ಯಲ್ಲಾಪುರ: ಪಟ್ಟಣದ ರವೀಂದ್ರ ನಗರದಲ್ಲಿರುವ ಗ್ರಾಮದೇವಿ ಜಾತ್ರಾ ವಿಸರ್ಜನಾ ಗದ್ದುಗೆ ಯಾವುದೇ ರೀತಿಯಲ್ಲಿ ಹೊರಗಿನವರು ಬಳಸದಂತೆ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳಲು ಗ್ರಾಮದೇವಿ ದೇವಸ್ಥಾನದ ಆಡಳಿತ ಸಮಿತಿ ಸಮ್ಮತಿ ಸೂಚಿಸಿದೆ.
ಇತ್ತೀಚಿಗೆ ರವೀಂದ್ರ ನಗರ ನಿವಾಸಿಗಳು ಗ್ರಾಮ ದೇವಿ ಗದ್ದುಗೆಗೆ ಕಾಂಪೌ0ಡ್ ನಿರ್ಮಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕೆಂದು ಅಲ್ಲಿಯೇ ಸಭೆ ಸೇರಿ ಪಟ್ಟಣ ಪಂಚಾಯಿತಿಯವರಿಗೆ ಆಗ್ರಹಿಸಿದ್ದರು. ಈ ಗುರುತು ಗುರುವಾರ ಸಚಿವ ಶಿವರಾಮ ಹೆಬ್ಬಾರ್, ಗ್ರಾಮದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಭಟ್, ಸಮಿತಿಯ ಪ್ರಮುಖರಾದ ಬಾಲಕೃಷ್ಣ ನಾಯಕ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುನಂದಾ ದಾಸ್, ರವೀಂದ್ರ ನಗರ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ, ಹಾಗೂ ಇನ್ನಿತರ ರೊಂದಿಗೆ ಸಭೆ ನಡೆಸಿ ಗ್ರಾಮದೇವಿ ವಿಸರ್ಜನಾ ಗದ್ದುಗೆ ಕೂಡಲೇ ಕಾಂಪೌ0ಡ್ ನಿರ್ಮಿಸಿ ಗೇಟ್ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದರು.
ಸಚಿವರ ಸೂಚನೆಗೆ ಒಪ್ಪಿಕೊಂಡ ಗ್ರಾಮದೇವಿ ದೇವಸ್ಥಾನದ ಸಮಿತಿಯವರು , ತಮ್ಮ ಸಮಿತಿ ವತಿಯಿಂದಲೇ ರಕ್ಷಣಾ ಕಾಂಪೌ0ಡ್ ಕಟ್ಟಿಕೊಂಡು ಗೇಟ್ ಅಳವಡಿಸಿಕೊಳ್ಳುವುದಾಗಿ ಸಚಿವರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯ್ ಮಿರಾಶಿ, ಬಿಜೆಪಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಪ್ರಧಾನ ಕಾರ್ಯದರ್ಶಿ ಶಿರೀಶ ಪ್ರಭು, ಪ್ರಮುಖರಾದ ಮುರಳಿ ಹೆಗಡೆ, ಉಮೇಶ್ ಭಾಗ್ವಾತ ಮುಂತಾದವರು ಇದ್ದರು.
ಪವಿತ್ರವಾದ ಗ್ರಾಮದೇವಿ ಜಾತ್ರಾ ವಿಸರ್ಜನಾ ಗದ್ದುಗೆ ತೆರೆದ ವ್ಯವಸ್ಥೆಯಲ್ಲಿ ಇರುವುದರಿಂದ ಪ್ರಾಣಿಗಳು ಹಾಗೂ ಕೆಲವೊಂದು ಜನ ಗದ್ದುಗೆಯ ಮಹತ್ವವನ್ನು ಅರಿಯದೆ ಬಳಸಿಕೊಳ್ಳುವ ಕಾರಣಕ್ಕಾಗಿ ರವೀಂದ್ರ ನಗರದ ಜನ ಅಸಮಾಧಾನಗೊಂಡಿದ್ದರು. ವ್ಯವಸ್ಥೆಯನ್ನು ಸರಿಪಡಿಸಿರುವ ಸಚಿವ ಶಿವರಾಮ್ ಹೆಬ್ಬಾರ್, ದೇವಸ್ಥಾನ ಕಮಿಟಿಯ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಭಟ್, ಸಮಿತಿಯ ಪ್ರಮುಖರಾದ ಬಾಲಕೃಷ್ಣ ನಾಯಕ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುನಂದಾ ದಾಸ್ ಮುಖ್ಯಾಧಿಕಾರಿ ಸಂಗನಬಸಯ್ಯ ಮುಂತಾದವರಿಗೆ ಸ್ಥಳೀಯ ಸದಸ್ಯ ಸೋಮೇಶ್ವರ ನಾಯ್ಕ ಹಾಗೂ ರವೀಂದ್ರ ನಗರ ನಿವಾಸಿಗಳು ಧನ್ಯವಾದಗಳು ಸಲ್ಲಿಸಿದ್ದಾರೆ.