ಸಿದ್ದಾಪುರ: ತಾಲೂಕಿನ ಬಿಳಗಿಯ ಪುಟ್ಟ ಬಾಲಕ ಅನಿಕೇತ್ ಭಟ್ ವಯಸ್ಸಿಗೆ ಮೀರಿದ ವಿಶೇಷ ಸಾಮರ್ಥ್ಯದಿಂದ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್”ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾನೆ.
ಆನಂದ್ ಭಟ್ ಹಾಗೂ ಶ್ರೀಲತಾ ಭಟ್ ದಂಪತಿಗಳ 1 ವರ್ಷ 11 ತಿಂಗಳ ಈ ಪುಟ್ಟ ಬಾಲಕ ಅತೀ ಚಿಕ್ಕ ವಯಸ್ಸಿನಲ್ಲಿಯೇ 15 ಕಾಡು ಪ್ರಾಣಿಗಳ ಹೆಸರು, 15 ಸಾಕು ಪ್ರಾಣಿಗಳ ಹೆಸರು, 22 ಪಕ್ಷಿಗಳು, 15 ಹಣ್ಣುಗಳು,28 ರಾಜ್ಯಗಳ ಹೆಸರು,15 ವಿವಿಧ ದೇಶಗಳ ಬಾವುಟಗಳನ್ನು, 14 ವಾಹನಗಳ ಹೆಸರನ್ನು, ಹಿಂದಿ ಹಾಗೂ ಕನ್ನಡದಲ್ಲಿ ಸಂಖ್ಯೆಗಳನ್ನು, ಇಂಗ್ಲೀಷ್ ವರ್ಣಮಾಲೆಯನ್ನು ಸರಾಗವಾಗಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಹಾಗೆಯೇ ಈ ಚಿಕ್ಕ ವಯಸ್ಸಿನಲ್ಲಿಯೇ 5ಕೆಜಿ ವರೆಗಿನ ಭಾರವನ್ನು ಸರಾಗವಾಗಿ ಎತ್ತುವುದರ ಜೊತೆಗೆ ಸ್ವಾಮಿ ವಿವೇಕಾನಂದ ಹಾಗೂ ಶ್ರೀ ಕೃಷ್ಣನ ವೇಷಭೂಷಣವನ್ನು ಧರಿಸುವುದರ ಮೂಲಕ ತನ್ನ ವಿಶೇಷ ಸಾಮರ್ಥ್ಯದಿಂದ ಗುರುತಿಸಿಕೊಂಡಿದ್ದಾನೆ.
ಬಾಲಕನ ಈ ವಿಶೆಷ ಸಾಮರ್ಥ್ಯಗಳನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವವನ್ನು ನೀಡಲಾಗಿದೆ.