Slide
Slide
Slide
previous arrow
next arrow

ನಮ್ಮನ್ನು ಅರಿಯುವ ಸಾಧನೆಯಲ್ಲಿ ಜೀವನದ ಸಾರ್ಥಕತೆಯಿದೆ: ಬ್ರಹ್ಮಾನಂದ ಭಾರತಿ ಸ್ವಾಮೀಜಿ

300x250 AD

ಶಿರಸಿ: ನಮ್ಮನ್ನು ನಾವು ಅರಿಯುವ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವದರ ಮೂಲಕ, ಪ್ರತಿಯೋರ್ವರೂ ಜೀವನದಲ್ಲಿ ಶಾಂತಿ-ಸಮಾಧಾನಗಳನ್ನು ಪಡೆಯಬಹುದು ಎಂದು ಸಿದ್ದಾಪುರ ತಾಲ್ಲೂಕು ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಆಶ್ರಮದ ಸಂತ ಪರಮಪೂಜ್ಯ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.ಅವರುಶಿರಸಿಯ “ಯೋಗಮಂದಿರ”ದಲ್ಲಿ ಇತ್ತೀಚೆಗೆ ಐದು ದಿನಗಳ ಕಾಲ ಜರುಗಿದ  ಶ್ರೀ ರಮಣ ಮಹರ್ಷಿಗಳ “ಉಪದೇಶ ಸಾರ” ಕೃತಿ ಆಧಾರಿತ ಪ್ರವಚನ-ಸತ್ಸಂಗ ಕಾರ್ಯಕ್ರಮ ಸರಣಿಯ ಸಮಾರೋಪದಲ್ಲಿ ಪ್ರವಚನ ನೀಡುತ್ತಿದ್ದರು.

           ಶಿರಸಿಯ “ಬ್ರಹ್ಮಾನಂದ ಸತ್ಸಂಗ” ಬಳಗ ಈ ಪ್ರವಚನ ಸರಣಿಯನ್ನು ಯೋಗಮಂದಿರದ ಸಹಯೋಗದೊಂದಿಗೆ  ಆಯೋಜಿಸಿತ್ತು. ಶಿರಸಿಯ ಮಾತೃಮಂಡಲಿಗಳು ಹಾಗೂ ಗಾಯತ್ರೀ ಬಳಗ ಇದಕ್ಕೆ ಸಹಕಾರ ನೀಡಿದವು. ಶ್ರೀ ರಮಣ ಮಹರ್ಷಿಗಳ  ಜೀವನದ ಸಾಧನೆ ಹಾಗೂ ಬೋಧನೆಗಳನ್ನು, “ಉಪದೇಶ ಸಾರ” ಕೃತಿಯ ಶ್ಲೋಕಗಳ  ಸುಶ್ರಾವ್ಯ ಗಾಯನ, ವಿದ್ವತ್ಪೂರ್ಣ ಅರ್ಥವಿವರಣೆ ಹಾಗೂ ಸುಲಲಿತವಾದ ತಾತ್ಪರ್ಯ ನಿರೂಪಣೆಯೊಂದಿಗೆ, ಪರಮಪೂಜ್ಯ ಬ್ರಹ್ಮಾನಂದ ಭಾರತಿ ಸ್ವಾಮಿಗಳು ಈ ಪ್ರವಚನ ಸರಣಿಯನ್ನು ನಡೆಸಿಕೊಟ್ಟರು. ಪ್ರತಿದಿನವೂ ನೂರಕ್ಕೂ ಮೀರಿ ಜನರು ಶೃದ್ದಾ-ಭಕ್ತಿಯಿಂದ ಇದರಲ್ಲಿ ಭಾಗವಹಿಸಿ, ಕಾರ್ಯಕ್ರಮದ ಪ್ರಯೋಜನ ಪಡೆದರು.  

