ಹಲಾಲ್ ಎನ್ನುವುದು ಕೇವಲ ಆಚರಣೆ ತಿನ್ನುವಿಕೆಗೆ ಸಂಬಂಧಿಸಿಲ್ಲ. ಹಲಾಲ್ ಎಂಬುದು ಸಮಾಂತರ ಆರ್ಥಿಕತೆಯಾಗಿ ಜಗದಾದ್ಯಂತ ಇದೆ. ಈ ವಿಚಾರ ಅರಿತ ಯುರೋಪಿನ ಆರು ದೇಶಗಳು ಹಲಾಲ್ ಪ್ರಮಾಣೀಕರಣವನ್ನು ನಿಷೇಧಿಸಿವೆ. ಭಾರತದಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುವ ಜಿಹಾದಿ ಶಕ್ತಿಗಳು ಬೆಳೆಯುತ್ತಿದ್ದರೆ ಇದಕ್ಕೆ ಹಲಾಲ್ ಎಕಾನಮಿ ಕಾರಣ. ಬಲಿಷ್ಟವಾಗಿ ಬೆಳೆಯುತ್ತಿರುವ ಭಾರತದಂತಹ ಆರ್ಥಿಕತೆಗೆ ಇದು ಚಿಂತನೀಯ ವಿಷಯ. ಮತ್ತು ದೇಶದ ಭದ್ರತೆ ಶಾಂತಿಯ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುವುದೇ ಆದಲ್ಲಿ ರಕ್ಷಣೆಯ ಮಟ್ಟ ಹಾಕಲೇಬೇಕಾಗುತ್ತದೆ.
ಹಲಾಲ್ ಆರ್ಥಿಕತೆ ಷರಿಯಾ ಕಾನೂನನ್ನು ಆಧರಿಸಿದೆ. ಇಸ್ಲಾಮಿಕ್ ರೀತಿ ರಿವಾಜಿನ ಮೇಲೆ ನಿಂತಿದೆ. ಖಾಸಗಿ ಮುಸ್ಲಿಂ ಸಂಸ್ಥೆಗಳು ಇದನ್ನು ಪ್ರಮಾಣಿಕರಿಸುವವರು ಹೊರತು ಸರ್ಕಾರದ ಅಂಗವಲ್ಲ. ಈ ಸರ್ಟಿಫಿಕೇಟ್ ನೀಡುವ ಸಲುವಾಗಿ ಹಣ ಸಂಗ್ರಹಿಸುತ್ತವೆ ಮತ್ತು ಆ ಹಣ ಪ್ರತ್ಯೇಕ ಆರ್ಥಿಕ ಶಕ್ತಿಯಾಗಿದೆ ಅದೇ ಹಲಾಲ್ ಎಕಾನಮಿ. ಈ ಹಲಾಲ್ ಆರ್ಥಿಕತೆಗೆ ಇಸ್ಲಾಮಿಕ್ ಬ್ಯಾಂಕ್ ಬೆಂಬಲ ನೀಡುತ್ತದೆ. ಎರಡು ಪರಸ್ಪರ ಸಹಕಾರ ನೀಡುತ್ತ ಬೆಳೆಯುತ್ತವೆ. ತಂತಮ್ಮ ಉದ್ದೇಶಿತ ಕೆಲಸಕ್ಕೆಲ್ಲ ಆ ಹಣ ಬಳಸುತ್ತಾರೆ.
ಭಾರತವನ್ನು ಬ್ರಿಟಿಷರು ನೂರೈವತ್ತು ವರ್ಷ ಆಳಿದರು. ವ್ಯಾಪಾರ ಕಾರಣಕ್ಕೆ ಬಂದು ಆನಂತರ ಸ್ವಯಂ ಆಡಳಿತ ನಡೆಸಿದ್ದನ್ನು ಭಾರತೀಯರು ನೆನಪಿಸಿಕೊಳ್ಳಬೇಕು. ಆಮೇಲೇನಾಯಿತು ಎಂಬುದು ಮರೆಯಬಾರದು.
