Slide
Slide
Slide
previous arrow
next arrow

ದಾರಿ ತಪ್ಪಿಸುವ ಕೆಲಸ ಬಿಟ್ಟು, ಅಭಿವೃದ್ಧಿ ಕಡೆ ಯೋಚಿಸಿ: ಕಟೀಲ್ ಹೇಳಿಕೆಗೆ ಭೀಮಣ್ಣ ತಿರುಗೇಟು

300x250 AD

ಶಿರಸಿ: ಪರೇಶ್ ಮೇಸ್ತಾ ಪ್ರಕರಣದಲ್ಲಿ ಶಿರಸಿಯಲ್ಲಿ ಬೆಂಕಿ ಹಚ್ಚಿದಾಗ ವಿಧಾನಸಭಾಧ್ಯಕ್ಷರೇ ಚಾಲನೆ ನೀಡಿದ್ದರು. ನೊಂದವರಿಗೆ ಏನು ನ್ಯಾಯ ಕೊಟ್ಟರು? ನಕಲಿ ಕಾಂಗ್ರೆಸ್ ಅಥವಾ ಬಿಜೆಪಿ ನಕಲಿಯೋ ಎಂದು ಬಿಜೆಪಿಯವರೇ ಅರಿಯಲಿ. ಸ್ವಾತಂತ್ರ ಹೋರಾಟದಲ್ಲಿ ಬಿಜೆಪಿಯವರು ಯಾರಿದ್ರು? ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಮುರ್ಡೇಶ್ವರದಲ್ಲಿ ನಡೆದಿದ್ದ ಬಿಜೆಪಿ ಸಭೆಯಲ್ಲಿ ‘ಈಗಿನದು ಮೂಲ ಕಾಂಗ್ರೆಸ್ ಅಲ್ಲ. ಅದು ಭಯೋತ್ಪಾದಕರನ್ನು ಬೆಂಬಲಿಸುವ ನಕಲಿ ಕಾಂಗ್ರೆಸ್’ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ಕಟೀಲ್ ಅವರ ಕಾಂಗ್ರೆಸ್ ಪಕ್ಷದ ಅವಹೇಳನ ಅಕ್ಷಮ್ಯ. ಹಲವು ಬಾರಿ ಸಂಸದರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅವರ ಘನತೆಗೆ ತಕ್ಕಂತೆ ಅವರು ಮಾತನಾಡಲಿ. ಅವರಿಗೆ ನೈತಿಕತೆ ಇದ್ದಿದ್ದರೆ ಈ ಮಾತು ಬರುತ್ತಿರಲಿಲ್ಲ ಎಂದಿದ್ದಾರೆ.
ಬಿಜೆಪಿಗೆ ತಮ್ಮ ಕಾರ್ಯಕರ್ತರೇ ಹತ್ಯೆ ಆದಾಗ ಅವರನ್ನೇ ರಕ್ಷಿಸಲಾಗಿಲ್ಲ. ಕಾಂಗ್ರೆಸ್ ಎಂದಿಗೂ ಧರ್ಮದ ಹೆಸರಲ್ಲಿ ಮತ ಕೇಳಲ್ಲ. ಅಭಿವೃದ್ಧಿ ಆಧಾರದಲ್ಲಿ ಮತ ಕೇಳುತ್ತಿದೆ. ಅಂಬೇಡ್ಕರ್ ಅವರ ಹೆಸರು ಬಳಸಿಕೊಳ್ಳುವ ನೈತಿಕತೆ ಬಿಜೆಪಿಗೆ ಇಲ್ಲ. ದಾರಿ ತಪ್ಪಿಸುವುದನ್ನು ಬಿಟ್ಟು ಅಭಿವೃದ್ಧಿ, ಸಾರ್ವಜನಿಕರ ಸಮಸ್ಯೆ ಬಗ್ಗೆ ಗಮನ ಕೊಡಿ. ಜಿಲ್ಲೆಯಲ್ಲಿ 5 ಶಾಸಕರು ಬಿಜೆಪಿವರೇ ಇದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸವನ್ನ ಇಡೀ ದೇಶ ನೋಡುತ್ತಿದೆ. ಬಿಜೆಪಿಯವರು ಚುನಾವಣೆ ಪೂರ್ವ ಆಡಿದ ಮಾತು ಎಷ್ಟು ಜಾರಿಗೊಳಿಸಿದ್ದಾರೆ? ಈಗ ಕರೋನೋತ್ತರ ಅಭಿವೃದ್ಧಿ ಚಿಂತನೆ ಬದಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಿಸಿದ ಉದ್ಯಮಗಳನ್ನು ಖಾಸಗೀಕರಣ ಮಾಡಿದ್ದು ಬಿಜೆಪಿ. ಈಗ ಬೇಜವಾಬ್ದಾರಿ ಮಾತು ಆಡುವುದನ್ನು ಬಿಟ್ಟು ತಮ್ಮನ್ನೇ ತಾವು ನೋಡಿಕೊಳ್ಳಲಿ. ಪರೇಶ ಮೇಸ್ತಾ ಸಹಜ ಸಾವಾಗಿದ್ದರೂ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿದರು. ಕಾಂಗ್ರೆಸ್‌ನ ಪ್ರಧಾನಿಗಳೂ ನಕಲಿ ಎಂದು ಬಿಜೆಪಿ ಆರೋಪಿಸಿದೆ. ನೆಹರೂ, ಇಂದಿರಾಗಾಂಧಿ, ರಾಜೀವಗಾಂಧಿ ಅವರನ್ನೆಲ್ಲ ಜನರೇ ಆಯ್ಕೆ ಮಾಡಿದ್ದು. ಬಿಜೆಪಿ ಮತದಾರರನ್ನೆ ನಕಲಿ ಎನ್ನಲು ಹೊರಟಿದೆ ಎಂದರು.
ಕಾಂಗ್ರೆಸ್ ಎಲ್ಲ ಸಮುದಾಯವನ್ನು ವಿಶ್ವಾಸದಿಂದ ಕಾಣುತ್ತಿದೆ. ಜನರ ಮುಂದೆ ಹೋಗಲು ನೈತಿಕತೆ ಇಲ್ಲದ ಬಿಜೆಪಿ ಜಿ.ಪಂ, ತಾ.ಪಂ ಚುನಾವಣೆ ಮಾಡುತ್ತಿಲ್ಲ. ಕಾಂಗ್ರೆಸ್ ಗಾಂಧಿ ಕುಟುಂಬಕ್ಕೆ ಮಾತ್ರ ಸೀಮಿತ ಎನ್ನುವ ಬಿಜೆಪಿ, ಮಲ್ಲಿಕಾರ್ಜುನ ಖರ್ಗೆ ಯಾವ ಸಮುದಾಯ ಎಂಬುದನ್ನು ಅರಿಯಲಿ. ಕೇಂದ್ರ, ರಾಜ್ಯ ಬಿಜೆಪಿಯದ್ದೇ ಇದೆ. ಚಿತ್ತರಂಜನ ಸಾವು ಏಕೆ ತನಿಖೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನ ಪ್ರಮುಖರಾದ ವೆಂಕಟೇಶ ಹೆಗಡೆ ಹೊಸಬಾಳೆ, ಎಸ್.ಕೆ.ಭಾಗ್ವತ್, ದೀಪಕ ದೊಡ್ಡೂರು, ಬಸವರಾಜ ದೊಡ್ಮನಿ, ಗಣೇಶ ದಾವಣಗೆರೆ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top