300x250 AD

    ಶಿರಸಿ : ಇಳಿ ವಯಸ್ಸಿನಲ್ಲಿ ಮಗನನ್ನೂ ನೋಡಿಕೊಂಡು, ಮನೆಯ ಜವಾಬ್ದಾರಿಯನ್ನೂ ಹೊರಬೇಕಾದ ಸ್ಥಿತಿ ಶಿರಸಿ ನಗರದ ತಾಯಿಯೊಬ್ಬರಿಗೆ ಬಂದೋದಗಿದೆ. ಇದರಿಂದ ಆರ್ಥಿಕ ಸಹಾಯಕ್ಕಾಗಿ ಸಾರ್ವಜನಿಕರ ಮೊರೆ ಹೋಗಿದ್ದು, ಜನರ ಸಹಕಾರ ಸಂಸಾರಕ್ಕೆ ಅಗತ್ಯವಿದೆ.

    ನಗರದ ಭೀಮನಗುಡ್ಡದ ಪವನ್ ಎಂಬ ಕೇವಲ 29 ವರ್ಷದ ವ್ಯಕ್ತಿಗೆ ಕಿಡ್ನಿ ಪೆಲ್ಯೂವರ್ ಆಗಿ ಮನೆಯಲ್ಲಿ ಕುಳಿತುಕೊಳ್ಳುವ ಸ್ಥಿತಿಯಿದೆ. ಇತನಿಗೆ ತಂದೆಯಿಲ್ಲದ ಕಾರಣ ಇಳಿ ವಯಸ್ಸಿನಲ್ಲೂ ತಾಯಿಗೆ ಮಗನ ಮತ್ತು ಸಂಸಾರ ಸಾಕುವ ಜವಾಬ್ದಾರಿ ಬಂದಿದೆ.

    ಈ ಹಿಂದೆ ಈತ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ. ಆಮೇಲೆ ಬೆಂಗಳೂರಿನಲ್ಲಿ ಜ್ಯೂಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಹೋದ ಸಂದರ್ಭದಲ್ಲಿ ಕಿಡ್ನಿಗೆ ಹೊಡೆತ ಬಿದ್ದು, ಪೆಲ್ಯೂವರ್ ಆಗಿದೆ. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈಗ ಹೆಚ್ಚಿನ ಚಿಕಿತ್ಸೆ ನೀಡಲು ಆರ್ಥಿಕ ಸಹಾಯದ ಅಗತ್ಯವಿದೆ.

    300x250 AD

    ಮೊದಲು ಯಾರ ಬಳಿಯೂ ಸಹಾಯ ಕೇಳದೇ ಪವನ್ ತಾಯಿಯೇ ಸಂಸಾರ ನಿಭಾಯಿಸಿದ್ದಾರೆ. ಈಗ ಇರುವ ಒಬ್ನ ಮಗನ ಬದುಕು ಉಳಿಸಲು ಸಹಾಯಕ್ಕಾಗಿ ಮೊರೆ ಹೋಗಿದ್ದು, ದಾನಿಗಳು ಸುಮತಿ ಮಾದೇವ್ ನಿಲೇಕಣಿ ಎಂಬ ಹೆಸರಿನ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಟಿಎಸ್ಎಸ್ ಸಮೀಪದ ಖಾತೆಗೆ ( ಸಂಖ್ಯೆ : 64480100001573, ಐಎಫ್.ಎಸ್ಸಿ ಕೋಡ್ BARBOUJAPMC ) ಆರ್ಥಿಕ ಸಹಕಾರ ನೀಡಲು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ Tel:+917406852792 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ.

    Share This
    300x250 AD
    300x250 AD
    300x250 AD
    Leaderboard Ad
    Back to top