ಶಿರಸಿ: ತಾಲೂಕಿನ ಹುತ್ಗಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಸರದ ಮೇಲೆ ಪರಿಣಾಮವನ್ನುಂಟು ಮಾಡುತ್ತಿರುವ ಕೋಳಿ ಉದ್ಯಮದ ಮೇಲೆ ಇನ್ನೈದು ದಿನಗಳಲ್ಲಿ ಅಧಿಕಾರಿಗಳು ಕ್ರಮ ಜರುಗಿಸದಿದ್ದರೆ ನಮ್ಮ ಹಕ್ಕಿಗಾಗಿ ಚುನಾವಣೆ ಬಹಿಷ್ಕರಿಸುವುದಾಗಿ ಹಾಲಳ್ಳ ಹುತ್ಗಾರ ಮಣಜವಳ್ಳಿ ಶಾಂತಿ ನಗರದ ಸಮಸ್ತ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಹುತ್ಗಾರ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ನಮ್ಮ ಭಾಗದಲ್ಲಿ ಹಲವಾರು ವರ್ಷಗಳಿಂದ ಕಾನೂನಿನ ಪರವಾನಗಿ ಇಲ್ಲದೇ ಕೋಳಿ ಉದ್ಯಮ ನಡೆಯುತ್ತಿದ್ದು, ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಪರಿಸರದ ಮೇಲೆ ಮತ್ತು ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುತ್ತಿದೆ. ಇದೇ ರೀತಿಯಾಗಿ ನಮ್ಮ ಭಾಗದಲ್ಲಿ ತ್ಯಾಜ್ಯ ಸಂಗ್ರಹಿಸಲು ಕಳೆದ ಒಂದೂವರೆ ವರ್ಷದ ಹಿಂದೆಯೇ ಸರಕಾರದಿಂದ ವಾಹನ ನೀಡಿದರೂ ಪಂಚಾಯಿತಿಯವರು ಸರಿಯಾಗಿ ನಿಭಾಯಿಸದೇ ಹಾಳುಗೆಡುವುತ್ತಿದ್ದಾರೆ.
ತಕ್ಷಣವೇ ಈ ಬಗ್ಗೆ ಕ್ರಮವಾಗ ಬೇಕು.ಇಲ್ಲವಾದಲ್ಲಿ ಗ್ರಾಮೀಣ ಭಾಗ ತ್ಯಾಜ್ಯದಿಂದ ತುಂಬಿ ನಾರುತ್ತದೆ. ಜಲಜೀವನ್ ಮಿಶನ್ ಅಡಿಯಲ್ಲಿ ಹುತ್ಗಾರ ಮತ್ತು ಹಾಲಳ್ಳದ ಕೆಲ ಭಾಗಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಈ ಎಲ್ಲಾ ಸಮಸ್ಯಗಳನ್ನು ಇನೈದು ದಿನಗಳಲ್ಲಿ ಬಗೆ ಹರಿಸದಿದ್ದರೆ 2023ರ ಸಾರ್ವತ್ರಿಕ ಚುನಾವಣೆ ಬಹೀಷ್ಕಾರ ಮಾಡುವುದಾಗಿ ತಿಳಿಸಿದರು.
ತಹಶೀಲ್ದಾರ ಡಾ.ಸುಮಂತ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಮನೆ ಇದ್ದರು.