ಕಾರವಾರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಗೆಯಲ್ಲಿ 132ನೇ ವರ್ಷದ ಡಾ. ಬಿ.ಆರ್. ಅಂಬೇಡ್ಕರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿ0ದ ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಡಾ. ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಹ ಶಿಕ್ಷಕಿ ರೂಪಾ ನಾಯ್ಕ ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಡುಗೆ ಸಿಬ್ಬಂದಿಗಳು, ಹಳೆಯ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಜ್ಯೋತಿ ಬೆಳಗಿದರು.
ಮುಖ್ಯಾಧ್ಯಾಪಕ ಅಖ್ತರ ಸೈಯದ್ ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜ್ಯೋತಿ ಬೆಳಗಿದರು. ಅವರು ಮಾತನಾಡುತ್ತ ನಮ್ಮ ದೇಶದ ಸಂವಿಧಾನ ಶಿಲ್ಪಿ ಇವರ ಸಾಧನೆ ಕೊಡುಗೆ ಅಪಾರವಾದದ್ದು, ಅವರನ್ನು ಸ್ಮರಿಸುವುದು ನಮ್ಮಲ್ಲೆರ ಭಾಗ್ಯ ಎಂದು ಹೇಳಿದರು.
ಶಾಲೆಯ ಎಸ್.ಡಿ.ಎಂ.ಸಿ.ಯವರು, ಪಾಲಕ-ಪೋಷಕರು, ಅಡುಗೆ ಸಿಬ್ಬಂದಿಗಳು, ಪದವೀಧರ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲ ಮಕ್ಕಳಿಗೂ, ಪಾಲಕರಿಗೂ ಗುಲಾಬ್ ಜಾಮೂನ್ ನೀಡುವುದರ ಮೂಲಕ ಎಲ್ಲರೂ ಸಿಹಿಯಾಗಿರುವಂತೆ ರಜಾ ಅವಧಿಯ ದಿನಗಳನ್ನು ವಿದ್ಯಾಭ್ಯಾಸದ ಕಡೆ ಮಕ್ಕಳು ಗಮನ ಹರಿಸುವಂತೆ ತಿಳಿಸಿದ್ದು ವಿಶೇಷವಾಗಿದೆ.