ಶಿರಸಿ: ತಾಲೂಕಿನ ಬೀಳೂರು ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಗೆ ಆತ್ಮೀಯವಾಗಿ ಬೀಳ್ಕೊಡುಗೆ ಮಾಡಲಾಯಿತು.
ಶಾರದಾ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಸ್ಥೆ ತಮಗೆ ನೀಡಿದ ಸರ್ವತೋಮುಖ ಅಭಿವೃದ್ಧಿಯ ಶಿಕ್ಷಣಕ್ಕಾಗಿ ಭಾವುಕರಾಗಿ ಧನ್ಯವಾದದ ಮಾತುಗಳನ್ನು ಆಡಿದರು. ಕಳೆದ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆಯನ್ನು ಈ ಬಾರಿಯೂ ಮಾಡುವುದಾಗಿ ಪ್ರತಿಜ್ಞೆ ಗೈದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ನಾಗರಾಜ ಗಾಂವ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಸಾಲಿನಂತೆ ಈ ವರ್ಷವೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನದವರೆಗೆ ನಮ್ಮಲ್ಲಿ ತರಗತಿಗಳು ನಡೆಯಲಿದೆ. ಈ ಬೀಳ್ಕೊಡುಗೆ ಕೇವಲ ಔಪಚಾರಿಕವಾಗಿದ್ದು ಯಾರೂ ತರಗತಿಗೆ ಗೈರು ಇರಕೂಡದು ಮತ್ತು ನಮ್ಮ ಎಲ್ಲ ವಿದ್ಯಾರ್ಥಿಗಳು ಉಪನ್ಯಾಸಕರ ಸಮ್ಮುಖದಲ್ಲಿ ನಿಮ್ಮ ಅಧ್ಯಯನ ಆಗಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು ಹಾಜರಿದ್ದು ಮಾತನಾಡಿದರು. ಕಾರ್ಯಕ್ರಮದ ಸಂಘಟನೆಯನ್ನು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ನಡೆಸಿಕೊಟ್ಟರು.