ಹಳಿಯಾಳ: ರಾಜಕೀಯವನ್ನು ಹೊರಗಿಟ್ಟು ಸಮಾಜದ ವಿಷಯ ಬಂದಾಗ ಎಲ್ಲವನ್ನು ಮರೆತು ಒಂದೆಡೆ ಸೇರಿ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಬೆಂಗಳೂರಿನ ಗೋಸಾಯಿ ಪೀಠದ ಮರಾಠ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ್ ಭಾರತಿ ಸ್ವಾಮೀಜಿ ಕರೆ ನೀಡಿದರು.
ಇಲ್ಲಿನ ತುಳಜಾಭವಾನಿ ದೇವಸ್ಥಾನದ ಕುಟೀರದಲ್ಲಿ ಮರಾಠ ಸಮಾಜದ ಸರ್ವ ಪಕ್ಷಗಳಲ್ಲಿರುವ ಪ್ರಮುಖ ಮುಖಂಡರು, ಹಿರಿಯರು, ವಾರ್ಕರಿ ಸಂತರು ಹಾಗೂ ಉದ್ಯಮಿಗಳ ಸಭೆಯನ್ನು ನಡೆಸಿ ಅವರು ಮರಾಠಾ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಬದಿಗಿಟ್ಟು ಕೆಲಸ ಮಾಡುವಂತೆ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಹಳಿಯಾಳ ಕ್ಷೇತ್ರದಲ್ಲಿ ಬಹುಸಂಖ್ಯಾತ ಮರಾಠ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹೀಗೆ ಹಲವು ರಂಗಗಳಲ್ಲಿ ಹಿಂದೆ ಉಳಿದಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಸಮಾಜ ಸಂಘಟನೆ ಇಲ್ಲದಿರುವುದು ಎಂದು ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಅಂಚಿನ ಹವಗಿಯಲ್ಲಿರುವ ಮರಾಠಾ ಸಮಾಜದ 3 ಎಕರೆ ಭೂಮಿಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಲು ಜೊತೆಗೆ ಧರ್ಮ ಕಾರ್ಯಕ್ಕಾಗಿ ಬಳಸುವ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ನಾರಾಯಣ ಟೋಸುರ, ಸುಭಾಷ್ ಕೋರ್ವೆಕರ, ಪ್ರಕಾಶ ಪಾಕ್ರಿ, ಶಂಕರ್ ಬೆಳಗಾಂವಕರ , ಚುಡಪ್ಪಾ ಬೋಬಾಟಿ, ಶಿವಾಜಿ ನರಸಾನಿ, ಟಿಆರ್ ನಾಕಾಡಿ, ಸೋನಾಪ್ಪಾ ಸುಣಕಾರ, ಅನಿಲ್ ಚವ್ವಾಣ, ರವಳಪ್ಪಾ ಬಿರ್ಜೆ, ಪವನ್ ಬೇನಚಿಕ ಮೊದಲಾದವರು ಇದ್ದರು.