ಯಲ್ಲಾಪುರ: ಭಾರತೀಯ ಪರಂಪರೆಯಲ್ಲಿ ಗೋವಿಗೆ ವಿಶೇಷ ಪೂಜ್ಯ ಸ್ಥಾನವಿದೆ. ಗೋವು ಪ್ರಕೃತಿಯ ಒಂದು ಅಂಗ ಎಂದು ಹರಿದಾಸ ಈಶ್ವರ ಕೊಪ್ಪೇಸರ ಹೇಳಿದರು.
ಪರಮೇಶ್ವರ ಭಟ್ಟ ಕೊಂಬೆ ನೂತನ ನಿವಾಸದ ಸಮಾರಂಭದಲ್ಲಿ ಗೋ ನಿಧಿ ಮಂಗಲ ಸಮರ್ಪಣೆ ಕಾರ್ಯಕ್ರಮದಲ್ಲಿ ವಿಶೇಷ ವಕ್ತಾರರಾಗಿ ಮಾತನಾಡಿದರು. ಕರಡೋಳ್ಳಿಯಲ್ಲಿ ಸ್ವರ್ಣವಲ್ಲಿಯವರು ಶಾಲೆ ಪ್ರಾರಂಭಿಸಿದ್ದಾರೆ. ಕಷ್ಟದಲ್ಲಿರುವ ಎಲ್ಲ ಗೋವುಗಳನ್ನು ಸಾಕಲಾಗುತ್ತಿದೆ. ಪ್ರಾಣಿ-ಪಕ್ಷಿಗಳ ಜೊತೆ ಹೃದಯಪೂರ್ವಕ ಮಾತನಾಡಬೇಕು. ನಮ್ಮ ಪರಂಪರೆಯಲ್ಲಿ ಹಂಚಿ ತಿನ್ನುವ ಸಂಸ್ಕೃತಿ ಇದೆ ಎಂದರು.
ಕರಡೊಳ್ಳಿ ಗೋವರ್ದನ ಗೋ ಶಾಲೆಯ ಪ್ರತಿನಿಧಿ ರಾಮಕೃಷ್ಣ ಕವಡಿಕೆರೆ ಮನೆ ಯಜಮಾನರು ನೀಡಿದ ಮಂಗಲ ನಿಧಿಯನ್ನು ಸ್ವೀಕರಿಸಿದರು. ಹಿರಿಯರಾದ ಡಿಶಂಕರ ಭಟ್ಟ ಮಾತನಾಡಿ, ಸಮಾಜದಲ್ಲಿ ಸಾತ್ವೀಕ ಚಿಂತನೆ ಬೆಳೆಯುವುದಕ್ಕೆ ಇಂತಹ ಕಾರ್ಯಕ್ರಮಗಳು ವಿಸ್ತಾರಗೊಳ್ಳಬೇಕು. ಹೊನ್ನಾವರದ ಪ್ರತಿಭಾವಂತ ಈ ಕಲಾವಿದೆಯ ಹಾಡು ನಮ್ಮೆಲ್ಲರನ್ನು ಸೂರೆಗೊಂಡಿದೆ. ಈ ದೃಷ್ಟಿಯಿಂದ ಕಲಾವಿದರ ಬಳಗವನ್ನು ಅಭಿನಂದಿಸುತ್ತೇವೆ ಎಂದರು.