Slide
Slide
Slide
previous arrow
next arrow

ಕೆಆರ್‌ಪಿಪಿ ಅಧಿಕಾರಕ್ಕೆ ತರುವುದೇ ನಮ್ಮ ಗುರಿ: ಸಂತೋಷ ರಾಯ್ಕರ

300x250 AD

ಮುಂಡಗೋಡ: ಪಕ್ಷವನ್ನು ಸಂಘಟಿಸಲು ಕೆಲವೇ ದಿನಗಳು ಇರುವುದರಿಂದ ಇದ್ದಷ್ಟೆ ಕಾಲದಲ್ಲಿ ಪಕ್ಷವನ್ನು ಬಲಪಡಿಸಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಗುರಿ ಎಂದು ಕರ್ನಾಟಕ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ)ದ ಕ್ಷೇತ್ರದ ಅಭ್ಯರ್ಥಿ ಸಂತೋಷ ರಾಯ್ಕರ ಹೇಳಿದರು.

ಅವರು ಶನಿವಾರ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕೆಆರ್‌ಪಿಪಿ ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದರು. ಶುಕ್ರವಾರ ಓಣಿಕೇರಿ, ಮರಗಡಿ, ಪಾಳಾ ಗ್ರಾಮಗಳಲ್ಲಿ ಕೈಗೊಂಡ ಪಕ್ಷದ ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕಿಂತ ಅಧಿಕ ಜನರು ವಿವಿಧ ಪಕ್ಷಗಳಿಂದ ಸೇರ್ಪಡೆಯಾಗಿದ್ದಾರೆ. ಕ್ಷೇತ್ರದ ಅರ್ಧದಷ್ಟು ಬಿಜೆಪಿ ಹಾಗೂ 1/4 ಭಾಗದಷ್ಟು ಕಾಂಗ್ರೆಸ್ ಮತಗಳು ನನಗೆ ಬರುತ್ತವೆ ಎಂದರು.

ಜೆಡಿಎಸ್ ನಾಯಕರು ತಮ್ಮ ಹಾಗೂ ಬೇರೆ ಪಕ್ಷದ ಅಭ್ಯರ್ಥಿಯ ಲಾಭಕ್ಕಾಗಿ ನನಗೆ ಟಿಕೆಟ್ ನೀಡದೆ ಬೇರೆ ಕ್ಷೇತ್ರದ ಜೆಡಿಎಸ್ ಧುರಿಣನಿಗೆ ಟಿಕೆಟ್ ನೀಡಿದರು. ಜೆಡಿಎಸ್ ಟಿಕೆಟ್ ಪಡೆದಿರುವ ಅಭ್ಯರ್ಥಿ ಕೇವಲ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ಸಂಘಟನೆಗೆ ತೊಡಗುವುದಿಲ್ಲ. ಒಂದೆರಡು ತಲೆಗಳು ಬಿಟ್ಟರೆ ಬಹುತೇಕ ಜೆಡಿಎಸ್ ನ ಕಾರ್ಯಕರ್ತರು ಕೆಆರ್‌ಪಿಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದರು. ಮುಂಡಗೋಡ ತಾಲೂಕನ್ನು ನಿರುದ್ಯೋಗಿಗಳಿಗೆ ನಿರಂತರ ಕೆಲಸ ಸಿಗುವ ಹಾಗೆ ಮಾಡುವುದು ನಮ್ಮ ಮೂಲ ಉದ್ದೇಶವಾಗಿದೆ. ಮೇ 5ನೇ ತಾರೀಖಿಗೆ ಮುಂಡಗೋಡನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 20 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಆ ಸಮಾವೇಶವನ್ನು ಗಾಲಿ ಜನಾರ್ಧನ ರೆಡ್ಡಿಯವರು ಉದ್ಘಾಟಿಸಿ ಮಾತನಾಡಲಿದ್ದಾರೆ ಎಂದ ಅವರು, ನಮ್ಮ ಪ್ರತಿ ಸ್ಪರ್ಧಿ ಕಾಂಗ್ರೆಸ್ ಎಂದು ಹೇಳಿದ್ದಾರೆ.

300x250 AD

ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ತುಕಾರಾಮ ಗುಡ್ಕರ ಮಾತನಾಡಿದರು. ಆಶಾ ರಾಯ್ಕರ, ಜಿಲ್ಲಾ ಯುವ ಅಧ್ಯಕ್ಷೆ ದೀಪಾ ರೇವಣಕರ, ಮಂಜುನಾಥ ಕಮ್ಮಾರ, ವಿನಾಯಕ ಸಾಳೊಂಕಿ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top