ಎರಡುನೂರಾ ಅರವತ್ತು ಕೋಟಿ ಇಸ್ಲಾಂ ಜನಸಂಖ್ಯಾ ಮಾರುಕಟ್ಟೆಯಲ್ಲಿ ಅರ್ಧದಷ್ಟು ಜನ ಯುವಕರು. ವ್ಯವಹಾರ ಸಂಸ್ಥೆಗಳು ಬೆಳೆಯಬೇಕಾದರೆ ಈ ಸಂಗತಿ ಕಡೆಗಣಿಸುವಂತಿಲ್ಲ. ಈ ಸಂಖ್ಯಾಬಲ ಮುಂದಿಟ್ಟೇ ಹಲಾಲ್ ಪ್ರಮಾಣೀಕರಣವನ್ನು ನಿಯಂತ್ರಿಸುತ್ತವೆ ಹಾಗೂ ಆರ್ಥಿಕತೆಯನ್ನು ಸಹ. ನಿಜವಾಗಿ ಈ ಹಲಾಲ್ ಅನ್ವಯ ಆಗುವುದು ಮಾಂಸಾಹಾರಕ್ಕೆ ಮಾತ್ರ. ಆದರೆ ಮಾಂಸೇತರ ಉತ್ಪನ್ನಗಳಿಗೂ ಹಲಾಲ್ ಪ್ರಮಾಣಪತ್ರ..!! ಅಂದರೆ ಮುಸ್ಲಿಮರು ಖರೀದಿಸುವುದೆಲ್ಲ ಹಲಾಲೀಕರಣವಾಗಿರಬೇಕೆಂಬ ಇಂಗಿತ. ಅಂದರೆ ಇದು ಒಂದು ಭಿನ್ನ ವ್ಯವಸ್ಥೆಯ ಸೃಷ್ಟಿಯೇ ಆಗಿದೆ.
ಹಲಾಲ್ ಎಂಬುದನ್ನು ಲ್ಯಾಬ್ ಪರೀಕ್ಷಿಸಿ ಹೇಳುವುದಿಲ್ಲ, ಅದನ್ನು ಕಟುಕ ಹೇಳಬೇಕಾಗುತ್ತದೆ. ಹೀಗಿದ್ದೂ ಕೂಡ ಹಲಾಲ್ ಯಾಕೆ ಹೇರಿಕೆಯಾಗುತ್ತಿದೆ? ಬೆಳೆಯುತ್ತಿದೆ? ಮರ್ಮವೇನು? ಇದು ಪ್ರತ್ಯೇಕ ಆರ್ಥಿಕತೆ ಬೆಳೆಸುವ ತಂತ್ರವಾಗಿದೆ ಎಂದು ಸೂಕ್ಷ್ಮವಾಗಿ ಮನಗಾಣಬಹುದು.
ವಿಶನ್ 2047: ಅಂದರೆ ಭಾರತವನ್ನು 2047ರ ವೇಳೆಗೆ ಇಸ್ಲಾಮೀಕರಣಗೊಳಿಸಿವುದು. ಈ ಇಸ್ಲಾಮಿಕ್ ಸ್ಟೇಟ್ ಸಾಕಾರಗೊಳಿಸಲು ಪಿಎಫ್ಐ ಅಂತಹ ಸಂಸ್ಥೆಗಳಿಗೆ ಹಣಮೂಲ ಅವಶ್ಯ. ಅದಕ್ಕೆ ದಾರಿ ಯಾವುದು? ಉತ್ತರ ಹಲಾಲ್ ಆರ್ಥಿಕತೆ.
ಇಸ್ಲಾಂ ಪ್ರಕಾರ ಮಾದಕ ವ್ಯಸನ, ನಶೆ ಹತ್ತಿಸಿಕೊಳ್ಳುವುದು ಹರಾಮಿತನ. ಇಸ್ಲಾಮಿಕರಣ ಭಯೋತ್ಪಾದನೆಯ ಮೂಲಕ. ಭಯೋತ್ಪಾದನೆ ಬೆಳೆಸಲು ಮಾರಕಾಯುಧಗಳು ಬೇಕು ಅದಕ್ಕೆ ಹಣ ಮುಖ್ಯ. ಅದಕ್ಕೆ ಆರ್ಥಿಕತೆಯೆ ಬಲ. ಹಲಾಲ್ ಆರ್ಥಿಕತೆ ಇದರ ಹಿಂದಿನ ಶಕ್ತಿ.