          ಈ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಸಂಸ್ಥಾನದ ಶ್ರೀಗಳಾದ ಪರಮಪೂಜ್ಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಸಹ ಒಂದು ದಿನ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.  ಅದ್ವೈತ ತತ್ವದ ಸಾರದಂತೆ ಬದುಕಿದ ಮೇರು ವ್ಯಕ್ತಿತ್ವದ ಸಂತರಾದ ಶ್ರೀ ರಮಣರ ಬಗ್ಗೆ ಪರಿಣಾಮಕಾರಿ ಹಾಗೂ ವಿದ್ವತ್ಪೂರ್ಣ ಪ್ರವಚನ ನೀಡಿದ ಶೀ ಬ್ರಹ್ಮಾನಂದ ಸ್ವಾಮಿಗಳ ಕಾರ್ಯವನ್ನು ಶ್ಲಾಘಿಸಿದ ಅವರು, ಮುಂಬರುವ ದಿನಗಳಲ್ಲಿ ಈ ಭಾಗದ ಜನತೆಗೆ ಅವರ ಮಾರ್ಗದರ್ಶನ ಇನ್ನೂ ಹೆಚ್ಚೆಚ್ಚು ದೊರಕುವಂತಾಗಲೆಂದು ಹಾರೈಸಿದರು.

300x250 AD

          ಶಿರಸಿಯ ಈ ಸತ್ಸಂಗದ ಅವಧಿಯಲ್ಲಿ ಶ್ರೀ ಬ್ರಹ್ಮಾನಂದ ಭಾರತಿ ಶ್ರೀಗಳು ಶಿರಸಿ ಸುತ್ತಮುತ್ತಲಿನ ಹಲವು ವಿದ್ಯಾಸಂಸ್ಥೆಗಳಿಗೂ ಭೆಟ್ಟಿಯಿತ್ತರು. ಇಸಳೂರಿನ ಶ್ರೀನಿಕೇತನ ಶಾಲೆಯಲ್ಲಿ “ವ್ಯಕ್ತಿತ್ವ ನಿರ್ಮಾಣದ” ಕುರಿತು ಹಾಗೂ ಭೈರುಂಬೆಯ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯಲ್ಲಿ “ಏಕಾಗ್ರತೆ”ಯ ಕುರಿತು ಉಪನ್ಯಾಸ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಿರಸಿಯ ಅಜಿತಮನೋಚೇತನ ಸಂಸ್ಥೆಗೆ ಭೆಟ್ಟಿ ನೀಡಿ, ಅಲ್ಲಿನ ವಿಕಾಸ ಶಾಲೆಯ ವಿಶೇಷ ಚೇತನ ಮಕ್ಕಳ ಶಿಕ್ಷಕರು ಹಾಗೂ ಪಾಲಕರಿಗೆ ಅವರ ಮಾಡುತ್ತಿರುವ ಪವಿತ್ರಕಾರ್ಯದ ಮಹತ್ವ ವಿವರಿಸಿ, ಆಶೀರ್ವದಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿರಸಿ ಶೈಕ್ಷಣಿಕ ಜಿಲ್ಲೆಯ ಹತ್ತನೇ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಶಿರಸಿ ಲಯನ್ಸ್ ಶಾಲೆಯ ಸಭಾಭವನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ “ಪ್ರೇರಣಾ ಶಿಬಿರ”ದ ಸಮಾರೋಪದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿ ಜೀವನದಲ್ಲಿ  ಶೃದ್ಧೆಯ ಮಹತ್ವವನ್ನು ವಿವರಿಸಿದರು. ಈ ಕಾರ್ಯಕ್ರಮಲ್ಲಿ ಇನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಅವರ ಪಾಲಕರು, ಶಿರಸಿಯ ಬಿ.ಇ.ಓ. ಎಮ್. ಎಸ್. ಹೆಗಡೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ತಾಲ್ಲೂಕುಗಳ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

          ಈ ಎಲ್ಲ ಕಾರ್ಯಕ್ರಮಗಳ ಆಯೋಜನೆಯಲ್ಲಿ “ಬಹ್ಮಾನಂದ ಸತ್ಸಂಗ ಬಳಗ”ದ ಶ್ರೀ ಬಾಲಕೃಷ್ಣ ಕಾರಂತ, ಡಾ. ಕೆ. ವಿ. ಶಿವರಾಮ, ಡಾ. ಕೇಶವ ಎಚ್. ಕೊರ್ಸೆ, ಶ್ರೀಕಾಂತ ಹೆಗಡೆ, ಗುರುಗಣೇಶ ಹೆಗಡೆ, ಮಧುಕರ ಶೆಟ್ಟಿ ಹಾಗೂ ಯೋಗಮಂದಿರದ ನಿರ್ವಹಣಾ ಸಮಿತಿ ಸದಸ್ಯರುಗಳು ಸಹಕಾರ ನೀಡಿದರು.

Share This
300x250 AD
300x250 AD
300x250 AD
Back to top