ಶಿರಸಿ: ತಾಲೂಕಿನ ಬನವಾಸಿಯ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಪರೀಕ್ಷೆಗೆ ಕುಳಿತ ಒಟ್ಟು 187 ವಿದ್ಯಾರ್ಥಿಗಳಲ್ಲಿ 179 ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಕೆಯೊಂದಿಗೆ ಉತ್ತೀರ್ಣರಾಗಿದ್ದು, ಕಾಲೇಜಿನ ಫಲಿತಾಂಶವು ಶೇಕಡಾ 95.7℅ ಆಗಿದೆ. ಕಲಾ ವಿಭಾಗದ ಒಟ್ಟು 76 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇವರಲ್ಲಿ 5 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 42 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು ಹನ್ನೆರಡು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ,ಒಟ್ಟೂ ಕಲಾ ವಿಭಾಗದ ಫಲಿತಾಂಶ 89.4 ಆಗಿದೆ.
ವಾಣಿಜ್ಯ ವಿಭಾಗದ ಒಟ್ಟು 70 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಈ ಭಾಗದಲ್ಲಿ ನೂರಕ್ಕೆ ನೂರು ಫಲಿತಾಂಶ ದಾಖಲಾಗಿದೆ. ಇವರಲ್ಲಿ 6 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 41 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದ ಒಟ್ಟು 41 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ವಿಜ್ಞಾನ ವಿಭಾಗದಲ್ಲಿ ನೂರಕ್ಕೆ ನೂರು ಫಲಿತಾಂಶ ದಾಖಲಾಗಿದೆ.
ಕಾಲೇಜು ಮಟ್ಟದಲ್ಲಿ ಕಲಾ ವಿಭಾಗದ ಪ್ರಿಯಾ ಈರಪ್ಪ ಗೌಡ್ರು(536) ಪ್ರಕೃತಿ ಮಹಾದೇವ ಹಳ್ಳಿಕೊಪ್ಪದವರ ಮನೆ (526)ಅನನ್ಯ ತಿಮ್ಮಪ್ಪ ಮಡಿವಾಳ (515)ಕ್ರಮವಾಗಿ ಮೂರು ಸ್ಥಾನಗಳು, ವಾಣಿಜ್ಯ ವಿಭಾಗದಲ್ಲಿ ಸೌಮ್ಯ ಸೋಮಶೇಖರ ಗೌಡ (559),ರುಚಿತ (545), ಶುಭ ಹುಲಿಯ ಗೌಡ(535) ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದರೆ, ವಿಜ್ಞಾನ ವಿಭಾಗದಲ್ಲಿ ಬುಶ್ರಾಬಾನು (573)ಪ್ರಥಮ, ನಿವೇದಿತ ಮಧುಕೇಶ್ವರ ಭಟ್ಟ (567)ದ್ವಿತೀಯ, ಜ್ಯೋತಿಕಾ ಅಶೋಕ್ ನಾಯ್ಕ (552)ತೃತೀಯ ಸ್ಥಾನ ಪಡೆದಿದ್ದಾರೆ.