ಹಲಾಲ್ ಸರ್ಟಿಫಿಕೇಟ್ ಅನ್ನು ಮಾನವೀಯತೆ ದೃಷ್ಟಿಯಿಂದ ಹಲವಾರು ದೇಶಗಳಲ್ಲಿ ಅಂಗೀಕರಿಸಿದ್ದಾರೆ. ಧಾರ್ಮಿಕ ನಂಬುಗೆಯಾಗಿ ಗೌರವಿಸಿದ್ದಾರೆ.
ಈ ಹಲಾಲ್ಕೋರತನ ಬೆಳಕಿಗೆ ಬಂದದ್ದು ವೈಜ್ಞಾನಿಕ ಸಂಶೋಧನೆಗಳು ಹೊರಬಿದ್ದ ಬಳಿಕ. ಎನಿಮಲ್ ಕ್ರುಯೆಲ್ಟಿ ಪ್ರಿವೆನ್ಷನ್ ಆ್ಯಕ್ಟ್ ಚಳುವಳಿ ಜೋರಾದಾಗ ಹಲಾಲ್ ಕುರಿತ ಪ್ರಶ್ನೆ ಎದ್ದಿತು. ಯಾಕೆಂದರೆ ಹಲಾಲ್ ಪ್ರಕ್ರಿಯೆ ಮೂಲಕ ಪ್ರಾಣಿವಧೆ ಅತ್ಯಂತ ಕ್ರೂರವಾದ ಮಾರ್ಗ. ಕೈದಿಗಳಿಗೇ ಇಂದು ಯಾತನಾ ರಹಿತ ಮರಣ ದಯಪಾಲಿಸುವ ಬಗೆ ಹೇಗೆಂದು ಸುಪ್ರೀಂ ಕೋರ್ಟೇ ಕೇಳಿರುವಾಗ ? ಮೂಕ ಪ್ರಾಣಿಗಳ ಮೇಲೆ ಆಹಾರಕ್ಕಾಗಿ ಈ ಕ್ರೌರ್ಯ ಸಮಂಜಸವೇ?
ಸಂಶೊಧಕ ಕ್ರೇಕ್ ಜಾನ್ಸನ್ 2009ರಲ್ಲಿ ಹಲಾಲ್ ಕುರಿತು ವಿಸ್ತೃತ ಸಂಶೋಧನೆ ಕೈಗೊಂಡರು. ವಧೆಯ ಬಳಿಕ ಪ್ರಾಣಿಗಳ್ಲಿ 20-30 ಸೆಕೆಂಡ್ ಕಾಲ ಸಂವೇದನೆ ಹಾಗೇ ಇರುವುದನ್ನು, ಅಪಾರ ವೇದನೆ ಅನುಭವಿಸುವುದನ್ನು ಕಂಡು ತುಂಬ ಮನನೊಂದರು. ಹಾಗಾಗಿ ಅದನ್ನು ಪಾಲಿಸಬಾರದು ಎನ್ನುತ್ತಾರೆ.
ಲಕ್ಸಂಬರ್ಗ್, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್, ಸ್ವೀಡನ್.. ಮುಂತಾದ ದೇಶಗಳು ಹಲಾಲ್ ಬ್ಯಾನ್ ಮಾಡಿದವು. ಆಗ ಅಲ್ಲಿನ ಮುಸ್ಲಿಮರು ವಾರ್ಷಿಕ ಎರಡು ದಿನವಾದರೂ ಹಲಾಲ್ ಆಚರಣೆಗೆ ಅವಕಾಶ ಕೋರಿದ್ದರು, ಸರ್ಕಾರ ಅದಕ್ಕೆ ಅನುಮತಿಸಿತ್ತು.
