Slide
Slide
Slide
previous arrow
next arrow

ಮದುವೆಗಾಗಿ 31 ಕಿ.ಮೀ. ದಟ್ಟಾರಣ್ಯದಲ್ಲಿ ಕಾಲ್ನಡಿಗೆ

300x250 AD

ಅಂಕೋಲಾ: ಮದುವೆ ಮಾಡಿ ನೋಡಿ ಮನೆ ಕಟ್ಟಿ ನೋಡು ಎಂಬ ಗಾದೆ ಮಾತಿದೆ. ಆದರೆ ಇಲ್ಲಿ ವಧುವರರಿಬ್ಬರು 31 ಕಿ.ಮೀ. ದಟ್ಟಾರಣ್ಯದಿಂದ ಕಾಲ್ನಡಿಗೆಯಲ್ಲೆ ಬಂದು ವಿವಾಹವಾದ ಸಾಹಸಗಾಥೆಯ ಕೂತುಹಲಕಾರಿ ಘಟನೆ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಸವೆಗುಳಿಯಲ್ಲಿ ನಡೆದಿದೆ.
ಸಿಕಳಿ ಗ್ರಾಮದ ಸುಮಿತ್ರಾ ರಾಮ ಗೌಡ ಹಾಗೂ ಸವೆಗುಳಿ ಮೂಲದ ಮಹಾಬಲೇಶ್ವರ ಗೌಡ ಅವರೊಂದಿಗೆ ಏ.10ರಂದು ವಿವಾಹ ನಿಶ್ಚಯವಾಗಿತ್ತು. ಮಹಾಬಲೇಶ್ವರ ಗೌಡ ಕುಟುಂಬವು ಜೀವನಕ್ಕಾಗಿ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಕೆಂದಗಿಯಲ್ಲಿ ತೋಟದ ಕೆಲಸ ಮಾಡಿಕೊಂಡು ಅಲ್ಲೆಯೆ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮದುವೆಯನ್ನು ಮಧುಮಗನ ಮೂಲಮನೆ ಸವೆಗುಳಿಗೆ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಕೆಂದಗಿಯಿ0ದ 22 ಕೀಮಿ ಅಂತರದಲ್ಲಿರುವ ಸವೆಗುಳಿ ಗ್ರಾಮಕ್ಕೆ ತೆರಳಲು ರಸ್ತೆಯೆ ಇರಲಿಲ್ಲ. ಕಾಲುದಾರಿಯ ದುರ್ಗಮ ಕಲ್ಲು-ಮುಳ್ಳಿನ ರಸ್ತೆಯಲ್ಲೆ ಸಾಗಬೇಕಾದ ಅನಿವಾರ್ಯತೆಯಿತ್ತು.
ಮದುವೆಯ ಹಿಂದಿನ ದಿನವೆ ಎ. 9 ಕಾಲ್ನಡಿಗೆಯಲ್ಲೆ 22 ಕೀಮೀ ಅಂತರವನ್ನು 6 ಗಂಟೆಯ ಅವಧಿಯಲ್ಲಿ ನಡೆದು ಬಂದು ಮದುವೆ ಮನೆಗೆ ಸೇರಿಕೊಂಡು ಮದುವೆಗೆ ಸಿದ್ಧರಾದರು.
