Slide
Slide
Slide
previous arrow
next arrow

ಶಿರಸಿಯಲ್ಲಿ ನಂದಿನಿ‌ ಸಿಹಿ ಉತ್ಸವಕ್ಕೆ ಚಾಲನೆ: ಹೆಚ್ಚು ಜನರನ್ನು ತಲುಪುವ ಉದ್ದೇಶವೆಂದ ಕೆಶಿನ್ಮನೆ

300x250 AD

ಶಿರಸಿ: ನಗರದ ಅಶ್ವಿನಿ‌ ಸರ್ಕಲ್ ಬಳಿಯ ಅರುಣ್ ಎಂಟರ್ಪ್ರೈಸಸ್’ನಲ್ಲಿ ಇತ್ತೀಚೆಗೆ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ತಲುಪುವ ಉದ್ದೇಶದಿಂದ ಪ್ರಾರಂಭವಾದ ನಂದಿನಿ ಸಿಹಿ ಉತ್ಸವ ಒಂದು‌ ತಿಂಗಳುಗಳ ಕಾಲ ನಡೆಯಲಿದೆ. ಕೆಎಂಎಫ್ ಒಂದು ರೈತಪರ ಸಂಸ್ಥೆಯಾಗಿದ್ದು, ರೈತರಿಗೆ ಹೆಚ್ಚಿನ ಲಾಭವನ್ನು ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ. ಇಲ್ಲಿನ ಯಾವುದೇ ಉತ್ಪನ್ನಗಳಲ್ಲಿ ಕಲಬೆರಕೆ ಎಂಬುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕರಾದ ಶಂಕರ ಪರಮೇಶ್ವರ ಹೆಗಡೆ, ಶಿರಸಿ ನಗರ ಸಭೆಯ ಅಧ್ಯಕ್ಷರಾದ ಗಣಪತಿ ನಾಯ್ಕ, ಧಾರವಾಡ ಸಹಕಾರ ಹಾಲು ಒಕ್ಕೂಟದ ಜಂಟಿ ನಿರ್ದೇಶಕರು (ಮಾರುಕಟ್ಟೆ) ಎಸ್‌ ಶಿರೋಳ್‌, ಕರ್ನಾಟಕ ಹಾಲು ಮಹಾ ಮಂಡಳಿ ಬೆಂಗಳೂರಿನ ಮಾರುಕಟ್ಟೆ ಅಧಿಕಾರಿಯಾದ ಸಂತೋಷ, ಧಾರವಾಡ ಸಹಕಾರ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ) ವಿನೋದ ಮಿಠಾರೆ, ಉತ್ತರ ಕನ್ನಡ ಜಿಲ್ಲೆಯ ಶೇಖರಣೆ ಮತ್ತು ತಾಂತ್ರಿಕ ವಿಭಾಗ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್‌, ಸಹಾಯಕ ವ್ಯವಸ್ಥಾಪಕರು (ಪ.ವೈ) ಡಾ. ವಿವೇಕ ಎಸ್‌ ಆರ್‌, ಮಾರುಕಟ್ಟೆ ಅಧಿಕಾರಿಯಾದ ಶರಣು ಮೆಣಸಿನಕಾಯಿ ವಿಸ್ತರಣಾಧಿಕಾರಿ ಮೌನೇಶ ಎಂ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ ಭಟ್‌, ಅಭಿಷೇಕ ನಾಯ್ಕ,ಜಯಂತ ಪಟಗಾರ, ನಿರಂಜನ ಗೌಡ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top