ಈ ವೈಜ್ಞಾನಿಕ ವಾದ ಎಲ್ಲ ಯಾಕೆ ಎಲ್ಲ ಕಡೆ ಅನ್ವಯವಾಗುತ್ತಿಲ್ಲ. ಎಲ್ಲ ಕಡೆ ವಿಜ್ಞಾನ ಆವರಿಸುವ ಭಾರತದಲ್ಲಿ ಇದರ ಕುರಿತೇಕೆ ಮೌನ? ಈ ಸಂಶೋಧನೆ ಸ್ವೀಕರಿಸಬೇಕಲ್ಲವೆ?
ಪ್ರಾಣಿವಧೆ ಕಾಯ್ದೆ ಅಡಿ ಕ್ರೂರವಾದ ಪ್ರಾಣಿ ವಧಾ ವಿಧಾನ ನಿಷೇಧಿಸಿದ್ದಾರೆ. ಒಂದು ವೇಳೆ ಪ್ರಾಣಿ ವಧೆ ಧಾರ್ಮಿಕವಾಗಿದ್ದರೆ ಈ ಕಾನೂನು ಅನ್ವಯವಾಗುವುದಿಲ್ಲ. ಈ ಕಾರಣಕ್ಕಾಗಿ ಹಲಾಲ್ ಒಂದು ಧಾರ್ಮಿಕ ಆಚರಣೆ ಎಂದು ಕಾನೂನಿನಿಂದ ಹೊರಗಿಡಲಾಗಿದೆ. ಆದರೆ ವೈಜ್ಞಾನಿಕ ಎಂದು ಇತರ ಧಾರ್ಮಿಕ ಆಚರಣೆಗಳು ಭಾರತದಲ್ಲಿ ಬದಲಾಯಿಸಿದ್ದಾರೆ, ಆದರೆ ಹಲಾಲ್ ವಿಚಾರದಲ್ಲಿ ಮಾತ್ರ ವೈಜ್ಞಾನಿಕತೆಗೆ ಯಾವುದೇ ಕಿಮ್ಮತ್ತಿಲ್ಲ. ಇದೊಂಥರ ಇಬ್ಬಗೆಯ ನೀತಿ.
ಹಲಾಲ್ ಬಗ್ಗೆ ವಿರೋಧವಿಲ್ಲ. ಮುಸ್ಲಿಮರ ಆಚರಣೆ . ಮಾಡಲಿ. ಆದರೆ ಇತರೆಡೆ ಇದು ಅನ್ವಯ ಯಾಕೆ. ? ಹಲವಾರು ಕಡೆ , ಕೇವಲ ಹಲಾಲ್ ಆಹಾರೋತ್ಪನ್ನ ಮಾತ್ರ ಸಿಗುತ್ತದೆ ಎಂಬುದೇಕೆ? ಮುಸ್ಲಿಮ್ ಕಾನೂನು ಆಚರಣೆ ಇತರರಿಗೆ ಕಡ್ಡಾಯವಾಗುವುದು ಹೇಗೆ?
ಏರ್ ಇಂಡಿಯಾದಲ್ಲಿ ಹಲಾಲ್ ಆಹಾರಗಳು ಮಾತ್ರ ಒಪ್ಪಿತ ಎಂದಿತು.
ಐಆರ್ಸಿಟಿಸಿ ನಾವು ಕೊಡುವುದು ಹಲಾಲ್ ಮಾಂಸ ಮಾತ್ರ ಎಂದು ಘೋಷಿಸಿತು. ಭಾರತದ ಪಾರ್ಲಿಮೆಂಟಿನಲ್ಲಿ ನಾಲ್ಕು ರೆಸ್ಟೋರೆಂಟ್ ಗಳಿವೆ. ಅದಕ್ಕೆ ಆಹಾರ ಐಆರ್ಸಿಟಿಸಿಯಿಂದ ಬರುತ್ತದೆ ಹೊರತು ಪಾರ್ಲಿಮೆಂಟಿನಲ್ಲಿ ತಯಾರಿಸುವುದಿಲ್ಲ. ಅಂದರೆ ಪಾರ್ಲಿಮೆಂಟಿನಲ್ಲಿ ಕೂಡ ಹಲಾಲ್ ಮಾತ್ರವ ದೊರೆಯುತ್ತದೆ ಎಂದಂತಾಯಿತು.