ಮಧುವಣಗಿತ್ತಿಯ ನಡಿಗೆ: ಇನ್ನು ಸಿಕಳಿ ಗ್ರಾಮದಲ್ಲಿರುವ ವಧು ಸುಮಿತ್ರಾ ಗೌಡ ಸವೆಗುಳಿಯಲ್ಲಿರುವ ಮದುವೆಯ ಮಂಟಪಕ್ಕೆ ಬರಬೇಕೆಂದರೆ 9.5 ಕಿ.ಮೀ. ನಡೆಯಬೇಕಿತ್ತು. ಎ.10 ರ ಸೋಮವಾರ ಬೆಳಿಗ್ಗೆ 6 ಘಂಟೆಗೆ ಅರಿಶಿಣ ಶಾಸ್ತ್ರ ಮುಗಿಸಿಕೊಂಡು ಕಾಲ್ನಡಿಗೆಯಲ್ಲೆ ಹೊರಟರು. ಮದ್ಯಾಹ್ನ 11 ಘಂಟೆಗೆ ಮದುವೆ ಮಂಟಪಕ್ಕೆ ಸೇರಿಕೊಂಡರು.
ಸಾ0ಪ್ರದಾಯಿಕ ಮದುವೆ: ಕರೆ ಒಕ್ಕಲು ಸಮಾಜಕ್ಕೆ ಇವರು ತಮ್ಮದೇ ಆದ ಉಡುಗೆ ತೊಡುಗೆ, ಸಂಸ್ಕೃತಿ ಪರಂಪರೆಯ ನಿನಾದದೊಂದಿಗೆ ಮದುವೆ ಮನೆ ತುಂಬಿಕೊ0ಡಿತ್ತು. ಅರೆಯುವ ಕಲ್ಲಿನಲ್ಲಿ ಊಟ ಸಿದ್ಧಪಡಿಸಿ ಊಟದಲ್ಲೂ ಸಾಂಪ್ರಯಿಕತೆ ಮೆರೆದದ್ದು ವಿಶೇಷವಾಗಿತ್ತು.
ಪುರೋಹಿತರ ಸಂಕಷ್ಟ: ಈ ಮದುವೆಯ ಪ್ರಸಂಗದಲ್ಲಿ ಕೇವಲ ವಧುವರರ ಕುಟುಂಬದವರ ಅಷ್ಟೇ ಕಾಲ್ನಡಿಗೆಯ ಸಾಹಸಕ್ಕೆ ಒಳಗಾಗಿರಲಿಲ್ಲ. ಮದುವೆಯ ಪೌರೋಹಿತ್ಯ ವಹಿಸಿಕೊಳ್ಳಬೇಕಾದ ಪೌರೋಹಿತ ಸಹ ಮಲವಳ್ಳಿಯಿಂದ 30 ಕಿಮೀ ದೂರದಿಂದ ಬಂದು ಮದುವೆ ಶಾಸ್ತ್ರವನ್ನು ಮುಗಿಸಿದರು. 20 ಕೀಮೀ ಯಲ್ಲಾಪುರದ ಮಾರ್ಗವಾಗಿ ಬೈಕ್‌ನಲ್ಲಿ ಬಂದರೆ ಇನ್ನುಳಿದ 10 ಕೀಮೀ ಕಾಲ್ನಡಿಗೆಯಲ್ಲೆ ಬೆವರಿಳಿಸುತ್ತ ಬಂದು ಪೌರೋಹಿತರು ಸಂಕಷ್ಠ ಅನುಭವಿಸಿದರು.
ಮತ್ತೆ 22 ಕಿ.ಮೀ. ನಡಿಗೆ: ಏ.10 ಸೋಮವಾರ ಮದುವೆ ಏನೋ ಮುಗಿಯತು. ರಾತ್ರಿ ಸವೆಗುಳಿಯ ವರನ ಮೂಲ ಮನೆಯಲ್ಲಿ ತಂಗಿದ್ದರು. ಏ.11ರ ಮಂಗಳವಾರದ0ದು ಸವೆಗುಳಿಯಿಂದ ಮತ್ತೆ ತನ್ನ ಪತ್ನಿಯನ್ನು ಕರೆದುಕೊಂಡು ಕೆಂದಗಿಗೆ 22 ಕೀಮೀ ನಡೆದುಕೊಂಡು ಬಂದೆ ಮನೆ ಸೇರಿಕೊಂಡರು. ಈ ಒಂದು ಮದುವೆಯ ಸಮಾರಂಭದಲ್ಲಿ ಅರಣ್ಯ ಇಲಾಖೆಯ ಕುಮಾರೇಶ ಹಿರೇಗೌಡ್ರ, ಯಮನಪ್ಪ ಬಿ.ಎಚ್, ಬೀರಾ ಗೌಡ, ಗುರುದಾಸ ನಾಯ್ಕ, ಅಶೋಕ ಗೌಡ ಹಾಗೂ ಜಾನಪದ ಕಲಾವಿದ ಶಂಕರ ಗೌಡ ಅಡ್ಲೂರು ಪಾಲ್ಗೊಂಡು ಶುಭ ಹಾರೈಸಿದರು.

300x250 AD
Share This
300x250 AD
300x250 AD
300x250 AD
Back to top