Slide
Slide
Slide
previous arrow
next arrow

ನಮ್ಮಲ್ಲಿರುವ ಸುಪ್ತಶಕ್ತಿಯನ್ನು ಬಡಿದೆಬ್ಬಿಸಿ ಸಾಧನೆ ಹಾದಿ‌ ಹಿಡಿಯಿರಿ: ಎಂ.ಆರ್.ನಾಗರಾಜು

300x250 AD

ಶಿರಸಿ: ಸ್ವಾಮಿ ವಿವೇಕಾನಂದರು ಜಗತ್ತಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಜಗತ್ತಿನಲ್ಲಿ ಪಸರಿಸಿದವರಲ್ಲಿ ಮೊದಲಿಗರು. ಯುವಜನತೆಯ ಶಕ್ತಿಯನ್ನು ಗುರುತಿಸಿ, ದೇಶದ ಸಂಪತ್ತು ಎಂದು ಕರೆದರು. ದೇಶದ ಭವಿಷ್ಯ ನಿಂತಿರುವುದು ಯುವಶಕ್ತಿಯ ಮೇಲೆ ಹಾಗೂ ಅವರ ಕನಸಿನ ಮೇಲೆ , ಮುಂದುವರಿಯುತ್ತಿರುವ ಜಗತ್ತಿನಲ್ಲಿ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು ಎಂದು ಖ್ಯಾತ ಸಂವಹನಕಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಎಂ.ಆರ್. ನಾಗರಾಜು ಹೇಳಿದರು. 

  ಅವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯೂ ಎಸಿ ಸಂಯೋಜನೆಯಲ್ಲಿ ವಿಜ್ಞಾನ ವೇದಿಕೆ, ಎನ್‌ಸಿಸಿ, ಎನ್ಎಸ್ಎಸ್, ಹಾಗೂ ರೋವರ್ ಮತ್ತು ರೇಂಜ್ ಘಟಕಗಳ ಸಂಯೋಜನೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಜೀವನದ ಪ್ರತಿಯೊಂದು ಹಂತದಲ್ಲಿ ಸೋಲು ಗೆಲುವು ಸಹಜವಾಗಿದೆ ಆದರೆ ವಿದ್ಯಾರ್ಥಿಗಳು ಅದನ್ನು ಯಾವ ರೀತಿಯಲ್ಲಿ ಎದುರಿಸುತ್ತಾರೆ ಎಂಬುದು ಮುಖ್ಯ, ಮರಳಿ ಪ್ರಯತ್ನ ಮಾಡು ಎಂಬಂತೆ ನಮ್ಮ ಗುರಿಯನ್ನು ತಲುಪಿಸಲು ವಿಶ್ರಮಿಸದೆ ಪ್ರಯತ್ನಿಸಬೇಕು. ಪ್ರತಿಯೊಂದು ವಿಷಯವನ್ನು ಕಲಿಯುವ ಕುತೂಹಲವನ್ನು ಬೆಳೆಸಿಕೊಳ್ಳಬೇಕು. ಬಂದ ಅವಕಾಶವನ್ನು ನಿರಾಕರಿಸದೆ ನಮ್ಮಲ್ಲಿರುವ ಸುಪ್ತಶಕ್ತಿಯನ್ನು ಬಡಿದೆಬ್ಬಿಸಿ ಸಾಧನೆ ಹಾದಿಯಲ್ಲಿ ತೊಡಗಿಕೊಂಡು ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಆದರೆ ಇಂದಿನ ಯುವಜನತೆ ಕೆಲ ಆಮಿಷಗಳಿಗೆ ಬಲಿಯಾಗುತ್ತಿದ್ದರೆ,ತಮ್ಮ ಕರ್ತವ್ಯವನ್ನು ಮರೆತು ಜೀವನದ ಧ್ಯೇಯ ಹಾಗೂ ಗುರಿಯನ್ನು ಬದಿಗೊತ್ತಿದ್ದಾರೆ. ನಮ್ಮ ಗುರಿ ತಲುಪಲು ಆದರ್ಶ ತತ್ವ ಹಾಗೂ ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

300x250 AD

 ಕಾಲೇಜು ಉಪಸಮಿತಿಯ ಅಧ್ಯಕ್ಷ ಎಸ್. ಕೆ. ಭಾಗವತ್ ಮಾತನಾಡಿ ವಿವೇಕಾನಂದರ ಸ್ಮರಣೆಗಾಗಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಇಡೀ ಜಗತ್ತಿಗೆ ಭಾರತವನ್ನು ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ವಿವೇಕಾನಂದರು ಪರಿಚಯಿಸಿದ್ದಾರೆ. ಅವರು ಹಾಕಿಕೊಟ್ಟ ಆದರ್ಶದಲ್ಲಿ ವಿದ್ಯಾರ್ಥಿಗಳು ನಡೆಯಬೇಕು ಎಂದು ಹೇಳಿದರು.

 ಕಾಲೇಜಿನ ಪ್ರಾಚಾರ್ಯ ಡಾ. ಟಿ. ಎಸ್. ಹಳೆಮನೆ ಸ್ವಾಗತಿಸಿ ಪ್ರಸ್ತಾಪಿಸಿದರು. ಐಕ್ಯೂಎಸ್‌ಸಿ ಮುಖ್ಯಸ್ಥ ಡಾ.ಎಸ್. ಎಸ್. ಭಟ್  ಉಪಸ್ಥಿತರಿದ್ದರು. ಪ್ರೊ. ರವಿ ಕೊಳೇಕರ್ ವಂದಿಸಿದರು. ಪ್ರೊ. ಗಣೇಶ್ ಹೆಗಡೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top