ಎಲ್ಲಿಂದಲೋ ಒತ್ತಡವಿರುವ ಕಾರಣ , ಅಥವಾ ಅವಜ್ಞೆಯ ಕಾರಣ ಇದು ನಡೆಯುತ್ತಲಿದೆ. ಇದು ಬದಲಾಗಬೇಕಲ್ಲವೆ.
ಯಾಕೆಂದರೆ ಸಂಸತ್ತಿಗೆ ಬರುವ ಎಲ್ಲರೂ ಪಾರ್ಲಿಮೆಂಟ್ ನಲ್ಲಿರುವ ಆಹಾರವನ್ನು ಸೇವಿಸಬೇಕಾಗುತ್ತದೆ. ಉದಾಹರಣೆಗೆ, ಸಿಖ್ಖರ ಪದ್ಧತಿ ಪ್ರಕಾರ ಕುಥಾಮಾನ್ ಸೇವನೆ ಅರ್ಥಾತ್ ಹಲಾಲ್ ನಿಷೇಧ. ಆದರೆ ಸಂಸತ್ತಿಗೆ ಬರುವ ಸಿಖರು ಅಲ್ಲಿಯೇ ಭೋಜನ ಮಾಡಿದರೆ?
ಇದು ಅತಾರ್ಕಿಕ, ಅಸಂವಿಧಾನಿಕ ಮತ್ತು ನಮ್ಮ ಮೂಲಭೂತ ಧಾರ್ಮಿಕತೆಗೆ ಧಕ್ಕೆ ಸಹಾ ಹೌದು.
ಮೆಕ್ಡಿ ಸಹ 100% ಹಲಾಲ್. ಜೊಮ್ಯಾಟೊ ವ್ಯಕ್ತಿ ಒಬ್ಬ ಆಹಾರಕ್ಕೆ ಧರ್ಮಭೇದವಿಲ್ಲ, ಆಹಾರವೇ ಧರ್ಮ ಎನ್ನುತ್ತಾನೆ. ಅದೇ ಮುಸ್ಲಿಮನೊಬ್ಬ ಕೇಳಿದಾಗ ಹೌದು ಇದು ಹಲಾಲ್ ಆಹಾರವೆಂದು ಉತ್ತರ ನೀಡುತ್ತಾನೆ.
ಹೇಗಿದೆ ಇದು..?
ಇಂಡೋನೇಷ್ಯಾ ದಲ್ಲಿ ಹಲಾಲ್ ಇಂಡಸ್ಟ್ರಿಯಲ್ ಕ್ಲಸ್ಟರ್ ಸ್ಥಾಪಿಸುತ್ತಿದ್ಧರೆ. ಮುಂದೆ ಕೇವಲ ಹಲಾಲ್ ಅಲ್ಲ ಎಲ್ಲ ಉತ್ಪನ್ನ ಅಲ್ಲಿಂದ ಬರಬಹುದು. ಇದು ವ್ಯವಹಾರಕ್ಕೆ ಧಕ್ಕೆ ಆಗಬಹುದು. ಭಾರತದ ನಿರ್ಯಾತಕ್ಕೂ ಹೊಡೆತವನ್ನು ನೀಡುತ್ತದೆ. ಮೇಲಾಗಿ ಇದರ ಮೂಲಕ ಹಣ ಭಯೋತ್ಪಾನೆಗೂ ಸರಬರಾಜಾಗಬಹುದು. ಅಮೇರಿಕಾದಲ್ಲಿ ಹಮಾಸ್ ಮೊದಲಾದ ಮುಸ್ಲಿಮ್ ಸಂಘಟನೆಗಳಿಗೆ ಹಲಾಲ್ ಆರ್ಥಿಕತೆಯಿಂದಲೇ ಹಣ ಸಂದಾಯವಾಗಿದೆ.ಆಸ್ಟ್ರೇಲಿಯಾ ದಲ್ಲೂ ಸಹ ಇದೇ ತರ ಆಗಿದೆ. ಭಾರತದಲ್ಲಿ ಜಮಿಯತ್ ಉಲೆಮಾನ್ ಹಿಂದ್ ಇಂಥ ಕೃತ್ಯಗಲಕಿಗೆ ಕಾನೂನಾತ್ಮಕ ಸಹಾಯ ಮಾಡುತ್ತಿವೆ.
