ಅಂಕೋಲಾ: ವಿದ್ಯಾರ್ಥಿಗಳು ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯವಶ್ಯಕವಾಗಿದೆ. ಸಮಾಜದಲ್ಲಿ ಮೌಲ್ಯಗಳು ಕುಸಿತವಾಗದ ಹಾಗೆ ಯುವ ಜನಾಂಗವನ್ನು ಸದಾ ಎಚ್ಚರಿಸುವ ಕೆಲಸ ಕಾಲ ಕಾಲಕ್ಕೆ ಆಗಬೇಕಾಗಿದೆ ಎಂದು ತಹಶೀಲ್ದಾರ ಸತೀಶ್ ಗೌಡ ಹೇಳಿದರು.
ಅವರು ಕೆನರಾ ವೆಲ್ ಫೆರ್ ಟ್ರಸ್ಟಿನ ಪಿಎಂ ಸಂಯುಕ್ತ ಪದವಿಪೂರ್ವ ಕಾಲೇಜಿನ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಗು ಗೌಡ ಮಾತನಾಡಿ, ಪಾಲಕರು ನಿಮ್ಮ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ ಅದನ್ನು ಹುಸಿಗೊಳಿಸದೇ ಜೀವನದಲ್ಲಿ ಯಶಸ್ಸು ಸಾಧಿಸಿರಿ ಎಂದು ಹೇಳಿದರು. ಇನ್ನೋರ್ವ ಅತಿಥಿ ಕಾಳಪ್ಪ ನಾಯಕರು ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಒಳಗಾಗದಿರೆಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಮಾನಂದ ನಾಯಕ ಕಾಲೇಜಿನ ವಾರ್ಷಿಕ ವರದಿ ಓದಿದರು. ಶ್ರೀನಿವಾಸ ಯು.ಕೆ. ಅವರು ಯೂನಿಯನ್ ವರದಿ ಜೊತೆ ಬಹುಮಾನಿತರ ಯಾದಿ ಓದಿದರು. ಉಲ್ಲಾಸ ಹುದ್ದಾರ ಅವರು ಜಿಮಖಾನ ವರದಿ ಜೊತೆ ಕಾರ್ಯಕ್ರಮ ನಿರ್ವಹಿಸಿದರು. ಕು.ಸ್ನೇಹಾ ಮತ್ತು ಸಂಗಡಿಗರು ಸ್ವಾಗತಗೀತೆ ಹಾಡಿದರು. ಉಪನ್ಯಾಸಕಿ ರೇಷ್ಮಾ ನಾಯ್ಕ ವಂದಿಸಿದರು. ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು.