Slide
Slide
Slide
previous arrow
next arrow

ಬೃಹತ್ ಬೆಂಗಳೂರು ಚಲೋ ಕಾರ್ಯಕ್ರಮ: ಅರಣ್ಯವಾಸಿಗಳ ಸಮಸ್ಯೆಗೆ ಹಕ್ಕೊತ್ತಾಯ

300x250 AD

ಬೆಂಗಳೂರು:  ಅರಣ್ಯವಾಸಿಗಳ ಸಮಸ್ಯೆಗಳನ್ನು ಆಗ್ರಹಿಸಿ ಸರಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕನ ಆವರಣದಲ್ಲಿ ರಾಜ್ಯಾದ್ಯಂತ ಆಗಮಿಸಿದ ಅರಣ್ಯವಾಸಿಗಳಿಂದ ಬೃಹತ್ ಬೆಂಗಳೂರು ಚಲೋ ಮತ್ತು ಧರಣಿ ಕಾರ್ಯಕ್ರಮಗಳು ಜರುಗಿದವು.

 ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಆಗಮಿಸಿದ ಸಹಸ್ರಾರು ಅರಣ್ಯವಾಸಿಗಳು ಹಕ್ಕಿಗಾಗಿ ಘೋಷಣೆಯೊಂದಿಗೆ ಒತ್ತಾಯ, ಧರಣಿ ಕಾರ್ಯಕ್ರಮವು ಕಲಾತಂಡದೊಂದಿಗೆ ಜರುಗಿದ್ದು ವಿಶೇಷವಾಗಿತ್ತು.

 ಅರಣ್ಯವಾಸಿಗಳ ಪರವಾಗಿ ಸುಫ್ರೀಂ ಕೋರ್ಟಿನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕು, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಭಿಯಾನಕ್ಕೆ ಆದೇಶ ಮಾಡಬೇಕು, ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ದೌರ್ಜನ್ಯ, ಕಿರುಕುಳ ನಿಯಂತ್ರಿಸುವುದು, ೧೯೭೮ ರ ಪೂರ್ವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರಕಾರದಿಂದ ಅರಣ್ಯೇತರ ಚಟುವಟಿಕೆಗೆ ಬಿಡುಗಡೆ ಮಾಡಿದ ೨,೫೧೩ ಕುಟುಂಬಗಳಿಗೆ ಹಾಗೂ ಜಿಲ್ಲೆಯಲ್ಲಿ ೬,೧೫೬ ಹಂಗಾಮಿ ಲಾಗಣಿದಾರರಿಗೆ ಖಾಯಂ ಮಂಜೂರಿ ಹಕ್ಕು ಪತ್ರ ನೀಡುವುದು ಮುಂತಾದ ಪ್ರಮುಖ ಹತ್ತು ಬೇಡಿಕೆಗಳನ್ನು ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಅಗ್ರಹಿಸಲಾಯಿತೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ವಿಶಿಷ್ಟ ಕಲಾತಂಡ:
 ಸಿದ್ಧಿ, ಧಮಾನಿ, ಲಮಾಣಿ, ಡೊಳ್ಳು, ವಿಶಿಷ್ಟ ರೀತಿಯ ಜಾನಪದ ಕಲಾತಂಡಗಳು ಕಾರ್ಯಕ್ರಮದಲ್ಲಿ ಆಕರ್ಷಣೀಯವಾಗಿತ್ತು.

300x250 AD

ಮಂತ್ರಿ ಆಗಮನಕ್ಕೆ ಒತ್ತಾಯ:
 ಸತತ ಐದು ತಾಸುಗಳಾದರೂ ಸರಕಾರದ ಪ್ರತಿನಿಧಿಯಾಗಿ ಯಾವ ಸಚಿವರೂ ಧರಣಿ ಕಾರ್ಯಕ್ರಮಕ್ಕೆ ಆಗಮಿಸದೇ ಇರುವ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ತುರ್ತಾಗಿ ಮಂತ್ರಿಗಳ ಆಗಮನಕ್ಕೆ ತೀವ್ರ ಆಗ್ರಹ ವ್ಯಕ್ತಪಡಿಸಿ, ಈ ಸಂದರ್ಭದಲ್ಲಿ ಪೋಲಿಸರೊಂದಿಗೆ ಘರ್ಷಣೆ ನಡೆದ ಘಟನೆಗಳು ಜರುಗಿತು.

 ಕಾರ್ಯಕ್ರಮದಲ್ಲಿ ಜಿ. ಎಮ್ ಶೆಟ್ಟಿ ಅಂಕೋಲಾ, ದೇವರಾಜ ಬಂಡಲ, ಗಣಪತಿ ನಾಯ್ಕ, ಪಾಂಡುರಂಗ ನಾಯ್ಕ ಬೆಳಕೆ ಮುಂತಾದವರು ಮಾತನಾಡಿದರು.

 ಸಭೆಯಲ್ಲಿ ಇಬ್ರಾಹಿಂ, ದೇವರಾಜ ಗೊಂಡ, ಭಿಮ್ಸಿ ವಾಲ್ಮೀಕಿ, ರಾಘವೇಂದ್ರ ಕುಣಬಿ, ಶಿವಾನಂದ ಜೋಗಿ, ಮಹಾಭಲೇಶ್ವರ ನಾಯ್ಕ ಬೇಡ್ಕಣಿ, ದಿನೇಶ್ ನಾಯ್ಕ, ಸುನೀಲ್ ನಾಯ್ಕ, ಸ್ವಾಮಿ, ರತ್ನಾಕರ ನಾಯ್ಕ ಪ್ರಧಾನಿ, ಮಹೇಶ್ ಗಣೇಶಪುರ, ರಾಮ ಮರಾಠಿ ಯಲಕೊಟಗಿ, ಸುರೇಶ್ ನಾಯ್ಕ, ಶಬ್ಬೀರ್, ಸಾರಂಬಿ, ರಾಜೇಶ್ ಮಿತ್ರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top