ಶಿರಸಿ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಇಲ್ಲಿನ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಕಾರ್ಯಕ್ರಮ ಹಾಗೂ ಮಹಿಳೆಯರ ಛದ್ಮವೇಷ ಸ್ಪರ್ಧೆಯನ್ನು ಭಾರತಿ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ವೀಣಾಜಿ ಮಾತನಾಡುತ್ತಾ, ಮಹಿಳೆ ಸರ್ವ ಕಾರ್ಯವನ್ನು ಸಫಲ ಮಾಡುವ ಶಕ್ತಿ ಹೊಂದಿದ್ದಾಳೆ. ಮಹಿಳೆ ಪರಮಾತ್ಮನ ವಿಶೇಷ ರಚನೆ ಎಂದು ತಿಳಿಸಿದರು.
ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ ಧರ್ಮದರ್ಶಿ,ವಕೀಲರಾದ ವತ್ಸಲಾ ಹೆಗಡೆ ಅತಿಥಿಯಾಗಿ ಉಪಸ್ಥಿತರಿದ್ದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಅನಿತಾ ಪಾರ್ವತೀಕರ, ಶ್ರೀ ಗೌರಿ ಮಹಿಳಾ ಮಂಡಳಿಯ ಅಧ್ಯಕ್ಷೆ ನಾಗರತ್ನ ಶೇಟ್, ಗುರುಸಿದ್ದೇಶ್ವರ ಮಹಿಳಾಮಂಡಳದ ಅಧ್ಯಕ್ಷೆ ರೇಖಾ ಅಂಗಡಿ, ಸಿದ್ಧಿವಿನಾಯಕ ಮಾತೃಮಂಡಳಿಯ ವಿಜಯಾ ಶೆಟ್ಟಿ ಹಾಗೂ ಇತರರು ವ್ಯಸನಮುಕ್ತ ಸಮಾಜದ ನಿರ್ಮಾಣದ ಕುರಿತು ಏಕ ಮನಸ್ಸಿನಿಂದ ಒಗ್ಗೂಡಿ ಕಾರ್ಯಮಾಡುವ ಸಂಕಲ್ಪ ಮಾಡಿದರು. ದೇಶಭಕ್ತಿ ಸಾರುವ ಸುಂದರ ಛದ್ಮವೇಷದ ಜೊತೆಗೆ ನೃತ್ಯ ಪ್ರದರ್ಶನ ನಡೆಯಿತು.