ಶಿರಸಿ: ಕಾನೂನಿನ ಚೌಕಟ್ಟಿನಡಿ ರಚನೆಯಾಗಿ ಸೇವಾ,ಸುರಕ್ಷಾ,ಸಂಸ್ಕಾರ ಎಂಬ ಧ್ಯೇಯದೊಂದಿಗೆ ರಾಷ್ಟ್ರೀಯ ಹಿತಕ್ಕೋಸ್ಕರ ನಿಸ್ವಾರ್ಥಸೇವೆ ಮಾಡುತ್ತಿರುವ ಭಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ನಿಲುವನ್ನು ವಿಶ್ವಹಿಂದೂ ಪರಿಷತ್ ವಿರೋಧಿಸುತ್ತದೆ ಎಂದು ವಿಶ್ವಹಿಂದೂ ಪರಿಷತ್ ಶಿರಸಿ ಘಟಕ ಉಪಾಧ್ಯಕ್ಷ ಕೇಶವ ಮರಾಠೆ ಮಂಜುಗುಣಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂಬ ಹೇಳಿಕೆಗೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್, ಪ್ರಸಕ್ತ ಚುನಾವಣಾ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾನದ ಕುರಿತು ಜಾಗೃತಿ ಮಾಡಿಸಿ,ಯಾವುದೇ ಪಕ್ಷವನ್ನು ಹೆಸರಿಸದೇ,ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ವಿನಂತಿಸುತ್ತಿದ್ದೆವು.
ಕೋಟ್ಯಾಂತರ ಹಿಂದುಗಳ ಶೃದ್ಧೆಯ ರಾಮನ ಅಸ್ತಿತ್ವವನ್ನು, ರಾಮ ಸೇತುವೆಯನ್ನೇ ಪ್ರಶ್ನಿಸುತ್ತಿದ್ದ ಕಾಂಗ್ರೆಸ್ ಇದೀಗ ರಾಮ ಭಕ್ತರ ಸೇನೆ ಬಜರಂಗದಳವನ್ನು ನಿಷೇಧಿಸುವ ತಮ್ಮ ಪ್ರಣಾಳಿಕೆಯನ್ನು ಹಿಂಪಡೆದು ಬೇಷರತ್ತಾಗಿ ಹಿಂದೂ ಸಮಾಜದ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನು ಬಜರಂಗಿಯೇ ಮಾಯವಾಗಿಸುತ್ತಾನೆ ಎಂದು ಎಚ್ಚರಿಕೆಯ ಮಾತನ್ನು ಹೇಳಿದ್ದಾರೆ.