ಜಗತ್ತಿನಲ್ಲೆಲ್ಲ ಹಲಾಲ್ ಸ್ವೀಕರಿಸಿಲ್ಲ. ನಾಲ್ಕು ರಾಷ್ಟ್ರಗಳಲ್ಲಿ ನಾಲ್ಕು ಇಸ್ಲಾಮಿಕ್ ಸಂಘಟನೆಗಳೇ ಹಲಾಲ್ ಅನ್ನು ಮಾನ್ಯ ಮಾಡಿಲ್ಲ. ಯಾಕೆಂದರೆ ಖುರಾನ್ ಅಂತಿಮ. ಅದರಲ್ಲಿ ಹೇಳಿದ್ದು ಮಾತ್ರವೇ ಆಚರಿಸಬೇಕು. ಆದರೆ ಜಮಿಯತ್ ಉಲೇಮಾನ್ ಹಿಂದ್ ಪ್ರಿಜ್ಹಳಿಗೆ, ರೆಸಿಡೆನ್ಸಿಯಲ್ ಅಪಾರ್ಟ್ಮೆಂಟ್, ಡೇಟಿಂಗ್ ವೆಬ್ಸೈಟ್, ಮೈಕ್ರೋವೇವ್ಗಳಿಗೆಲ್ಲ ಹಲಾಲ್ ಪ್ರಮಾಣ ಪತ್ರ ನೀಡಿತು. ಇದು ಖುರಾನ್ ನಲ್ಲಿಲ್ಲ. ಹಲಾಲೀಕರಣ ಹರಾಮಿತನವಲ್ಲದೆ ಮತ್ತೇನು? ಎಂದು ಇಸ್ಲಾಮಿಕ್ ಸಂಘಟನೆಗಳೇ ಕೇಳಿವೆ.
ಖುರಾನ್ ವಾಕ್ಯವನ್ನು ಅತಿಕ್ರಮಣ ಮಾಡುವ ಕಾರಣ ಇದು ಅನ್ಇಸ್ಲಾಮಿಕ್ ಆಗುತ್ತದೆ.ಡೈರೆಕ್ಟರ್ ಜನರಲ್ ಆಫ್ ಫಾರೆನ್ ಟ್ರೇಡ್ ಡಿಜಿಎಫ್ಟಿ ಯ ನೋಟಿಫಿಕೆಶನ್ ನಲ್ಲಿ ಹಲಾಲ್ ವ್ಯವಸ್ಥೆ ಕುರಿತು ಸಾರ್ವಜನಿಕ ಅಭಿಪ್ರಾಯ ಕೇಳಿದ್ದಾರೆ. ಜನರು ಸರ್ಕಾರಕ್ಕೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕು.
ಹಲಾಲ್ ಕೂಡ ಆರ್ಟಿಐ ಅಡಿ ಬರಬೇಕು. ಇಸ್ಲಾಮಿಕ್ ಸಂಘಟನೆಗಳಿಗೆ ಈ ಹಣ ಬಳಕೆ ಆಗಬಾರದು. ಇದು ಕೇವಲ ಮಾಂಸಾಹಾರಕ್ಕೆ ಮಾತ್ರ ಸೀಮಿತವಾಗಿರಬೇಕು.. ಮುಂತಾದ ಅಭಿಪ್ರಾಯಗಳು ವ್ಯಕ್ತತವಾಗಿವೆ.
(ಹಲಾಲ್ ಜಿಹಾದ್ -ಆರ್ಥಿಕವಾಗಿ ಭಾರತವನ್ನು ನಿಯಂತ್ರಿಸುವ ಯತ್ನ)
ರಮೇಶ್ ಶಿಂಧೆ ಬರೆದ ಪುಸ್ತಕ ಸಂಬಂಧಿತ ಬರಹ.